ಕಲಬುರ್ಗಿ: ‘ಖರ್ಗೆ ವಿಷಕಾರಿ ಆಗಿದ್ದರಿಂದಲೇ ಸೋಲುಂಡರು’ ಎಂದು ಹೇಳಿಕೆ ನೀಡಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರಿಗೆ ತಿರುಗೇಟು ನೀಡಿರುವ ಶಾಸಕ ಪ್ರಿಯಾಂಕ್ ಖರ್ಗೆ, ‘ಸಿ.ಎಂ ವಿರುದ್ಧ ಮಾತನಾಡುವ ಸಚಿವರ ಬಾಯಿ ಮುಚ್ಚಿಸಲಾಗದ ದುರ್ಬಲ ಅಧ್ಯಕ್ಷ’ ಎಂದು ವ್ಯಂಗ್ಯವಾಡಿದ್ದಾರೆ.

ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಅವರು, ‘ಮಲ್ಲಿಕಾರ್ಜುನ ಖರ್ಗೆ ಅವರು ವಿಷಕಾರಿ ಆಗಿದ್ದರಿಂದಲೇ ಕಲ್ಯಾಣ ಕರ್ನಾಟಕ ಭಾಗಕ್ಕೆ 371(ಜೆ), ಕೇಂದ್ರೀಯ ವಿಶ್ವವಿದ್ಯಾಲಯ, ಇಎಸ್‌ಐಸಿ ಆಸ್ಪತ್ರೆ,ವಿಮಾನ ನಿಲ್ದಾಣ, ವಿಮಾನ ನಿಲ್ದಾಣ ಸೇರಿದಂತೆ ಹಲವಾರು ಅಭಿವೃದ್ಧಿ ಯೋಜನೆಗಳು ಜಾರಿಯಾಗಿವೆ. ರೈಲ್ವೆ ಡಿವಿಜನ್, ಜವಳಿ ಪಾರ್ಕ್, ನೀರಾವರಿಯಂಥ ಪ್ರಮುಖ ಯೋಜನೆಗಳು ಜಿಲ್ಲೆಗೆ ಬಂದಿವೆ. ನೀವು ಕಣ್ಣೆತ್ತಿ ನೋಡಬೇಕು’ ಎಂದಿದ್ದಾರೆ.

‘ಮಕರಂದ ಸೂಸುವ ಬಿಜೆಪಿಯಿಂದ ಜಿಲ್ಲೆಗೆ ಒಂದೂ ಸಚಿವ ಸ್ಥಾನ ಸಿಗಲಿಲ್ಲ. ಬಿಜೆಪಿಯಿಂದ ಅನುದಾನ ಹಾಗೂ ಪ್ರತ್ಯೇಕ ರೈಲ್ವೆ ವಿಭಾಗ ಮಾಡುವುದು ದೂರದ ಮಾತು; ಕನಿಷ್ಠ ಒಂದೂ ರೈಲನ್ನು ನಿಲ್ಲಿಸಲು ಸಹ ನಿಮ್ಮಿಂದ ಆಗಲಿಲ್ಲ. ಬಿಜೆಪಿಯವರ ಮಕರಂದದ ಸುವಾಸನೆಗೆ ಹಿಂದಿನ ಸರ್ಕಾರದ ಯೋಜನೆಗಳೆಲ್ಲ ರದ್ದಾಗಿವೆ’ ಎಂದು ಕುಟುಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.