ವಾಡಿ: ರಾಜ್ಯದ ಎಲ್ಲಾ ಪೌರ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸಬೇಕು. ಹೊರಗುತ್ತಿಗೆ ಮೇಲೆ ಕಾರ್ಯನಿರ್ವಹಿಸುತ್ತಿರುವ ವಾಹನ ಚಾಲಕರು, ನೀರು ಸರಬರಾಜು ಸೇರಿದಂತೆ ವಿವಿಧ ಸಿಬ್ಬಂದಿಯನ್ನು ಕಾಯಂ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ವತಿಯಿಂದ ನೌಕರರು ಪುರಸಭೆ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಅಧ್ಯಕ್ಷ ಶಿವಾನಂದ ನಿಂಬರ್ಗಾ ನೇತೃತ್ವದಲ್ಲಿ ಬೆಳಿಗ್ಗೆ ಪುರಸಭೆ ಎದುರು ಜಮಾಯಿಸಿದ ನೌಕರರು ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.

ಸರ್ಕಾರ ನಮ್ಮನ್ನು ಮಲತಾಯಿ ಮಕ್ಕಳ ರೀತಿಯಲ್ಲಿ ನೋಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಸರ್ಕಾರಕ್ಕೆ ನೀಡಿದ ಗಡುವು ಮೇ25ಕ್ಕೆ ಮುಗಿದಿದ್ದು ಹೋರಾಟ ಮುಂದುವರಿಸುತ್ತೇವೆ ಎಂದು ಘೋಷಿಸಿದರು.

ಮನವಿ ಪತ್ರವನ್ನು ರಾಜ್ಯಸರ್ಕಾರಕ್ಕೆ ಪುರಸಭೆ ಅಧಿಕಾರಿಗಳ ಮೂಲಕ ರವಾನಿಸಲಾಯಿತು.

ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ವಾಡಿ ಸಮಿತಿ ಅಧ್ಯಕ್ಷ ಶಿವಾನಂದ ನಿಂಬರ್ಗಾ ಕಾರ್ಯದರ್ಶಿ ದೇವೇಂದ್ರ ಸಾಕ್ರಿ, ಪೌರಕಾರ್ಮಿಕರಾದ ನಾಗಪ್ಪ ಲಕ್ಷ್ಮಣ, ನಾಗರಾಜ ಈರಣ್ಣ, ಸರಸ್ವತಿ ನಾಗೇಶ, ಅಯ್ಯಪ್ಪ ನಿಂಗಪ್ಪ, ಗುಂಡಮ್ಮ ಮರೆಪ್ಪ, ಆನಂದ, ಅರುಣಕುಮಾರ, ಮಲ್ಲಿಕಾರ್ಜುನ ಹಡಪದ, ವಿರುಪಾಕ್ಷಿ, ರೂಪಾ ಕುಲಕರ್ಣಿ, ಬಸವರಾಜ ಪೂಜಾರಿ, ಬಸ್ಸಮ್ಮ ಪಾಟೀಲ, ಶ್ರೀಮಂತ ದುಮ್ಮನಸುರ, ಮನೋಜಕುಮಾರ ಹೀರೊಳ್ಳಿ, ರೇಣುಕಾ ಬನ್ಸೋಡೆ, ಶಾಂತಾಬಾಯಿ ಜೋಲಾಪುರ, ಸುರೇಶ ಮೇತ್ರೆ, ಮೀನಾಕ್ಷಿ ಹಾಗೂ ಇನ್ನಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.