ಸೇಡಂ: ಕಲಬುರಗಿಯಿಂದ ಹೈದರಾಬಾದ್ಗೆ ಹೊರಡುವ ಸೇಡಂ ರೈಲು ನಿಲ್ದಾಣದಲ್ಲಿ ಎಲ್ಟಿಟಿ ರೈಲು ಮತ್ತು ಇಂಟರ್ಸಿಟಿ ರೈಲು ನಿಲ್ಲಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಪದಾಧಿಕಾರಿಗಳು ಬುಧವಾರ ವಿಭಾಗೀಯ ಅಧಿಕಾರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

‘ಸೇಡಂ ಒಂದು ತಾಲ್ಲೂಕು ಕೇಂದ್ರವಾಗಿದ್ದು, ಸಾವಿರಾರು ಜನರು ನಿತ್ಯ ಹೈದರಾಬಾದ್ಗೆ ತೆರಳುತ್ತಾರೆ. ನಿತ್ಯ ಕಾರ್ಮಿಕರು, ವೈದ್ಯರು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ತೆರಳುತ್ತಾರೆ. ಪುನಃ ತಮ್ಮ ಕೆಲಸವನ್ನು ಮುಗಿಸಿ ಸೇಡಂಗೆ ಮರಳುತ್ತಾರೆ.

ಸೇಡಂನಿಂದ ಹೈದರಾಬಾದ್ಗೆ ಬೆರಳೆಣಿಗೆಯಷ್ಟೇ ರೈಲು ಸಂಚಾರವಿದ್ದು, ಅವುಗಳಲ್ಲಿ ಎಲ್ಟಿಟಿ ಮತ್ತು ಇಂಟರ್ಸಿಟಿ ರೈಲು ಪ್ರಮುಖವಾಗಿದೆ. ಎರಡು ರೈಲು ನಿಂತಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಜೊತೆಗೆ ಸೇಡಂ ರೈಲು ನಿಲ್ದಾಣದಲ್ಲಿ ಸಾರ್ವಜನಿಕ ಶೌಚಾಲಯಗಳು ನಿರುಪಯುಕ್ತವಾಗಿದ್ದು, ಕೂಡಲೇ ದುರಸ್ತಿ ಮಾಡಿಸಿ ಸಾರ್ವಜನಿಕ ಬಳಕೆಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ) ತಾಲ್ಲೂಕು ಘಟಕದ ಅಧ್ಯಕ್ಷ ರಾಮಚಂದ್ರ ಗುತ್ತೇದಾರ, ಚಂದ್ರಶೇಖರ ಪೂಜಾರಿ, ದೇವು ನಾಟೀಕಾರ, ಶ್ರೀನಿವಾಸರೆಡ್ಡಿ ಮದನಾ, ಭೀಮಯ್ಯ ಗುತ್ತೇದಾರ, ಗುಂಡಪ್ಪ ಪೂಜಾರಿ, ಚಂದ್ರಶೇಖರ ಮಡಿವಾಳ, ರವಿಸಿಂಗ್, ಸುಭಾಷ ನಾಟೀಕಾರ, ಮಲ್ಲಿಕಾರ್ಜುನ ಕಾಕಲವಾರ, ಪವನ ಕುಲಕರ್ಣಿ, ರಾಘವೇಂದ್ರ ಕಡಗಂಚಿ, ಕಿರಣಕುಮಾರ, ರಾಜಕುಮಾರ ವಾಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.