ಕಲಬುರ್ಗಿ: ಕೇಂದ್ರ ಸರ್ಕಾರದ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯವು ಇಂಧನ ಉಳಿತಾಯಕ್ಕೆನೀಡುವ ರಾಷ್ಟ್ರೀಯಪ್ರಶಸ್ತಿಯು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಒಲಿದಿದ್ದು, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಜಹೀರಾ ನಸೀಂ ಅವರು ಇತ್ತೀಚೆಗೆ ದೆಹಲಿಯಲ್ಲಿ ಪ‍್ರಶಸ್ತಿ ಸ್ವೀಕರಿಸಿದರು.

ಅಕ್ಟೋಬರ್–2017ರಿಂದ ಸೆಪ್ಟೆಂಬರ್–2018ರ ಅವಧಿಯ ಹೋಲಿಕೆಗೆ ಅಕ್ಟೋಬರ್–2018ರಿಂದ ಸೆಪ್ಟೆಂಬರ್–2019ರ ಅವಧಿಯಲ್ಲಿ ಉತ್ತಮ ಇಂಧನ ಉಳಿತಾಯ ಸಾಧನೆ ಮಾಡಿದ್ದಕ್ಕಾಗಿ ಈ ಪ್ರಶಸ್ತಿ ನೀಡಲಾಯಿತು. ಈ ಅವಧಿಯಲ್ಲಿ 6.02 ಲಕ್ಷ ಲೀಟರ್ ಇಂಧನ ಕಡಿಮೆ ಬಳಸಿ ₹ 3.65 ಕೋಟಿ ಉಳಿತಾಯ ಮಾಡಲಾಗಿರುತ್ತದೆ. ಅಲ್ಲದೇ ರಾಜ್ಯ ಮಟ್ಟದಲ್ಲಿ ಉತ್ತಮ ಇಂಧನ ಉಳಿತಾಯ ಸಾಧನೆ ಮಾಡಿದ ಘಟಕಗಳಾದ ವಿಜಯಪುರ ಘಟಕ–2, ಬಸವನ ಬಾಗೇವಾಡಿ ಹಾಗೂ ಸಿಂದಗಿ ಘಟಕಗಳು ಪ್ರಶಸ್ತಿ ಪಡೆದವು.

ರಾಷ್ಟ್ರ ಮಟ್ಟದ ಪ್ರಶಸ್ತಿಯು ₹ 5 ಲಕ್ಷ ನಗದು ಬಹುಮಾನ, ಪ್ರಶಸ್ತಿ ಫಲಕ ಹಾಗೂ ಪ್ರಮಾಣ ಪತ್ರ ಹೊಂದಿದೆ. ರಾಜ್ಯ ಮಟ್ಟದ ಸಾಧನೆಗೆ ಪ್ರತಿ ಘಟಕಕ್ಕೆ ₹ 50 ಸಾವಿರ ನಗದು ಬಹುಮಾನ, ಪ್ರಶಸ್ತಿ ಫಲಕ ಹಾಗೂ ಪ್ರಮಾಣ ಪತ್ರ ನೀಡಲಾಯಿತು.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಮುಖ್ಯ ಎಂಜಿನಿಯರ್ ಎಂ.ಸಿ.ನಂಜುಂಡಪ್ಪ ಹಾಗೂ ಬಸವನ ಬಾಗೇವಾಡಿಯ ಘಟಕ ವ್ಯವಸ್ಥಾಪಕ ವಿನಾಯಕಸ್ವಾಮಿ ಸಾಲಿಮಠ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿದ್ದರು.

ಅದೆ ದಿನ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಜಯಪುರ ಘಟಕ–2ರ ಘಟಕ ವ್ಯವಸ್ಥಾಪಕ ಆನಂದ ಬಿ ಹೂಗಾರ, ಸಿಂದಗಿ ಘಟಕ ವ್ಯವಸ್ಥಾಪಕ ಎ.ಎಚ್.ಮದಬಾವಿ ಹಾಗೂ ಬಸವನ ಬಾಗೇವಾಡಿ ಘಟಕದ ಪಾರುಪತ್ತೆಗಾರ ಹುಸೇನ ಸಾಬ್ ನದಾಫ ಪ್ರಶಸ್ತಿ ಸ್ವೀಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.