ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫಜಲಪುರ: ಓಮೈಕ್ರಾನ್ ಜಾಗೃತಿ ಕಾರ್ಯಕ್ರಮ

Last Updated 12 ಜನವರಿ 2022, 4:45 IST
ಅಕ್ಷರ ಗಾತ್ರ

ಅಫಜಲಪುರ: ತಾಲ್ಲೂಕಿನ ಚೌಡಾಪೂರ ಗ್ರಾಮದಲ್ಲಿ ಮಂಗಳವಾರ ಗ್ರಾಮ ಪಂಚಾಯಿತಿ ಹಾಗೂ ಸಾಮ್ರಾಟ್ ಅಶೋಕ ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಜಾಗೃತಿ ಕಾರ್ಯಕ್ರಮ ನಡೆಯಿತು.

ಶೌಚಾಲಯ ಬಳಕೆ, ಒಣ ಕಸ ಹಾಗೂ ಹಸಿ ಕಸಗಳ ಬೇರ್ಪಡಿಸುವಿಕೆ, ಧೂಮಪಾನ, ಮಧ್ಯಪಾನ, ಸರಾಯಿ, ಕೊರೊನಾ, ಓಮೈಕ್ರಾನ್ ಮುಂತಾದ ವಿಷಯಗಳ ಕುರಿತು ಉಪನ್ಯಾಸ, ಸ್ಟಿಕ್ಕರ್ ಹಾಗೂ ಬೀದಿ ನಾಟಕ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರೇಮ ದೊಡ್ಡಮನಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಂಗೀತ ರಾಜು ಗುತ್ತೇದಾರ ಸ್ಟಿಕರ್ ಬಿಡುಗಡೆ ಮಾಡಿದರು.

ಸಾಮ್ರಾಟ್ ಅಶೋಕ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಯಲ್ಲಪ್ಪ ಮ್ಯಾಕೇರಿ ಮಲ್ಲಾಬಾದ, ಗ್ರಾಮ ಪಂಚಾಯಿತಿ ಸದಸ್ಯ ಅಶೋಕ್ ಪೂಜಾರಿ, ಪ್ರಕಾಶ್ ಪಾಟೀಲ್, ಖಾಜಾಸಾಬ್, ಮೋಬಿನ್ ಪಟೇಲ್, ಶೀವು ಪಾಟೀಲ್, ಚಿದಾನಂದ ತೆಳಕೇರಿ, ಸುಭಾಷ ಯಳಸಂಗಿ
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT