ಕಲಬುರ್ಗಿ: ಪೊಲೀಸ್ ಕಾನ್ಸ್ಟೆಬಲ್ ವೃಂದದ ವಿವಿಧ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಜಿ ಸಲ್ಲಿಕೆ ಹಾಗೂ ಶುಲ್ಕ ಪಾವತಿಯ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಸತೀಶ್ಕುಮಾರ್ ತಿಳಿಸಿದ್ದಾರೆ.

ಸಿವಿಲ್ ಪೊಲೀಸ್ ಕಾನ್ಸ್ಟೆಬಲ್ (ಪುರುಷ ಮತ್ತು ಮಹಿಳಾ) (ಕಲ್ಯಾಣ ಕರ್ನಾಟಕ) 558 ಹುದ್ದೆಗಳಿಗೆ ಹಾಗೂ ಎ.ಪಿ.ಸಿ. (ಪುರುಷ) (ಸಿಎಆರ್/ಡಿಎಆರ್) (ಕಲ್ಯಾಣ ಕರ್ನಾಟಕ) 444 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಲು ನಿಗದಿಪಡಿಸಲಾಗಿದ್ದ ಕೊನೆಯ ದಿನಾಂಕವನ್ನು ಜುಲೈ 9 ರ ವರೆಗೆ ವಿಸ್ತರಿಸಲಾಗಿದೆ. ಶುಲ್ಕ ಪಾವತಿಗೆ ಜುಲೈ 13 ರವರೆಗೆ ಅವಕಾಶ ಇದೆ.

ಸಿವಿಲ್ ಪೊಲೀಸ್ ಕಾನ್ಸ್ಟೆಬಲ್ (ಪುರುಷ ಮತ್ತು ಮಹಿಳೆ) 2007 ಹುದ್ದೆಗಳಿಗೆ ಮತ್ತು ಎ.ಪಿ.ಸಿ. (ಪುರುಷ) (ಸಿಎಆರ್/ಡಿಎಆರ್) 1005 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜುಲೈ 13 ಹಾಗೂ ಶುಲ್ಕ ಪಾವತಿಗೆ ಜುಲೈ 15 ರವರೆಗೆ ಅವಕಾಶವಿದೆ.

ಸ್ಪೇ.ಆರ್.ಪಿ.ಸಿ. (ಪುರುಷ ಮತ್ತು ಮಹಿಳಾ) (ಕೆ.ಎಸ್.ಆರ್.ಸಿ ಮತ್ತು ಐ.ಆರ್.ಬಿ.) 2420 ಹುದ್ದೆಗಳಿಗೆ ಹಾಗೂ ಸ್ಟೇ.ಆರ್.ಪಿ.ಸಿ. (ಪುರುಷ) ಬ್ಯಾಂಡ್ಸ್ಮನ್ (ಕೆ.ಎಸ್.ಆರ್.ಪಿ. ಮತ್ತು ಐ.ಆರ್.ಬಿ.) 252 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಜುಲೈ 6 ರವರೆಗೆ ಶುಲ್ಕ ಪಾವತಿಯನ್ನು ಜುಲೈ 8 ರವರೆಗೆ ವಿಸ್ತರಿಸಲಾಗಿದೆ.

ಇನ್ನುಳಿದ ಅರ್ಹತಾ ಷರತ್ತು ಹಾಗೂ ವಯೋಮಿತಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.