ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಉಳ್ಳಾಗಡ್ಡಿ ದರ ಕುಸಿತ

Published 6 ಫೆಬ್ರುವರಿ 2024, 14:14 IST
Last Updated 6 ಫೆಬ್ರುವರಿ 2024, 14:14 IST
ಅಕ್ಷರ ಗಾತ್ರ

ಕಲಬುರಗಿ: ಸಾಮಾನ್ಯವಾಗಿ ಬೇಸಿಗೆಯಲ್ಲಿ ಕಡಿಮೆಯಾಗುತ್ತಿದ್ದ ಈರುಳ್ಳಿ ದರ ಈ ವರ್ಷ ಫೆಬ್ರುವರಿ ಆರಂಭದಲ್ಲೇ ಪಾತಾಳಕ್ಕೆ ಇಳಿಕೆಯಾಗಿದ್ದು, ರೈತರ ಕಣ್ಣಲ್ಲಿ ನೀರು ತರಿಸಿದೆ.

ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಕೆ.ಜಿಗೆ ₹50–₹60ಕ್ಕೆ ಮಾರಾಟವಾಗಿದ್ದ ಉಳ್ಳಾಗಡ್ಡಿ ಬೆಲೆ ಈಗ ಕೇವಲ ₹15–₹20 ಇದೆ. ಶನಿವಾರ (ಫೆ.3) ನಗರಕ್ಕೆ 27 ಸಾವಿರ ಕ್ವಿಂಟಲ್ ಆವಕವಾಗಿದ್ದು ಕ್ವಿಂಟಲ್‌ಗೆ ₹400–₹1500 ವರೆಗೂ ಮಾರಾಟವಾಗಿದ್ದು ರೈತರ ಬೇಬಿಗೆ ಕತ್ತರಿ ಹಾಕಿದೆ.

ದರ ಕಡಿಮೆಯಾಗಿದ್ದರೂ ನಗರದ ಪ್ರಮುಖ ವೃತ್ತ, ರಸ್ತೆ ಬದಿಯ ಚಿಲ್ಲರೆ ವ್ಯಾಪಾರಿಗಳು ಕೆ.ಜಿ ಈರುಳ್ಳಿಗೆ ₹30–₹40 ಹೇಳುತ್ತಿದ್ದಾರೆ. ಸೂಪರ್ ಮಾರುಕಟ್ಟೆ, ಕಣ್ಣಿ ಮಾರುಕಟ್ಟೆ, ತಾಜ್ ಸುಲ್ತಾನಪುರ ಮಾರುಕಟ್ಟೆಗಳಲ್ಲಿ ₹100ಗೆ 5 ಕೆ.ಜಿ ಉಳ್ಳಾಗಡ್ಡಿ ಮಾರಾಟ ಮಾಡಲಾಗುತ್ತಿದೆ.

‘ಕಣ್ಣಿ ಮಾರುಕಟ್ಟೆಯಲ್ಲಿ ಉಳ್ಳಾಗಡ್ಡಿ ದರ ಕಡಿಮೆ ಇದೆ, ನೀವ್ಯಾಕೆ ₹30 ಹೇಳುತ್ತಿದ್ದೀರಲ್ಲ’ ಎಂದು ‘ಪ್ರಜಾವಾಣಿ’ ಕೇಳಿದಾಗ, ‘ನಾವು ದಲ್ಲಾಳಿಯಿಂದ ತರುತ್ತೇವೆ, ಅವರು ಕೊಟ್ಟ ದರಕ್ಕೆ ನಮ್ಮ ಲಾಭ ಸೇರಿಸಿ ಮಾರಾಟ ಮಾಡುತ್ತೇವೆ. ಬೇಕಾದರೆ ₹100ಗೆ 4 ಕೆ.ಜಿ ಕೊಡುತ್ತೇನೆ ಅದಕ್ಕಿಂತ ಹೆಚ್ಚು ಆಗುವುದಿಲ್ಲ’ ಎಂದು ಚಿಲ್ಲರೆ ವ್ಯಾಪಾರಿಯೊಬ್ಬರು ಪ್ರತಿಕ್ರಿಯಿಸಿದರು.

‘ಸದ್ಯ ಮಾರುಕಟ್ಟೆಗೆ ಬಂದಿರುವುದು ಹಸಿ ಈರುಳ್ಳಿ. ಇದನ್ನು ಇಟ್ಟುಕೊಳ್ಳಲು ಆಗುವುದಿಲ್ಲ. ಬಹಳ ದಿನಗಳಾದರೆ ಕೆಟ್ಟುಹೋಗುತ್ತದೆ, ಹೀಗಾಗಿ ಪೂರೈಕೆ ಹೆಚ್ಚಾಗಿದೆ’ ಎಂದು ತರಕಾರಿ ವ್ಯಾಪಾರಿ ಸರ್ಫರಾಜ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT