ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಳಿ: 50 ಕೆ.ಜಿ ಪ್ಲಾಸ್ಟಿಕ್ ವಶ

ಪ್ಲಾಸ್ಟಿಕ್ ಮುಕ್ತ ಅಭಿಯಾನ
Published 20 ಜುಲೈ 2023, 16:09 IST
Last Updated 20 ಜುಲೈ 2023, 16:09 IST
ಅಕ್ಷರ ಗಾತ್ರ

ಸೇಡಂ: ಪಟ್ಟಣದ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿದ ಪುರಸಭೆ ಅಧಿಕಾರಿಗಳು ಬುಧವಾರ ವ್ಯಾಪಾರಸ್ಥರಿಂದ ಪ್ಲಾಸ್ಟಿಕ್ ಚೀಲ ವಶಪಡಿಸಿಕೊಂಡರು.

ಪಟ್ಟಣದ ತ್ರಿವೇಣಿ ಲಾಡ್ಜ್ ಬಳಿಯಿಂದ ಕಿರಾಣ ಬಜಾರ್‌ನಲ್ಲಿರುವ ವಿವಿಧ ಅಂಗಡಿಗಳ ಮೇಲೆ ದಾಳಿ ಮಾಡಿದ ಅಧಿಕಾರಿಗಳು ಪ್ಲಾಸ್ಟಿಕ್ ಬಳಕೆ ಕಾನೂನು ಪ್ರಕಾರ ಅಪರಾಧವಾಗಿದೆ. ಮುಂದಿನ ದಿನಗಳಲ್ಲಿ ಯಾರೊಬ್ಬರು ಸಹ ಪ್ಲಾಸ್ಟಿಕ್ ಅಂಗಡಿಯಲ್ಲಿ ಇಡಬಾರದು ಎಂದು ಪುರಸಭೆ ಮುಖ್ಯಾಧಿಕಾರಿ ಬಿ.ಪ್ರಹ್ಲಾದ ತಿಳಿಹೇಳಿದರು.

ಒಂದು ವೇಳೆ ಕಾನೂನು ನಿಯಮ ಮೀರಿ ಯಾರಾದರೂ ಪ್ಲಾಸ್ಟಿಕ್ ಬಳಕೆ ಮಾಡಿದರೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ. ನಾವು ಪ್ಲಾಸ್ಟಿಕ್ ಬಳಸುವುದಿಲ್ಲ ಎಂಬ ಕರಪತ್ರವನ್ನು ಅಂಗಡಿಗಳ ಮೇಲೆ ಅಂಟಿಸಲಾಯಿತು. ಮೂರು ದಿನಗಳಿಂದ ವಿವಿಧೆಡೆ ದಾಳಿ ಮಾಡಿ ಸುಮಾರು 50 ಕೆ.ಜಿ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಾಗಿದೆ ಎಂದು ಪುರಸಭೆ ಅಧಿಕಾರಿ ಮಾಹಿತಿ ನೀಡಿದರು.

ಪುರಸಭೆ ಪರಿಸರ ಎಂಜಿನಿಯರ್‌ ಪ್ರಿಯಾಂಕ ವಿಭೂತಿ, ಆರೋಗ್ಯ ನಿರೀಕ್ಷಕ ಬಸವರಾಜ ಆವಂಟಿ, ಅಶೋಕ ಚವಾಣ, ರಾಜು ರನ್ನೆಟ್ಲಾ, ಜಗನ್ನಾಥ ಯಡ್ಡಳ್ಳಿಕರ, ಜಗನ್ನಾಥ ರನ್ನೆಟ್ಲಾ, ಶ್ರೀಕಾಂತ ಕುದುರೆ, ಸಿದ್ಧರಾಮೇಶ್ವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT