ಚಿಂಚೋಳಿ: ತಾಲ್ಲೂಕಿನ ಯಾಕಾಪುರದಲ್ಲಿ ಅತ್ಯಾಚಾರಕ್ಕೆ ಬಲಿಯಾದ ಬಾಲಕಿಯ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿ ಜೆಡಿಎಸ್ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸಿದ್ದಯ್ಯ ಸ್ವಾಮಿ ಕಪೂರ ನೇತೃತ್ವದಲ್ಲಿ ಕಾರ್ಯಕರ್ತರು ಯಾಕಾಪುರದಿಂದ ಸುಲೇಪೇಟವರೆಗೆ ಗುರುವಾರ ಪಾದಯಾತ್ರೆನಡೆಸಿದರು.

ಮೃತ ಬಾಲಕಿಯ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಬೇಕು, 5 ಎಕರೆ ಕೃಷಿ ಭೂಮಿ ಮಂಜೂರು ಮಾಡಬೇಕು ಮತ್ತು ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ನೌಕರಿ ಕೊಡಬೇಕು ಎಂದು ಸಿದ್ದಯ್ಯ ಸ್ವಾಮಿ ಕಪೂರ ಒತ್ತಾಯಿಸಿದರು.

ಸುಲೇಪೇಟದ ಬಸವೇಶ್ವರ ವೃತ್ತದಲ್ಲಿ ಬಹಿರಂಗ ಸಭೆ ನಡೆಸಿ ಗ್ರೇಡ್–2 ತಹಶೀಲ್ದಾರ್ ಮಾಣಿಕ ಘತ್ತರಗಿ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಕಾರ್ಯಾಧ್ಯಕ್ಷ ಜಬ್ಬಾರಖಾನ ಸಾಬ್, ಮಹಾ ಪ್ರಧಾನ ಕಾರ್ಯದರ್ಶಿ ಶಾಮರಾವ್ ಸೂರನ್, ರವಿಶಂಕರರೆಡ್ಡಿ ಮುತ್ತಂಗಿ, ಅಮಜದ್ ಅಲಿ, ಹಣಮಂತ ಪೂಜಾರಿ, ಜಗನ್ನಾಥರೆಡ್ಡಿ ಗೋಟೂರು, ಮಹಿಳಾ ಮುಖಂಡೆ ಸುನೀತಾ ಎಂ.ತಳವಾರ, ಓಮನರಾವ್ ಕೊರವಿ. ಮಕದ್ದುಮ್ ಖಾನ್, ಎಸ್.ಕೆ ಮುಖ್ತಿಯಾರ್, ಫಕ್ರುದ್ದಿನ್ ಚಾಂಗಲೇರಾ, ಹಾಫೀಜಮಿಯಾ, ಹುಸೇನಸಾಬ ಗೋಳೆವಾಡ ಹಾಗೂ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಸುನೀಲ ಸಲಗರ, ಭಾರತೀಯ ದಲಿತ ಪ್ಯಾಂಥರ್‌ನ ರುದ್ರಮುನಿ ರಾಮತೀರ್ಥ, ಟಿಪ್ಪು ಸುಲ್ತಾನ್ ಸಮಿತಿ ಅಧ್ಯಕ್ಷ ಮೋಯಿನ್ ಮೋಮಿನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.