ಕಲಬುರಗಿ: ಕಂದಾಯ ನಿವೇಶನಗಳಲ್ಲಿರುವ ಮನೆಗಳಿಗೆ ಒಂದು ಬಾರಿ ಮಾತ್ರ ರಾಜ್ಯ ಸರ್ಕಾರ ಬಿ ಖಾತೆ ನೀಡುವ ನಿರ್ಧಾರ ತೆಗೆದುಕೊಂಡಿದ್ದು, ಮೇ 10ರೊಳಗಾಗಿ ಬಿ ಖಾತೆ ಮಾಡಿಸಿಕೊಳ್ಳಬೇಕು. ಮತ್ತೊಂದು ಬಾರಿ ವಿಸ್ತರಣೆ ಮಾಡುವುದಿಲ್ಲ. ಹೀಗಾಗಿ, ಮತ್ತೊಂದು ಅವಕಾಶ ಸಿಗುತ್ತದೆ ಎಂದು ಕಾಯುತ್ತಾ ಕೂರಬೇಡಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ನಗರದ ಟೌನ್ಹಾಲ್ನಲ್ಲಿ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತ ಆಯೋಜಿಸಿದ್ದ ಇ ಖಾತಾ ಅಭಿಯಾನದಲ್ಲಿ ಫಲಾನುಭವಿಗಳಿಗೆ ಇ ಖಾತೆಯ ದಾಖಲೆಗಳನ್ನು ಸೋಮವಾರ ವಿತರಿಸಿ ಅವರು ಮಾತನಾಡಿದರು.

‘ಚುನಾವಣೆಗಳಲ್ಲಿ ನಾವು ಹಾಗೂ ನೀವು (ಪಾಲಿಕೆ ಸದಸ್ಯರು) ಅನಧಿಕೃತವಾಗಿ ರಚನೆಯಾದ ಬಡಾವಣೆಗಳಿಗೆ ತೆರಳಿ ಮತಯಾಚನೆ ಮಾಡಿ ಅವರಿಗೆ ಬಿ ಖಾತೆಗಳನ್ನು ನೀಡುವುದಾಗಿ ಭರವಸೆ ನೀಡಿ ಬಂದಿದ್ದೆವು. ಬಡಾವಣೆಗಳು ಅನಧಿಕೃತ ಎಂದು ಗೊತ್ತಿದ್ದರೂ ಅವುಗಳಿಗೆ ರಸ್ತೆ, ನೀರು, ವಿದ್ಯುತ್ ಸಂಪರ್ಕ ನೀಡಲಾಗಿದೆ. ಆಸ್ತಿಗಳನ್ನು ಖಾತೆ ಮಾಡಿರಲಿಲ್ಲ. ಇದೀಗ ಅದನ್ನೂ ನಮ್ಮ ಸರ್ಕಾರ ಮಾಡುತ್ತಿದೆ. ಸರ್ಕಾರಿ ದಾಖಲೆಗಳು ಸಿಕ್ಕರೆ ಆಸ್ತಿಗಳ ನಿರ್ವಹಣೆ ಹಾಗೂ ಸಬಲೀಕರಣ ಆಗಲಿದೆ. ಆದ್ದರಿಂದ ಉದಾಸೀನ ಮಾಡದೇ ಬಿ ಖಾತೆಗಳನ್ನು ಮಾಡಿಸಿಕೊಳ್ಳಬೇಕು’ ಎಂದು ಸಚಿವ ಪ್ರಿಯಾಂಕ್ ಸಲಹೆ ನೀಡಿದರು.

ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, ‘ಇದುವರೆಗೆ ಅನಧಿಕೃತ ಬಡಾವಣೆಗಳಲ್ಲಿ ಮನೆ ಕಟ್ಟಿರುವವರಿಗೆ ಅಧಿಕೃತ ದಾಖಲೆಗಳು ಸಿಗುತ್ತಿರಲಿಲ್ಲ. ಮನೆ ಮಾಲೀಕರಿಗೆ ಹಕ್ಕುಗಳನ್ನು ನೀಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಅಭಿಯಾನ ಆರಂಭಿಸಿದೆ. ಮೇ 10ರೊಳಗೆ ಅಗತ್ಯ ಶುಲ್ಕವನ್ನು ಭರಿಸಿ ಇ ಖಾತೆಗಳನ್ನು ಪಡೆದುಕೊಳ್ಳಬೇಕು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇದೇ 16ರಂದು ನಗರದಲ್ಲಿ ವಿವಿಧ ಆಸ್ಪತ್ರೆಗಳ ನಿರ್ಮಾಣ ಹಾಗೂ ಉದ್ಯೋಗ ಮೇಳಕ್ಕೆ ಚಾಲನೆ ನೀಡಲಿದ್ದಾರೆ’ ಎಂದು ಹೇಳಿದರು.

ಹಾಗರಗಾ ಜಾಫರಾಬಾದ್ ಡಬರಾಬಾದ್ ಮಾಲಗತ್ತಿ ಗ್ರಾಮಗಳಲ್ಲಿ ನೋಟರಿ ಮೂಲಕ ಆಸ್ತಿ ಖರೀದಿಸಿದ ಅನೇಕ ಪ್ರಕರಣಗಳಿವೆ. ಇವೆಲ್ಲವು ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದಿವೆ. ಇವುಗಳಿಗೆ ಬಿ–ಖಾತಾ ನೀಡಲು ಅವಕಾಶ ನೀಡಬೇಕು

-ಯಲ್ಲಪ್ಪ ನಾಯಕೊಡಿ ಮೇಯರ್

ಜಿಲ್ಲೆಯಾದ್ಯಂತ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಕಳೆದ ಫೆಬ್ರವರಿ 18ರಿಂದ ಇದುವರೆಗೆ ಬಿ ಖಾತಾಗಳಿಗೆ 3897 ಅರ್ಜಿ ಸಲ್ಲಿಕೆಯಾಗಿದ್ದು 970 ವಿತರಣೆ ಮಾಡಲಾಗಿದೆ. ಎ ಖಾತಾಗಳಿಗೆ 4181 ಅರ್ಜಿ ಸಲ್ಲಿಕೆಯಾಗಿದ್ದು 3324 ವಿತರಿಸಿದೆ

-ಅವಿನಾಶ್ ಶಿಂಧೆ ಮಹಾನಗರ ಪಾಲಿಕೆ ಆಯುಕ್ತ

- ‘ಎರಡು ತಿಂಗಳಲ್ಲಿ ನಗರದ ಅಭಿವೃದ್ಧಿಗೆ ನೀಲಿನಕ್ಷೆ’ ಶಾಸಕರಾದ ಅಲ್ಲಮಪ್ರಭು ಮತ್ತು ಕನೀಜ್ ಫಾತಿಮಾ ಅವರು ಕಲಬುರಗಿ ನಗರದ ಅಭಿವೃದ್ಧಿಗಾಗಿ ಹಲವು ಪ್ರಯತ್ನಗಳನ್ನು ಆರಂಭಿಸಿದ್ದು ಪ್ರಮುಖ ಉದ್ಯಾನಗಳು ರಸ್ತೆಗಳು ಚರಂಡಿ ಉದ್ಯೋಗ ಸೃಷ್ಟಿ ಸ್ಟಾರ್ಟಪ್ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳ ನೀಲಿನಕ್ಷೆ ಎರಡು ತಿಂಗಳಲ್ಲಿ ತಯಾರಾಗಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು. ಖಾಸಗಿ ಕನ್ಸಲ್ಟಿಂಗ್ ಸಂಸ್ಥೆಯಿಂದ ನಗರದ ಅಭಿವೃದ್ಧಿಗಾಗಿ ಸಲಹೆ ಕೇಳಲಾಗಿದೆ. ಕೇಂದ್ರ ಸರ್ಕಾರ ಕಲಬುರಗಿಯನ್ನು ಸ್ಮಾರ್ಟ್ ಸಿಟಿ ಪಟ್ಟಿಗೆ ಸೇರಿಸಿಲ್ಲ. ಆದರೆ ಸ್ಮಾರ್ಟ್ ಸಿಟಿ ಮೀರಿಸುವಂತೆ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.