ಶುಕ್ರವಾರ, ಮೇ 27, 2022
30 °C

ಗಡಿಕೇಶ್ವಾರದಲ್ಲಿ ಮತ್ತೆ ಲಘು ಭೂಕಂಪನ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಗಡಿಕೇಶ್ವಾರ ಗ್ರಾಮದಲ್ಲಿ ಗುರುವಾರ ಮತ್ತೆ ಲಘು ಕಂಪನ‌ ಸಂಭವಿಸಿದೆ. 

ಮಧ್ಯಾಹ್ನ 1.20ಕ್ಕೆ ಭೂಮಿಯಿಂದ ಸದ್ದು ಕೇಳಿ ಬಂತು ಎಂದು ಗ್ರಾಮದ ರೈತ ಮುಖಂಡ ಸಂತೋಷ ಕುಮಾರ ಬಳಿ ಪ್ರಜಾವಾಣಿಗೆ ತಿಳಿಸಿದರು.

'ಆಗ ತಕ್ಷಣ ಬೇರೆಯವರಿಗೆ ಕರೆ ಮಾಡಿ ಕೇಳಿದ್ದೇನೆ. ಅವರು ಶಬ್ದ ಬಂದಿದ್ದು ಹಾಗೂ ಲಘು ಕಂಪನದ‌ ಅನುಭವ ತಮಗೂ ಅಯಿತು ಎಂದಿದ್ದಾರೆ.

ನಿರಂತರ ಲಘು ಕಂಪನದಿಂದ ಗ್ರಾಮಸ್ಥರು ಆತಂಕದಲ್ಲಿಯೇ ದಿನದೂಡುತ್ತಿದ್ದಾರೆ. ಮನೆ ಹೊರಗಡೆಯೇ ಕಾಲ‌ಕಳೆಯುವುದು ಅನಿವಾರ್ಯವಾಗಿದೆ' ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು