ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗೊಳ್ಳಿ ರಾಯಣ್ಣ ಯುವಜನರಿಗೆ ಆದರ್ಶ: ವೀರಣ್ಣ ಯಾರಿ

Published : 16 ಆಗಸ್ಟ್ 2024, 4:18 IST
Last Updated : 16 ಆಗಸ್ಟ್ 2024, 4:18 IST
ಫಾಲೋ ಮಾಡಿ
Comments

ವಾಡಿ: ‘ಸ್ವಾತಂತ್ರ್ಯ ಸಂಗ್ರಾಮದಲ್ಲಿ ತನ್ನ ಶೂರ ಹಾಗೂ ಧೀರತನದಿಂದ ಬ್ರಿಟಿಷರ ಎದೆ ನಡುಗಿಸಿದ್ದ ಸಂಗೊಳ್ಳಿ ರಾಯಣ್ಣ ಇಂದಿನ ಯುವಜನರಿಗೆ ಆದರ್ಶರಾಗಿದ್ದಾರೆ’ ಎಂದು ಬಿಜೆಪಿ ಶಕ್ತಿ ಕೇಂದ್ರದ ಸ್ಥಳೀಯ ಅಧ್ಯಕ್ಷ ವೀರಣ್ಣ ಯಾರಿ ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸಂಗೊಳ್ಳಿ ರಾಯಣ್ಣನ 226ನೇ ಜಯಂತಿಯಲ್ಲಿ ಮಾತನಾಡಿದ ಅವರು, ‘ರಾಯಣ್ಣನ ಜನ್ಮ‌ದಿನವು ಸ್ವಾತಂತ್ರ್ಯದಿನ ಬಂದರೆ, ಪುಣ್ಯತಿಥಿ ಗಣರಾಜ್ಯೋತ್ಸವದಂದು ಬರುತ್ತದೆ. ಇದು ಅಪರೂಪ ಹಾಗೂ ಗಮನಾರ್ಹ ಸಂಗತಿಯಾಗಿದೆ’ ಎಂದರು. ಮುಖಂಡರಾದ ಬಸವರಾಜ ಪಂಚಾಳ ಸಂಗೊಳ್ಳಿ ರಾಯಣ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಯುವಮುಖಂಡ ವಿಠಲ ನಾಯಕ, ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಮುಖಂಡರಾದ ದೌಲತರಾವ ಚಿತ್ತಾಪುರಕರ, ಗಿರಿಮಲ್ಲಪ್ಪ ಕಟ್ಟಿಮನಿ, ಹರಿ ಗಲಾಂಡೆ, ಭೀಮಶಾ ಜಿರೋಳ್ಳಿ, ಅರ್ಜುನ ಕಾಳೆಕರ, ಕಿಶನ ಜಾಧವ, ಅಂಬಾದಾಸ ಜಾಧವ, ಆನಂದ ಡೌವಳೆ, ಸೋಮು ಚವ್ಹಾಣ, ಹಣಮಂತ ಚವ್ಹಾಣ, ರವಿ ಕಾರಬಾರಿ, ರಾಜು ಪವಾರ, ಪ್ರಕಾಶ ಪೂಜಾರಿ, ಅಯ್ಯಣ್ಣ ದಂಡೋತಿ, ಮಲ್ಲಿಕಾರ್ಜುನ ಸಾತಖೇಡ, ಆನಂದ ಇಂಗಳಗಿ, ಭರತ ರಾಠೋಡ, ಪ್ರೇಮ್ ರಾಠೋಡ, ಮಹೇಂದ್ರ ಕುಮಾರ ಪುಜಾರಿ, ಹೀರಾ ನಾಯಕ, ಸಿದ್ದೇಶ್ವರ ಚೊಪಡೆ, ಸಚಿನ್ ಡೌವಳೆ, ಯಂಕಮ್ಮ ಗಾಡಗಾಂವ, ನಿರ್ಮಲಾ ಇಂಡಿ, ಶರಣಮ್ಮ ಯಾದಗಿರಿ, ದೇವಕಿ ಪೂಜಾರಿ, ಉಮಾಬಾಯಿ ಗೌಳಿ, ಅನ್ನಪೂರ್ಣ ದೊಡ್ಡಮನಿ, ಪ್ರೇಮ ತೆಲ್ಕರ, ಹೀರಾಸಿಂಗ್ ರಾಠೋಡ, ಸೋಮು ಸಿಂಗ್ ಚವ್ಹಾಣ, ರಾಜು ನಾಯಕ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT