ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: 12 ವರ್ಷಗಳ ಬಳಿಕ ಗ್ರಾಮಕ್ಕೆ ವಾಪಸಾದ ವ್ಯಕ್ತಿ

Last Updated 19 ಫೆಬ್ರುವರಿ 2023, 3:04 IST
ಅಕ್ಷರ ಗಾತ್ರ

ಕಲಬುರಗಿ: ಹನ್ನೆರಡು ವರ್ಷಗಳ ಹಿಂದೆ ಲಾಡ ಚಿಂಚೋಳಿ ಗ್ರಾಮದಿಂದ ಕಾಣೆಯಾಗಿದ್ದ ಚಂದ್ರಕಾಂತ ಕಲವಾಣಿ ಹರವಾಳ (45) ಎಂಬುವವರನ್ನು ಕೇರಳದ ಕೊಲ್ಲಂನ ಪಠಣಪುರಂನ ಗಾಂಧಿಭವನ ಸ್ವಯಂ ಸೇವಾ ಸಂಸ್ಥೆಯು ಪತ್ತೆ ಹಚ್ಚಿ ಕರೆತಂದಿದೆ.

ಚಂದ್ರಕಾಂತ ಅವರು ಕೊಲ್ಲಂನ ರಸ್ತೆಯಲ್ಲಿ ಅಸ್ವಸ್ಥಗೊಂಡಿದ್ದನ್ನು ಪತ್ತೆ ಹಚ್ಚಿದ ಪೊಲೀಸರು ಅವರನ್ನು ನಿರಾಶ್ರಿತರ ಕೇಂದ್ರಕ್ಕೆ ದಾಖಲಿಸಿದ್ದರು. ಅವರ ಬಗ್ಗೆ ಮಾಹಿತಿ ಪಡೆದ ಗಾಂಧಿನಗರ ಸಂಸ್ಥೆಯವರು ಕೌನ್ಸೆಲಿಂಗ್ ನಡೆಸಿ ಅವರ ವಿಳಾಸವನ್ನು ಪತ್ತೆ ಹಚ್ಚಿದರು.

ಕೇರಳದಿಂದ ಬಂದ ತಂಡದವರು ನರೋಣಾ ಪೊಲೀಸರ ಸಮ್ಮುಖದಲ್ಲಿ ಚಂದ್ರಕಾಂತ ಅವರ ಪತ್ನಿ ಗುರುಬಾಯಿ ಅವರಿಗೆ ಒಪ್ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT