ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಟಕಲ್ ವಿರಕ್ತಮಠದ ಸಿದ್ದರಾಮ‌ ಸ್ವಾಮೀಜಿ ನಿಧನ

Published 8 ಜುಲೈ 2024, 5:33 IST
Last Updated 8 ಜುಲೈ 2024, 5:33 IST
ಅಕ್ಷರ ಗಾತ್ರ

ಕಾಳಗಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ರಟಕಲ್ ಗ್ರಾಮದ ವಿರಕ್ತಮಠದ ಪೀಠಾಧಿಪತಿ ಸಿದ್ದರಾಮ ಸ್ವಾಮೀಜಿ (35) ಸೋಮವಾರ ನಿಧನರಾಗಿದ್ದಾರೆ.

ಭಾನುವಾರ ರಾತ್ರಿ ಮಠದಲ್ಲಿ ಮಲಗಿದ್ದ ವೇಳೆ ಹೃದಯಘಾತವಾಗಿದೆ. ಮಠದ ಕೆಲಸಗಾರರು ಸೋಮವಾರ ಬೆಳಿಗ್ಗೆ ಎದ್ದು ನೋಡಿದ್ದಾಗ ಸ್ವಾಮೀಜಿ ನಿಧನರಾಗಿದ್ದು ಕಂಡುಬಂದಿದೆ.

ಶ್ರೀಗಳು ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಕೋಕಟನೂರ ಗ್ರಾಮದ ಪೂರ್ವಶ್ರಮ ಹೊಂದಿದ್ದವರು. ಎಂಟು ವರ್ಷಗಳಿಂದ ರಟಕಲ್ ವಿರಕ್ತಮಠದ ಸಾರಥ್ಯ ವಹಿಸಿದ್ದರು.

ಶ್ರೀಗಳ ಅಂತ್ಯಕ್ರಿಯೆ ಇಂದು ಸಂಜೆ 5 ಗಂಟೆಗೆ ಮಠದಲ್ಲಿ ನೆರವೇರಲಿದೆ. ಹುಲಸೂರಿನ ಶಿವಾನಂದ ಸ್ವಾಮೀಜಿ, ನಾಗೂರಿನ ಅಲ್ಲಮಪ್ರಭು ಸ್ವಾಮೀಜಿ, ಸ್ಥಳೀಯ ಹಿರೇಮಠದ ರೇವಣಿಸಿದ್ದ ಶಿವಾಚಾರ್ಯರು, ಗೌರಿಗಣೇಶ ಗುಡ್ಡದ ರೇವಣಸಿದ್ಧ ಶರಣರು ಸೇರಿದಂತೆ ಅಪಾರ ಭಕ್ತರು ಮಠದಲ್ಲಿ ಬೀಡುಬಿಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT