ಜೇವರ್ಗಿ: ‘ಈ ದೇಶದಲ್ಲಿ 100 ಕೋಟಿಗೂ ಅಧಿಕ ಹಿಂದೂಗಳ ಜನಸಂಖ್ಯೆ ಇದ್ದರೂ, ಬೇರೆ ಯಾವ ರಾಷ್ಟ್ರಗಳೂ ನಮ್ಮನ್ನು ಸೇರಿಸಿಕೊಳ್ಳುವುದಿಲ್ಲ. ಹೀಗಾಗಿ ಈ ದೇಶವನ್ನು ಉಳಿಸಲು ಹಿಂದೂಗಳೆಲ್ಲ ಒಗ್ಗಟಾಗಬೇಕಿದೆ’ ಎಂದು ಶ್ರೀ ರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿದರು.

ತಾಲ್ಲೂಕಿನ ಕಾಸರಭೋಸಗಾ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಹಿಂದೂ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಮುಸ್ಲಿಮರಿಗೆ 57ಕ್ಕೂ ಹೆಚ್ಚು, ಕ್ರಿಶ್ಚಿಯನ್ನರಿಗೆ ನೂರಾರು ರಾಷ್ಟ್ರಗಳಿದ್ದು, ಹಿಂದೂಗಳ ಸುರಕ್ಷಿತವಾಗಿ ಬದುಕಲು ಭಾರತ ಮಾತ್ರ ಇದೆ. ಈ ದೇಶವನ್ನು ನಾವುಗಳು ಜಾತಿಯ ಆಧಾರದ ಮೇಲೆ ಒಡೆದು ಹಾಕುತ್ತಿರುವ ಪರಿಣಾಮ ಹಿಂದೂ ಯುವತಿಯರ ಮೇಲೆ ಲವ್ ಜಿಹಾದ್, ಗೋ ಹತ್ಯೆಯಂತಹ ಪ್ರಕರಣಗಳು ಹೆಚ್ಚಾಗುತ್ತಿವೆ’ ಎಂದು ಹೇಳಿದರು.

ಆಂದೋಲಾದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಸುಪ್ರಿಂಕೋರ್ಟ್ ಆದೇಶ ಉಲ್ಲಂಘನೆ ಮಾಡಿ ದಿನಕ್ಕೆ ಐದು ಬಾರಿ ಧ್ವನಿವರ್ಧಕ ಬಳಸಿ ಆಝಾನ್ ಕೂಗುವ ಮೂಲಕ ಶಬ್ದ ಮಾಲಿನ್ಯ ಉಂಟುಮಾಡುತ್ತಿದ್ದಾರೆ. ಹಿಂದೂಗಳ ಪೂಜಿಸುವ ಗೋವುಗಳನ್ನು ಉದ್ದೇಶ ಪೂರ್ವಕವಾಗಿ ಹತ್ಯೆ ಮಾಡಿ ಹಿಂದುಗಳ ಭಾವನೆಗೆ ಧಕ್ಕೆ ತರುತ್ತಿದ್ದಾರೆ. ಹಿಂದೂಗಳು ಸಂಘಟಿತರಾಗದಿದ್ದರೆ ಮುಂದಿನ ಪೀಳಿಗೆಗೆ ಭವಿಷ್ಯ ಇಲ್ಲ’ ಎಂದು ಹೇಳಿದರು.

ಸಭೆಯಲ್ಲಿ ಹಳ್ಳೆಪ್ಪ ಆಚಾರ್ಯ ಜೋಶಿ, ಸಿದ್ದಣ್ಣ ಹೂಗಾರ, ಹುಲ್ಲೇಶ, ಶ್ರೀ ರಾಮಸೇನೆಯ ತಾಲ್ಲೂಕ ಘಟಕದ ಅಧ್ಯಕ್ಷ ಮಲಕಣ್ಣ ಪೂಜಾರಿ ಚನ್ನೂರ, ಶಹಾಪೂರ ಘಟಕದ ಅಧ್ಯಕ್ಷ ಶಿವು ಶಹಪೂರ, ಈಶ್ವರ ಹಿಪ್ಪರಗಿ ಸೇರಿದಂತೆ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.