ಗುರುವಾರ , ಡಿಸೆಂಬರ್ 3, 2020
20 °C

ಹಣದ ವ್ಯವಹಾರ: ಸ್ನೇಹಿತನ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಈಚೆಗೆ ಕಾಣೆಯಾಗಿದ್ದ ವ್ಯಕ್ತಿಯೊಬ್ಬರ ಶವ ತಾಲ್ಲೂಕಿನ ಕುರಿಕೋಟ ಸೇತುವೆ ಬಳಿಯ ಬೆಣ್ಣೆತೊರ ನದಿಯಲ್ಲಿ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನೂ ಬಂಧಿಸಿದ್ದಾರೆ.‌

ಗೌಸುದ್ದೀನ್ (42) ಕೊಲೆಯಾದ ವ್ಯಕ್ತಿ. ಆರೋಪಿಗಳಾದ ಫಯಾಜ್, ನಿಜಾಮ್ ಬಾವರ್ಸಿ ಮತ್ತು ವಾಜೀದ್ ಬಂಧಿತರು.

‘ಗೌಸುದ್ದೀನ್ ಮತ್ತು ಆರೋಪಿಗಳು ಸೇರಿಕೊಂಡ ಹಳೆ ವಾಹನಗಳನ್ನು ಮಾರಾಟದ ವ್ಯವಹಾರ ಮಾಡುತ್ತಿದ್ದರು. ಫಯಾಜ್ ಹತ್ತಿರ ಗೌಸುದ್ದೀನ್ ₹ 2 ಲಕ್ಷ ಹಣ ಸಾಲ ಪಡೆದುಕೊಂಡಿದ್ದರು. ಈ ಹಣ ನೀಡುವಂತೆ ಫಯಾಜ್ ಕೇಳಿದ್ದ. ಆದರೆ, ಗೌಸುದ್ದೀನ್ ಕೊಡಲು ನಿರಾಕರಿಸಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಅ.24ರಂದು ಎಲ್ಲರೂ ಸೇರಿಕೊಂಡಿ ಒಟ್ಟಿಗೆ ಊಟ ಮಾಡುವ ನೆಪದಲ್ಲಿ ಗೌಸುದ್ದೀನ್ ಅನ್ನು ಕರೆಸಿಕೊಂಡು ಕೊಲೆ ಮಾಡಿದ್ದಾರೆ. ನಂತರ ಬೆಣ್ಣೆತೊರ ನದಿಯಲ್ಲಿ ಮೃತದೇಹವನ್ನು ಎಸದಿದ್ದಾರೆ. ಗೌಸುದ್ದೀನ್ ಕಾಣೆಯಾದ ದಿನ ಆರೋಪಿಗಳು ಜೊತೆಗಿದ್ದ ಕಾರಣ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿ, ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ನಗರದ ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು