ಅಫಜಲಪುರ: ತಾಲ್ಲೂಕಿನ ವಿವಿಧ ಸರ್ಕಾರಿ ಕಚೇರಿಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಶನಿವಾರ ಸಂಭ್ರಮದ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು.

‘ಕರ್ನಾಟಕ ರಾಜ್ಯೋತ್ಸವದ ಉದ್ದೇಶ ಕರ್ನಾಟಕದ ಏಕೀಕರಣವನ್ನು ಸ್ಮರಿಸುವುದು, ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಗೌರವಿಸುವುದು, ಮತ್ತು ನಾಡಿನ ಸಾಧಕರನ್ನು ಗೌರವಿಸುವುದಾಗಿದೆ’ ಎಂದು ಶಾಸಕ ಎಂ.ವೈ.ಪಾಟೀಲ ತಿಳಿಸಿದರು. ಇಲ್ಲಿನ ತಹಶೀಲ್ದಾರ್ ಕಚೇರಿ ಅವರಣದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಸರ್ಕಾರಿ ಸಂಯುಕ್ತ ಪ್ರೌಢಶಾಲೆಯ ಮಂಟಪದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ನಾಡದೇವಿಯ ಮೆರವಣಿಗೆಗೆ ಪುರಸಭೆ ಅಧ್ಯಕ್ಷೆ ಸುಹಾಸಿನಿ ವೀರೇಶ್ ಖೇಳಗಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ಶಿವಾನಂದ ಗಾಡಿ ಸಾಹುಕಾರ, ಶರಣು ಕುಂಬಾರ, ಚಂದ್ರಶೇಖರ ಕರಜಗಿ, ಪ್ರಭಾವತಿ ಮೇತ್ರೆ, ಜೆಡಿಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ನಾಟೇಕರ್ ಹಾಗೂ ಜಿ.ಪಂ. ಮಾಜಿ ಸದಸ್ಯ ಮತಿನ್ ಪಟೇಲ, ಪುರಸಭೆ ಸದಸ್ಯರಾದ ನಿಂಗು ಚಲವಾದಿ, ಮಲ್ಲಯ್ಯ ಹೊಸಮಠ, ಸೈಪನ್ಸಾಬ್ ಚಿಕ್ಕಳ್ಳಗಿ, ತಾಲ್ಲೂಕು ಅಧ್ಯಕ್ಷ ಶ್ರೀಕಾಂತ ದಿವಾಣಜಿ, ಮಹಾಂತೇಶ ಬಳೂಂಡಗಿ, ತಾಲೂಕು ಜೈ ಕರವೇ ಅಧ್ಯಕ್ಷ ಸುರೇಶ್ ಅವಟೆ, ಕರವೇ ಅಧ್ಯಕ್ಷ ಶ್ರೀಕಾಂತ್ ದಿವಾನಜಿ, ಬಾಬುಮಿಯ ಫಲಾರಿ, ಅಧಿಕಾರಿಗಳಾದ ಲಕ್ಷ್ಮೀಕಾಂತ ಬಿರಾದಾರ, ಬಾಬುರಾವ ಜ್ಯೋತಿ, ಅಶೋಕ ನಾಯ್ಕ, ಶಂಕರಗೌಡ ಪಾಟೀಲ, ಚೇತನ ದುಮಾಲೆ, ಶಾಂತಪ್ಪ ಜಾಧವ, ಯುವರಾಜ ಗಾಡಿ ಸಾಹುಕಾರ, ಅಶೋಕ ಎಚ್. ಕಲ್ಲೂರ, ಹಾಗೂ ವಿವಿಧ ಕನ್ನಡಪರ ಸಂಘಟನೆ ಮುಖಂಡರು, ಶಿಕ್ಷಕರು ಹಾಜರಿದ್ದರು.

ಪ್ರತಿಭಟನೆ: ಶಾಸಕ ಎಂ.ವೈ.ಪಾಟೀಲ ಅವರು ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿ ತೆರಳಿದರು. ಅವರು ವೇದಿಕೆ ಕಾರ್ಯಕ್ರಮಕ್ಕೆ ಬರಲಿಲ್ಲವೆಂದು ವಿವಿಧ ಕನ್ನಡಪರ ಸಂಘಟನೆಯವರು ಕಾರ್ಯಕ್ರಮದಿಂದ ಹೊರಬಂದು ಪ್ರತಿಭಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.