ಶಹಾಬಾದ್: ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗುಣತೀರ್ಥವಾಡಿ ಗ್ರಾಮದಲ್ಲಿ ಕೋಲಿ ಸಮಾಜದ ಯುವತಿಯನ್ನು ಭಾಗ್ಯಶ್ರೀ ಕೊಲೆ ಮಾಡಿರುವ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಕೋಲಿ ಸಮಾಜದ ತಾಲ್ಲೂಕು ಅಧ್ಯಕ್ಷ ಶಿವಕುಮಾರ ತಳವಾರ ಆಗ್ರಹಿಸಿದ್ದಾರೆ. ಬಳಿಕ ಉಪತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ನಗರದ ಬಸವೇಶ್ವರ ವೃತ್ತದಲ್ಲಿ ಮಂಗಳವಾರ ಶಹಾಬಾದ್ ನಗರ ಮತ್ತು ಗ್ರಾಮೀಣ ಕೋಲಿ ಸಮಾಜದ ವತಿಯಿಂದ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಮಗಳ ಜೀವನದ ಬಗ್ಗೆ ಹಲವು ಕನಸುಗಳನ್ನು ಕಂಡಿದ್ದ ಪಾಲಕರು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಮಗಳನ್ನು ಶಾಶ್ವತವಾಗಿ ಕಳೆದುಕೊಂಡ ಕುಟುಂಬಕ್ಕೆ ತುಂಬಲಾರದಷ್ಟು ನಷ್ಟವಾಗಿದೆ. ಸರ್ಕಾರ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಸಮಾಜದ ಮುಖಂಡ ನಿಂಗಣ್ಣ ನಂದಳ್ಳಿ ಮತ್ತು ಮಲ್ಲಿಕಾರ್ಜುನ ಸಿರಗುಂಡ ಹಾಗೂ ನಿಂಗಣ್ಣ ಹುಳುಗೋಳ್ಕರ ಮಾತನಾಡಿ, ‘ಕೋಲಿ ಸಮಾಜದ ಹೆಣ್ಣು ಮಕ್ಕಳಷ್ಟೇ ಅಲ್ಲ, ಪ್ರತಿ ಹೆಣ್ಣು ಮಕ್ಕಳ ಘನತೆ, ಗೌರವಕ್ಕೆ ಧಕ್ಕೆ ಬಂದರೆ ನಮ್ಮ ಸಮಾಜವು ಒಗ್ಗಟ್ಟಿನಿಂದ ಹೊರಡುತ್ತಿದೆ’ ಎಂದು ಹೇಳಿದರು.

ಶಿವಕುಮಾರ ಬುರ್ಲಿ, ಪ್ರಭು ಸೀಬಾ, ಕಾಶಣ್ಣ ಚನ್ನೂರ, ದೇವೀಂದ್ರ ಕಾರೋಳ್ಳಿ, ನಾಗರಾಜ ಯಡ್ರಾಮಿ, ಮನೋಜ ಕೂಡ್ಲಿ, ವಿಶ್ವರಾಜ ಫಿರೋಜಾಬಾದ, ತಿಪ್ಪಣ್ಣ ನಾಟೀಕರ, ರವಿ ಸಣ್ಣತಮ್ಮ, ಮನೋಹರ ತಳವಾರ ಸೇರಿದಂತೆ ಕೋಲಿ ಸಮಾಜದ ನೂರಾರು ಜನ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.