ಬುಧವಾರ, ಆಗಸ್ಟ್ 17, 2022
25 °C

ಉದನೂರ: ₹ 4.87 ಕೋಟಿ ಮೊತ್ತದ ಕಾಮಗಾರಿಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ತಾಲ್ಲೂಕಿನ ಉದನೂರು ಗ್ರಾಮದಲ್ಲಿ ₹ 4.87 ಕೋಟಿ ಮೊತ್ತದ ಕಾಮಗಾರಿಗಳಿಗೆ ಸ್ಥಳೀಯ ಶಾಸಕರೂ ಆದ ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಸೋಮವಾರ ಚಾಲನೆ ನೀಡಿದರು.

ರಿಂಗ್ ರಸ್ತೆಯಿಂದ ಉದನೂರ ಗ್ರಾಮದವರೆಗೆ ಡಾಂಬರೀಕರಣ ರಸ್ತೆ ಕಾಮಗಾರಿಗೆ ₹ 3 ಕೋಟಿ, ಉದನೂರದಿಂದ ನಂದಿಕೂರಕ್ಕೆ ಕೂಡುವ ರಸ್ತೆ ₹ 1 ಕೋಟಿ, ಉದನೂರ ಒಳ ರಸ್ತೆಗಳ ಅಭಿವೃದ್ಧಿಗೆ ₹ 20 ಲಕ್ಷ, ಉದನೂರ ತಾಂಡಾದಲ್ಲಿ ₹ 30 ಲಕ್ಷದ ಸಿ.ಸಿ. ರಸ್ತೆ ಹಾಗೂ ಸಂತ ಸೇವಾಲಾಲ್ ಭವನದ ನಿರ್ಮಾಣಕ್ಕಾಗಿ ₹ 20 ಲಕ್ಷ ಹಾಗೂ ಶಾಲೆ ಕಟ್ಟಡಕ್ಕೆ ₹ 17 ಲಕ್ಷ ಮೊತ್ತದ ಕಾಮಗಾರಿಗೆ ಚಾಲನೆ ನೀಡಿದರು.

ಉದನೂರನಲ್ಲಿ ಬಹಳ ದಿನದಿಂದ ನನೆಗುದಿಗೆ ಬಿದ್ದಿದ್ದ ರಸ್ತೆ ನಿರ್ಮಾಣದಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಲೋಕೋಪಯೋಗಿ, ಕೆಕೆಆರ್‌ಡಿಬಿ, ಸಮಾಜ ಕಲ್ಯಾಣ ಹಾಗೂ ಕರ್ನಾಟಕ ರಾಜ್ಯ ತಾಂಡಾ ಅಭಿವೃದ್ಧಿ ನಿಗಮದ ಅನುದಾನದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಇದರಿಂದ ಜನರಿಗೆ ಅನುಕೂಲವಾಗುತ್ತದೆ ದತ್ತಾತ್ರೇಯ ಪಾಟೀಲ ರೇವೂರ ಹೇಳಿದರು.

ಈ ಸಂದರ್ಭದಲ್ಲಿ ಶಿವರಾಜಪಾಟೀಲ ಉದನೂರ, ಶರಣಬಸಪ್ಪ ಮೂಲಗೆ, ಸಿದ್ಧಾರೂಢ ಮೂಲಗೆ, ಇಇ ಮಲ್ಲಿಕಾರ್ಜುನ, ಎಇಇ ಕಂಠೆಪ್ಪ, ಎಇ ಕಾಳಪ್ಪ, ಸಹಾಯಕ ಎಂಜಿನಿಯರ್‌ಗಳಾದ ನಾರಾಯಣರಾವ್, ರಮೇಶ, ಮುಖಂಡರಾದ ವಿಶ್ವನಾಥ ಪಾಟೀಲ, ವಿಜಯಲಕ್ಷ್ಮಿ ಗೊಬ್ಬುರಕರ್, ಶೋಭಾ ಬಾಗೇವಾಡಿ, ಶರಣಬಸಪ್ಪ ಎಮಂಟಿ, ರವಿ ಪಾಟೀಲ, ಭೀಮಣ್ಣ ಶೇರಿಕಾರ, ಚಂದ್ರಶ್ಯಾ ಮೂಲಗೆ, ಬಲಭೀಮ ಬಿರಾದಾರ, ಶಿವಲಿಂಗಯ್ಯ ಸ್ವಾಮಿ, ಶಾಂತಕುಮಾರ ದುಧನಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.