ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

30ರಂದು ಮೇಯರ್, ಉಪಮೇಯರ್ ಚುನಾವಣೆ

Published 11 ಜುಲೈ 2024, 6:57 IST
Last Updated 11 ಜುಲೈ 2024, 6:57 IST
ಅಕ್ಷರ ಗಾತ್ರ

ಕಲಬುರಗಿ: ಇಲ್ಲಿನ ಮಹಾನಗರ ಪಾಲಿಕೆಯ 22ನೇ ಅವಧಿಯ ಮೇಯರ್ ಮತ್ತು ಉಪಮೇಯರ್ ಸ್ಥಾನಗಳ ಚುನಾವಣೆಯು ಜುಲೈ 30ರಂದು ನಡೆಯಲಿದೆ.

ಮೇಯರ್ ಸ್ಥಾನ ಪರಿಶಿಷ್ಟ ಜಾತಿಗೆ ಹಾಗೂ ಉಪಮೇಯರ್ ಸ್ಥಾನ ಬಿಸಿಎ (2ಎ) ವರ್ಗಕ್ಕೆ ಮೀಸಲಾಗಿದೆ. 2023ರ ಮಾರ್ಚ್ 23ರಂದು ಮೇಯರ್ ವಿಶಾಲ್ ದರ್ಗಿ ಹಾಗೂ ಉಪಮೇಯರ್ ಶಿವಾನಂದ ಪಿಸ್ತಿ ಅವರ ಅಧಿಕಾರ ಅವಧಿ ಮುಕ್ತಾಯವಾಗಲಿದೆ.

16 ತಿಂಗಳ ಬಳಿಕ ನಗರದ ‘ಪ್ರಥಮ ಪ್ರಜೆ’ಯ ಚುನಾವಣೆಗಾಗಿ ‘ಕೈ’ ಮತ್ತು ‘ಕಮಲ’ ಪಾಳೆಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಬಿಜೆಪಿಗೆ ಜೆಡಿಎಸ್‌ನ ನಾಲ್ವರು ಸದಸ್ಯರ ಮೈತ್ರಿಯ ಬಲವಿದೆ.

55 ಸದಸ್ಯ ಬಲದ ಪಾಲಿಕೆಯಲ್ಲಿ ನಗರ ವ್ಯಾಪ್ತಿಯ ಶಾಸಕರು, ಸಂಸದರು ಮತ್ತು ವಿಧಾನ ಪರಿಷತ್‌ ಸದಸ್ಯರು ಮತದ ಹಕ್ಕು ಪಡೆದಿದ್ದಾರೆ. 55 ಸದಸ್ಯ ಬಲದ ಪಾಲಿಕೆಯಲ್ಲಿ ಕಾಂಗ್ರೆಸ್‌ನ 27 ಪಾಲಿಕೆ ಸದಸ್ಯರು ಹಾಗೂ 6 ಜನಪ್ರತಿನಿಧಿಗಳು, ಬಿಜೆಪಿಯ 22 ಸದಸ್ಯರು ಹಾಗೂ ನಾಲ್ವರು ಜನಪ್ರತಿನಿಧಿಗಳು, ಜೆಡಿಎಸ್ 4 ಸದಸ್ಯರು ಮತ್ತು ಒಬ್ಬರು ಪಕ್ಷೇತರರು ಇದ್ದಾರೆ.

36ರ ವಾರ್ಡ್‌ ಸದಸ್ಯ ಶಂಭುಲಿಂಗ ಬಳಬಟ್ಟಿ ಸದಸ್ಯತ್ವ ಇದ್ದರೂ ಮತದ ಹಕ್ಕು ಹೊಂದಿಲ್ಲ. 24ನೇ ವಾರ್ಡ್‌ನ ಪ್ರಿಯಾಂಕಾ ಭೋವಿ ಸದಸ್ಯತ್ವ ಕುರಿತು ತಡೆಯಾಜ್ಞೆ ಇದ್ದುದರಿಂದ ಮತ ಚಲಾಯಿಸುವಂತಿಲ್ಲ.

ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಸಂಸದ ರಾಧಾಕೃಷ್ಣ ದೊಡ್ಡಮನಿ, ಶಾಸಕರಾದ ಕನೀಜ್ ಫಾತಿಮಾ, ಅಲ್ಲಮಪ್ರಭು ಪಾಟೀಲ, ಬಸವರಾಜ ಮತ್ತಿಮಡು, ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ. ನಮೋಶಿ, ಸುನಿಲ್ ವಲ್ಲ್ಯಾಪುರೆ, ಬಿ.ಜಿ. ಪಾಟೀಲ, ತಿಪ್ಪಣ್ಣಪ್ಪ ಕಮಕನೂರ ಮತ್ತು ಡಾ. ಚಂದ್ರಶೇಖರ ಪಾಟೀಲ ಹುಮನಾಬಾದ್‌ ಅವರು ಮತದಾನದ ಹಕ್ಕು ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT