ಕಲಬುರಗಿ: ‘ಸಂವಿಧಾನದ 371 (ಜೆ) ಜಾರಿಯ ದಶಮಾನೋತ್ಸವ ಸಂದರ್ಭದಲ್ಲಿ 371 (ಜೆ) ಕಲಂ ಮತ್ತು ಕಲ್ಯಾಣದ ಅಭಿವೃದ್ಧಿ ಕುರಿತು ಕಲ್ಯಾಣ ಕರ್ನಾಟಕ ಪ್ರದೇಶದಾದ್ಯಂತ ಜಾಗೃತಿ ಅಭಿಯಾನ ನಡೆಸಬೇಕು’ ಎಂದು ಖಾಜಾ ಬಂದಾನವಾಜ್ ದರ್ಗಾದ ಮುಖ್ಯಸ್ಥ ಸೈಯದ್ ಮುಹಮ್ಮದ್ ಅಲಿ ಅಲ್ ಹುಸೇನಿ ಹೇಳಿದರು.

ಕೆಬಿಎನ್ ದರ್ಗಾದಲ್ಲಿ ಭಾನುವಾರ ಭೇಟಿಯಾದ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಏಳು ಜಿಲ್ಲೆಗಳಲ್ಲಿ ಹೋರಾಟ ಸಮಿತಿ ವತಿಯಿಂದ ಜಾಗೃತಿ ಅಭಿಯಾನ ಹಮ್ಮಿಕೊಳ್ಳಬೇಕು. ಇದಕ್ಕೆ ಕೆಬಿಎನ್ ಸಂಸ್ಥೆ ಹಾಗೂ ವಿಶ್ವವಿದ್ಯಾಲಯವು ಸಂಪೂರ್ಣ ಸಹಕಾರ ನೀಡಲಿದೆ’ ಎಂದರು.

‘ಕೆಬಿಎನ್ ಸಂಸ್ಥೆ ವತಿಯಿಂದ ಶಿಕ್ಷಣ ಸಂಸ್ಥೆಗಳ, ಕಾಲೇಜುಗಳ ಪ್ರಮುಖರ ಹಾಗೂ ಇತರೆ ಕ್ಷೇತ್ರಗಳ ಗಣ್ಯರ ಸಭೆಯನ್ನು ಶೀಘ್ರವೇ ಕರೆಯಲಾಗುವುದು’ ಎಂದು ಹೇಳಿದರು.

ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ, ಸಮಿತಿಯ ಪ್ರಮುಖರಾದ ಬಸವರಾಜ ಕುಮನೂರ, ಮಾಜಿದ್ ದಾಗಿ, ರೌಫ್ ಖಾದ್ರಿ, ಅಸ್ಲಂ ಚೌಂಗೆ, ಮಂಜೂರಿ ಡೆಕ್ಕನ್ ಸೇರಿ ಹಲವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.