ಸೋಮವಾರ, ಆಗಸ್ಟ್ 15, 2022
28 °C
ಆದ್ಯತೆಯ ಮೇರೆಗೆ ನಾಮನಿರ್ದೇಶನ ಮಾಡಲು ಸಲಹೆ

ನಿವೃತ್ತಿ ದಿನವೇ ವಿವಿಧ ಸಂಸ್ಥೆಗಳ ಕಾರ್ಮಿಕರಿಗೆ ಪಿಂಚಣಿ ಸೌಲಭ್ಯ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಸೇವೆಯಿಂದ ನಿವೃತ್ತರಾದ ವಿವಿಧ ಸಂಸ್ಥೆಗಳ ಕಾರ್ಮಿಕರಿಗೆ ಆಳಂದ ರಸ್ತೆಯ ಕಾರ್ಮಿಕರ ಭವಿಷ್ಯ ನಿಧಿ ಕಚೇರಿಯಲ್ಲಿ ಗುರುವಾರ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ ಡಿ. ಹನುಮಂತಪ್ಪ ಪಿಂಚಣಿ ಸೌಲಭ್ಯದ ಆದೇಶ ಪತ್ರಗಳನ್ನು ವಿತರಿಸಿದರು.

ವಿಜಯಪುರದ ಬಿಎಲ್‌ಡಿಇ ಮೆಡಿಕಲ್ ಕಾಲೇಜಿನ ಮಲ್ಲಿಕಾರ್ಜುನ ಬಿಸನಾಳ, ವಿಜಯಪುರ ಸಿದ್ಧೇಶ್ವರ ಸಹಕಾರಿ ಬ್ಯಾಂಕಿನ ನಿವೃತ್ತ ಸಿಬ್ಬಂದಿ ಶ್ರೀಶೈಲ ತಡಲಗಿ, ನೀಲಕಂಠ ಕುಂಬಾರ, ಬೀದರ್‌ನ ಕಾಮನ್ ಕೇಡರ್ ಸಮಿತಿಯ ಶಂಕರ, ಸೇಡಂನ ವಾಸವದತ್ತಾ ಸಿಮೆಂಟ್ಸ್‌ನ ಮೊಹಮ್ಮದ್ ಯೂಸುಫ್, ಬೀದರ್‌ನ ಜೆಮಿನಿ ಗ್ರಾಫಿಕ್ಸ್‌ನ ಸಿದ್ರಾಮ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಾಗಯ್ಯ ಗುತ್ತೇದಾರ, ಶಿವಪ್ಪ, ಆರೀಫ್ ಪಾಷಾ, ಕಿಶನ್ ರಾವ್, ಹಜ್ರಾ ಬೇಗಂ, ಕಲಬುರ್ಗಿಯ ಹೆಲಿಕಾನ್ ಅಗ್ರೊ ಕೆಮಿಕಲ್ಸ್‌ನ  ಶಂಕರ ಬಿರಾದಾರ, ಮಳಖೇಡದ ಅಲ್ಟ್ರಾಟೆಕ್ ಸಿಮೆಂಟ್ಸ್‌ ಕಂಪನಿಯ ಸುಭಾಷ್ ಚಂದ್ರ, ಆಚಾಲಾಲ್ ಪ್ರಸಾದ್, ವೈಜನಾಥ ಗದ್ರೆ, ಅಬ್ದುಲ್ ಗಫೂರ್ ಹಾಗೂ ವಾಡಿಯ ಎಸಿಸಿ ಸಿಮೆಂಟ್ಸ್‌ನ ಮನ್ಸೂರ್ ಅಲಿ ಅವರಿಗೆ ಪಿಂಚಣಿ ಪಾವತಿ ಆದೇಶವನ್ನು ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಭವಿಷ್ಯನಿಧಿ ಆಯುಕ್ತ ಡಿ. ಹನುಮಂತಪ್ಪ, ‘ಕಾರ್ಮಿಕರ ಭವಿಷ್ಯ ‌ನಿಧಿ‌ ಸಂಘಟನೆಯು ತನ್ನ ಎಲ್ಲಾ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟಂತೆ ನಿವೃತ್ತಿಯಾಗುತ್ತಿರುವ ಭವಿಷ್ಯ ನಿಧಿ ಚಂದಾದಾರರಿಗೆ ಅವರ ನಿವೃತ್ತಿಯ ದಿನಾಂಕದಂದು ಪ್ರಯಾಸ ಕಾರ್ಯಕ್ರಮದ ಅಡಿಯಲ್ಲಿ ಪಿಂಚಣಿ‌ ಆದೇಶ ಪತ್ರವನ್ನು ನೀಡಲಾಗುತ್ತದೆ. ಕ್ಷೇತ್ರಿಯ ಕಾರ್ಯಾಲಯ ಕಲಬುರಗಿಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಭವಿಷ್ಯ ನಿಧಿ ಚಂದಾದಾರರು ಕೂಡಲೇ ತಮ್ಮ ಇ–ನಾಮಿನೇಷನ್ ಅನ್ನು ಕಡ್ಡಾಯವಾಗಿ ಏಕೀಕೃತ ಸದಸ್ಯ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಎಲ್ಲಾ ಭವಿಷ್ಯ ನಿಧಿ ಚಂದಾದಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಇ–ನಾಮಿನೇಷನ್‌ ಮಾಡಲು ಭವಿಷ್ಯ ನಿಧಿ ಚಂದಾದಾರರು ಸಕ್ರಿಯ ಮತ್ತು ಆಧಾರ್ ಲಿಂಕ್ ಆಗಿರುವ ಯುಎಎನ್‌ ನಂಬರ್, ಆಧಾರ್ ಲಿಂಕ್ ಮಾಡಿದ ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆಯ ವಿವರ ಮತ್ತು ನಾಮನಿರ್ದೇಶನ ಮಾಡುವವರ ಸ್ಕ್ಯಾನ ಮಾಡಿದ ಭಾವಚಿತ್ರ ಮತ್ತು ವಿಳಾಸದೊಂದಿಗೆ ನವೀಕರಿಸಬಹುದು. www.epdindia.gov.in ವೆಬ್‌ಸೈಟ್‌ಗೆ ಭೇಟಿ ನೀಡಿ  ನಾಮನಿರ್ದೇಶನ ಮಾಡಬಹುದು’ ಎಂದರು.

ಕಾರ್ಯಕ್ರಮದಲ್ಲಿ ಜಿ.ಎಂ. ಅಫ್ಸರ್, ಶಿವರಾಜ, ಕೃಷ್ಣ ಜಾಧವ, ಎ. ಉಮೇ ಅಯೆಮನ್, ಜಗನ್ನಾಥ, ನೂಕಲ ರಮೇಶ, ಕೇಶವರಾವ ಕುಲಕರ್ಣಿ, ಸುಜಯ ಬಿಸ್ವಾಸ್, ಪ್ರತಿಭಾ, ಸವಿತಾ ಬಳಗಲಿ ಹಾಗೂ ಚಿಂತಲಾ ಗೋಪಿ ಕೃಷ್ಣ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು