ಕಲಬುರಗಿ: ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ನಾಲ್ವರು ಕೈದಿಗಳು ಜೈಲಿನ ಕೊಠಡಿಯಲ್ಲಿ ಮದ್ಯ ಸೇವಿಸುವ ಮೂಲಕ ಪಾರ್ಟಿ ಮಾಡಿರುವ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಜೊತೆಗೆ ಸಿಗರೇಟ್, ಮೊಬೈಲ್, ಚಾರ್ಜರ್ ಇರುವ ವಿಡಿಯೊಗಳೂ ಇವೆ. ಇತ್ತೀಚೆಗೆ ಜೈಲಿನ ಮೇಲೆ ದಾಳಿ ಮಾಡಿದ ಪೊಲೀಸರು, ಮಹಿಳಾ ಬ್ಯಾರಕ್ ಬಳಿ ಎಸೆದಿದ್ದ ತಂಬಾಕು ಸೇರಿದಂತೆ ಇತರೆ ನಿಷೇಧಿತ ವಸ್ತುಗಳನ್ನು ಜಪ್ತಿ ಮಾಡಿದ್ದರು.

ಅದಾದ ಬೆನ್ನಲ್ಲೇ ಮದ್ಯ ಸೇವನೆಯ ವಿಡಿಯೊ ಹರಿದಾಡುತ್ತಿದೆ.

ಇತ್ತೀಚೆಗೆ ಕಾರಾಗೃಹದ ಮುಖ್ಯ ಅಧೀಕ್ಷಕಿ ಅನಿತಾ ಆರ್. ಅವರ ಕಾರನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ಕೈದಿಗಳೇ ಈ ವಿಡಿಯೊದಲ್ಲಿದ್ದಾರೆ ಎನ್ನಲಾಗಿದ್ದು, ಜೈಲಿನಲ್ಲಿ ಅಕ್ರಮ ಕೂಟ ಕಟ್ಟಿಕೊಂಡು ದೊಂಬಿ ಎಬ್ಬಿಸಲು ಯತ್ನಿಸಿದ ಕಾರಣಕ್ಕೆ ಅವರನ್ನು ಬೇರೆ ಜೈಲುಗಳಿಗೆ ಗುರುವಾರ ಸ್ಥಳಾಂತರ ಮಾಡಲಾಗಿದೆ. ಇದರ ಬೆನ್ನಲ್ಲೇ ವಿಡಿಯೊಗಳು ಬಹಿರಂಗವಾಗಿವೆ.

ಈ ವಿಡಿಯೊಗಳು ಸುಮಾರು ಎರಡು ತಿಂಗಳು ಹಳೆಯವು ಎನ್ನಲಾಗಿದ್ದು, ಮದ್ಯ ಎಂದು ಬಿಂಬಿಸಲು ಗ್ಲಾಸ್ನಲ್ಲಿ ಹಾಲು ಬೆರೆಸದ ಚಹಾ ಹಾಕಲಾಗಿದೆ ಎಂದು ಜೈಲಿನ ಸಿಬ್ಬಂದಿ ಸಂಶಯ ವ್ಯಕ್ತಪಡಿಸಿದ್ದಾರೆ. ವಿಡಿಯೊಗಳನ್ನು ಎಡಿಟ್ ಮಾಡಲಾಗಿದೆ ಎಂದೂ ಗುಮಾನಿಗಳು ಎದ್ದಿವೆ.

ಜೈಲಿನ ಮುಖ್ಯ ಅಧೀಕ್ಷಕಿ ಅನಿತಾ ಆರ್. ಈ ಬಗ್ಗೆ ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.