ಜೇವರ್ಗಿ: ತಾಲ್ಲೂಕಿನ ಸುಕ್ಷೇತ್ರ ಮಾವನೂರ ಗ್ರಾಮದ ಆರಾಧ್ಯದೈವ ಧರ್ಮರಾಯ ದೇವರ ಜಾತ್ರಾ ಮಹೋತ್ಸವ ಅಂಗವಾಗಿ ಶನಿವಾರ ಸಂಜೆ ಅದ್ದೂರಿ ರಥೋತ್ಸವ ಜರುಗಿತು.

ಮಠದ ಪೀಠಾಧಿಪತಿ ಅಮೋಘಸಿದ್ದ ಮುತ್ಯಾ ಅವರ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಶುಕ್ರವಾರ ರಾತ್ರಿ 10.30ಕ್ಕೆ ಹರವಾಳ ಗ್ರಾಮದ ಹತ್ತಿರದ ಭೀಮಾನದಿಯಲ್ಲಿ ಗಂಗಾಸ್ನಾನ, ಶನಿವಾರ ಬೆಳಿಗ್ಗೆ 7.30ಕ್ಕೆ ಹನುಮಾನ ಮಂದಿರದಿಂದ ಧರ್ಮರಾಯ ದೇವಸ್ಥಾನದ ವರೆಗೆ ಅದ್ದೂರಿ ಪಲ್ಲಕ್ಕಿ ಉತ್ಸವ ಜರುಗಿತು. ಸಂಜೆ 6ಕ್ಕೆ ಸಹಸ್ರಾರು ಭಕ್ತರ ಜಯಘೋಷದ ನಡುವೆ ಭವ್ಯ ರಥೋತ್ಸವ ಜರುಗಿತು.

ಭಕ್ತರು ರಥದ ಮೇಲೆ ಬಾಳೆಹಣ್ಣು, ಉತ್ತತ್ತಿ ಎಸೆದು ಹರಕೆ ತೀರಿಸಿದರು. ರಾತ್ರಿ ಭಜನಾ ಪದ, ಗೀಗಿ ಪದ, ಡೊಳ್ಳಿನ ಪದಗಳ ಕಾರ್ಯಕ್ರಮ ನಡೆಯಿತು. ಜಾತ್ರೆಗೆ ಬಂದ ಭಕ್ತಾಧಿಗಳಿಗೆ ಅನ್ನ ಪ್ರಸಾದ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.

ಗೊಲ್ಲಾಳಪ್ಪ ಮುತ್ಯಾ, ಮಲ್ಲಿಕಾರ್ಜುನ ಮುತ್ಯಾ, ಧರ್ಮರಾಯ ಮುತ್ಯಾ, ಪ್ರಮುಖರಾದ ಮಹಾದೇವಪ್ಪ ಜೇವರ್ಗಿ, ಬಸವರಾಜ ಸಾಹು ಅರಕೇರಿ, ಸಿದ್ದಪ್ಪ ಸೀತಾಳ, ಸಾಹೇಬಗೌಡ ಬಿರೇದಾರ, ಶರಣಗೌಡ ಬಿರೇದಾರ, ದೊಡ್ಡಪ್ಪಗೌಡ ಪಾಟೀಲ, ನಾಗಣ್ಣ ಕರ್ಜಗಿ, ಬಸವರಾಜ ಕೋಳಕೂರ, ಚಂದ್ರಕಾಂತ ಕುಲಕರ್ಣಿ, ಬಾಪುಗೌಡ ಪಾಟೀಲ, ದೂಳಪ್ಪಗೌಡ ಬಿರೇದಾರ, ಮಾಳಪ್ಪ ಕೋಳಕೂರ, ಧೂಳಪ್ಪ ಹುಲಕಲ್, ಶೇಕಪ್ಪ ಹೇರೂರ, ಭೀಮಶ್ಯಾ ಚಾಮನಾಳ, ಬಸಯ್ಯ ಹಿರೇಮಠ ಸೇರಿದಂತೆ ಸಹಸ್ರಾರು ಭಕ್ತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.