ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ಕಿ ಹರಿದ ಮುಲ್ಲಾಮಾರಿ ನದಿ

ಚಂದ್ರಂಪಳ್ಳಿ, ನಾಗರಾಳ ಜಲಾಶಯ ನೀರು ಹೊರಕ್ಕೆ
Last Updated 17 ಸೆಪ್ಟೆಂಬರ್ 2020, 8:57 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನ ಭಾರಿ ಮಳೆ ಸುರಿದಿದ್ದರಿಂದ ಚಂದ್ರಂಪಳ್ಳಿ ಜಲಾಶಯದಿಂದ 5,495.49 ಕ್ಯುಸೆಕ್ ನೀರು ಹೊರಬಿಡಲಾಗುತ್ತಿದೆ. ಇಷ್ಟೇ ಪ್ರಮಾಣದ ಒಳ ಹರಿವು ಇದೆ.

ಕೆಳದಂಡೆ ಮುಲ್ಲಾಮಾರಿ ಯೋಜನೆಯ ನಾಗರಾಳ ಜಲಾಶಯದಿಂದ 2,500 ಕ್ಯುಸೆಕ್ ನೀರು ಬಿಡಲಾಗಿದೆ. ಇದರಿಂದ ಮುಲ್ಲಾಮಾರಿ ನದಿ ಪಾತ್ರದಲ್ಲಿ ತುರ್ತು ಪರಿಸ್ಥಿತಿ ಎದುರಾಗಿದ್ದು, ಜನರು ನಿದ್ದೆ ಬಿಟ್ಟು ಸುರಕ್ಷಿತ ತಾಣಗಳಿಗೆ ತಡಕಾಡುತ್ತಿದ್ದಾರೆ.

ಚಂದ್ರಂಪಳ್ಳಿ ಮತ್ತು ನಾಗರಾಳ ಜಲಾಶಯಗಳ ನೀರು ಚಿಂಚೋಳಿ ಪಟ್ಟಣದ ಹಿಂದುಗಡೆ ಐನೋಳ್ಳಿ ದೇಗಲಮಡಿ ಮಧ್ಯೆ ಸಂಗಮವಾಗಿ ಮುಂದೆ ಹರಿಯುತ್ತದೆ. ಇದರಿಂದ ಚಿಂಚೋಳಿ ಮತ್ತು ಕೆಳ ಭಾಗದ ಚಂದಾಪುರ, ಅಣವಾರ, ಭಕ್ತಂಪಳ್ಳಿ, ಗರಕಪಳ್ಳಿ, ಇರಗಪಳ್ಳಿ, ಬುರುಗಪಳ್ಳಿ, ಗಣಾಪುರ, ಕರ್ಚಖೇಡ ಹಾಗೂ ಚತ್ರಸಾಲ್ ಗ್ರಾಮಗಳು ಪ್ರವಾಹದಿಂದ ಬಾಧಿತವಾಗಿವೆ.

ನದಿ ನೀರು ಅಕ್ಕಪಕ್ಕದ ಹೊಲಗಳಿಗೆ ನುಗ್ಗಿದೆ. ನೀರಿನ ಪ್ರಮಾಣ ಹೆಚ್ಚಾದರೆ ಗ್ರಾಮಗಳಿಗೆ ನುಗ್ಗುವ ಆತಂಕವಿದೆ. ಚಂದ್ರಂಪಳ್ಳಿ ಹಾಗೂ ನಾಗರಾಳ ಜಲಾಶಯಗಳಲ್ಲದೆ ಖಾನಾಪುರ, ಐನಾಪುರ, ಸಾಲೇಬೀರನಹಳ್ಳಿ, ಹಸರಗುಂಡಗಿ, ತುಮಕುಂಟಾ, ಚಿಕ್ಕಲಿಂಗದಳ್ಳಿ, ನಾಗಾಈದಲಾಯಿ, ಕೊಳ್ಳೂರು ಕೆರೆಗಳು ಭರ್ತಿಯಾಗಿ ಉಕ್ಕೇರಿ ಹರಿಯುತ್ತಿವೆ.

ಈ ನೀರು ಕೂಡ ತೊರೆ ಹಳ್ಳ ಹಾಗೂ ಉಪ ನದಿಗಳ ಮೂಲಕ ಮುಲ್ಲಾಮಾರಿ ಸೇರುವುದರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಮಳೆ ಮುಂದುವರಿದಿದ್ದು ಎರಡೂ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರ ಬಿಡುವ ಸಾಧ್ಯತೆಯಿದೆ.

ಮಂಗಳವಾರ ರಾತ್ರಿ ನಾರಾಳ ಜಲಾಶಯಕ್ಕೆ 540 ಕ್ಯುಸೆಕ್‌ ಒಳ ಹರಿವಿದ್ದು 580 ಕ್ಯುಸೆಕ್ ನೀರು ನದಿಗೆ ಬಿಡಲಾಗಿತ್ತು. ಜತೆಗೆ ನಾಗರಾಳ ಜಲಾಶಯಕ್ಕೆ 3,845 ಕ್ಯುಸೆಕ್ ಒಳಹರಿವಿದ್ದು 4,554 ಕ್ಯುಸೆಕ್ ನೀರು ಹೊರ ಬಿಡಲಾಗಿದೆ. ಇದರಿಂದ ಇಡೀ ದಿನ ಮುಲ್ಲಾಮಾರಿ ನದಿಯಲ್ಲಿ ಎದೆಮಟ್ಟ ಪ್ರವಾಹ ಗೋಚರಿಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT