ಕಾಳಗಿ: ತಾಲ್ಲೂಕಿನ ರಾಜಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶರೆಡ್ಡಿ ಮಲ್ಲಾರೆಡ್ಡಿ ಎಂಬುವರ ಸದಸ್ಯತ್ವ ರದ್ದುಪಡಿಸಿ ಮತ್ತು ಮುಂದಿನ ಆರು ವರ್ಷಗಳ ಕಾಲ ಚುನಾವಣೆಗೆ ನಿಲ್ಲದಂತೆ ಅನರ್ಹಗೊಳಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪೀಠಾಧಿಕಾರಿ (ಗ್ರಾ.ಪಂ) ಶಿವಕುಮಾರ ಅವರು ಡಿ.22ರಂದು ಆದೇಶ ಹೊರಡಿಸಿದ್ದಾರೆ.

ಮಳಗಾ (ಕೆ) ಗ್ರಾಮದ ಫಿರ್ಯಾದುದಾರೆ ಚಾಂದಸುಲ್ತಾನಾ ಖರೀದಿಸಿದ ಜಾಗವನ್ನು ಗ್ರಾಮ ಪಂಚಾಯಿತಿ ಡಿಸಿಬಿಯಲ್ಲಿ ನಮೂದಿಸುವ ಕೆಲಸ ಮಾಡಿಸಿಕೊಡುವ ಆರೋಪದ ಮೇಲೆ ಅಧ್ಯಕ್ಷ ಪ್ರಕಾಶರೆಡ್ಡಿ ₹5 ಸಾವಿರ ಲಂಚದ ಹಣ ಸ್ವೀಕರಿಸುವಾಗ ಲೋಕಾಯುಕ್ತ ಪೋಲಿಸ್ರಿಂದ ಟ್ರ್ಯಾಪ್ ಆಗಿದ್ದು ಸಾಬೀತಾಗಿದೆ.

ಪ್ರಯುಕ್ತ ಗ್ರಾ.ಪಂ ಅಧ್ಯಕ್ಷ ಪ್ರಕಾಶರೆಡ್ಡಿ ಅವರನ್ನು ಕರ್ನಾಟಕ ಗ್ರಾಮ್ ಸ್ವರಾಜ್ ಮತ್ತು ಗ್ರಾಮ ಪಂಚಾಯತ್ ರಾಜ್ ಅಧಿನಿಯಮ-1993ರ ಪ್ರಕರಣ-43(ಎ) ಮತ್ತು 48(4)ರನ್ವಯ ಗ್ರಾಮ ಪಂಚಾಯಿತಿ ಸದಸ್ಯತ್ವದಿಂದ ತೆಗೆದುಹಾಕಿ ಮತ್ತು ಪ್ರಕರಣ 43(ಎ)(2)ರ ಅನ್ವಯ ಮುಂದಿನ ಆರು ವರ್ಷಗಳ ಕಾಲ ಚುನಾವಣೆಗೆ ನಿಲ್ಲದಂತೆ ಆದೇಶಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.