ಕಾಳಗಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಚಿಂಚೋಳಿ (ಎಚ್) ಗ್ರಾಮದಲ್ಲಿ ಟೈಲರ್ ಅಂಗಡಿಯೊಂದರ ಬಟ್ಟೆಗಳ ಚಿಂದಿಯಲ್ಲಿ ನಾಡಪಿಸ್ತೂಲ್, ಒಂದು ಜೀವಂತ, ಎರಡು ನಿಷ್ಕ್ರಿಯ ಗುಂಡುಗಳು ಪತ್ತೆಯಾಗಿವೆ.

ಮಾಳಪ್ಪ ಅಂಬಣ್ಣ ಹೂಗೊಂಡ ಟೈಲರ್ ವೃತ್ತಿ ಮಾಡುತ್ತಾರೆ. ಅವರು ಬಟ್ಟೆ ಚಿಂದಿ ಕಸವನ್ನು ಅಂಗಡಿ ಬಲಭಾಗದಿಂದ ಸ್ವಲ್ಪ ದೂರದಲ್ಲಿ ಬೆಂಕಿಹಚ್ಚುತ್ತಾರೆ. ಮಂಗಳವಾರ ಬೆಳಿಗ್ಗೆ ಅಂಗಡಿ ತೆರೆದು ಗುಡಿಸಿದ ಕಸಕ್ಕೆ ಬೆಂಕಿ ಹಚ್ಚಿದ್ದರು. ಆಗ ಬೆಂಕಿಯಲ್ಲಿ ಗಾಜಿನ ಬಾಟಲಿ ಒಡೆದ ಶಬ್ದ ಕೇಳಿದೆ. ಗುಂಡೊಂದು ಸಿಡಿದಿದೆ.

ಶಂಕೆಯಿಂದ ನೀರು ಸುರಿದು ಬೆಂಕಿ ನಂದಿಸಿದ್ದಾರೆ. ಕಸ ಹರಡಿ ನೋಡಿದ್ದಾಗ ನಾಡಪಿಸ್ತೂಲ್, 3 ಗುಂಡು ಪತ್ತೆಯಾಗಿವೆ. ಎಚ್ಚೆತ್ತ ಮಾಳಪ್ಪ ಕೂಡಲೇ ಕಾಳಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದರು.ಬೆರಳಚ್ಚು ಘಟಕದ ತಜ್ಞರು, ಶ್ವಾನದಳದ ನೆರವನ್ನು ಪಡೆಯಲಾಯಿತು. ಕಾಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.