ಕಲಬುರ್ಗಿ: ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರು ಬಾಲಕಿಯರಿಗೆ ವಿದ್ಯೆ ಹೇಳಿಕೊಡಲು ಶಾಲೆಗೆ ಹೆಜ್ಜೆ ಇಡುತ್ತಿದ್ದಾಗ ಅವರ ಮೇಲೆ ಹಲ್ಲೆ ಮಾಡುವ ಪ್ರಯತ್ನ, ಮೈಮೇಲೆ ಮಣ್ಣು, ಕೆಸರು, ಸಗಣಿ ಎರಚುತ್ತಿದ್ದರು. ಆದರೂ ಆಕೆ ಹಾಗೆಯೇ ಮುನ್ನಡೆದು ಶಾಲೆಗೆ ಹೋಗಿ ಬರುವುದಂತೂ ನಿಲ್ಲಲಿಲ್ಲ. ತಾನು ನಂಬಿದ ಧ್ಯೇಯಕ್ಕಾಗಿ ಮುಂದಿಟ್ಟ ಹೆಜ್ಜೆ ಹಿಂದಕ್ಕೆ ಸರಿಸಲಿಲ್ಲ ಎಂದು ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ. ರಮೇಶ ಲಂಡನಕರ್ ಅಭಿಪ್ರಾಯಪಟ್ಟರು.

ನಗರದಲ್ಲಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಆಯೋಜಿಸಿದ್ದ ಜ್ಯೋತಿಬಾಯಿ ಫುಲೆ ಅವರ 190ನೇ ಜನ್ಮದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಶೋಷಣೆಗೆ ಒಳಗಾಗಿದ್ದ ಹೆಣ್ಣುಮಕ್ಕಳಿಗೆ ಪರಿಹಾರ ನೀಡುವ ಸಂದರ್ಭ ಒದಗಿ ಬಂದಾಗ ಅವರು ಜೊತೆಗೆ ಜ್ಯೋತಿಬಾ ಫುಲೆ ಅವರು ನಿರಂತರವಾಗಿ ಬೆಂಬಲವಾಗಿ ನಿಂತರು ಎಂದರು.

‘ಗರ್ಭಿಣಿಯಾದ ವಿಧವೆಯೊಬ್ಬರು ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದ ಸಂದರ್ಭದಲ್ಲಿ ಅವರನ್ನು ತಡೆದ ಸಾವಿತ್ರಿಬಾಯಿ ಆಕೆಯನ್ನು ಮನೆಗೆ ಕರೆತಂದು ಆರೈಕೆ ಮಾಡಿ ಹೆರಿಗೆಗೆ ವ್ಯವಸ್ಥೆ ಮಾಡಿದರ. ನಂತರ ಮಗುವನ್ನೂ ನೋಡಿಕೊಳ್ಳುವ ಜವಾಬ್ದಾರಿ ನಿರ್ವಹಿಸಿದರು. ಇಂತಹ ಎಷ್ಟೋ ಹೆಣ್ಣುಮಕ್ಕಳಿಗೆ ಸಹಾಯವಾಗುವಂತೆ ತನ್ನ ಮನೆಯನ್ನು ತೆರೆದರು ಎಂದು ಹೇಳಿದರು.

ಎಐಎಂಎಸ್‌ಎಸ್ ಜಿಲ್ಲಾ ಕಾರ್ಯದರ್ಶಿ ಗೌರಮ್ಮ ಸಿ.ಕೆ. ಮಾತನಾಡಿ, ‘ಹೆಣ್ಣುಮಕ್ಕಳು ನಿಜವಾದ ಅರ್ಥದಲ್ಲಿ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಸಾವಿತ್ರಿಬಾಯಿ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅವರ ಜೀವನ ಮುಡಿಪಾಗಿಟ್ಟಿದ್ದರು. ಅವರು ಹುಟ್ಟಿದ್ದೇ ಹೋರಾಟಕ್ಕೆ ಎಂದು ಭಾವಿಸಿದ್ದರು. ಹಲವಾರು ಸಮಸ್ಯೆಗಳ ವಿರುದ್ಧ ಹೋರಾಟ ಕಟ್ಟಲು ಮುಂದೆ ಬಂದ ಸಾವಿತ್ರಿಬಾಯಿ ಪುಲೆ ಅವರು ಇಂದು ಹೆಣ್ಣುಮಕ್ಕಳಿಗೆ ಸ್ಫೂರ್ತಿಯಾಗಿದ್ದಾರೆ. ಬಾಲ್ಯವಿವಾಹ, ವಿಧವೆಯರ ಮರುವಿವಾಹ, ಅನಾಥಶ್ರಮ, ಅಂತರ್ಜಾತಿ ವಿವಾಹಕ್ಕೆ ಬೆಂಬಲ ಹೀಗೆ ಹಲವಾರು ಸಮಸ್ಯೆಗಳು ವಿರುದ್ದ ಹೋರಾಟ ನಡೆಸಿದರು. ಇಂದಿನ ಸರ್ಕಾರ ಭಂಡತನ ತೋರುತ್ತಿರುವುದರಿಂದ ಹೆಣ್ಣು ಮಕ್ಕಳ ಸಮಸ್ಯೆಗಳ ದೇಶದಾದ್ಯಂತ ತಾಂಡವವಾಡುತ್ತಿವೆ. ದೆಹಲಿಯಲ್ಲಿ ನಡೆಯುತ್ತಿರುವ ಐತಿಹಾಸಿಕ ರೈತ ಹೋರಾಟ ನಮ್ಮ ಮುಂದೆ ಇದೆ. ಇವತ್ತು ದೇಶದ ಎಲ್ಲಾ ಕಾರ್ಮಿಕ ವರ್ಗದ ಜನರು ವಿದ್ಯಾರ್ಥಿ, ಮಹಿಳೆಯರು, ಯುವಕರು ಹೋರಾಟ ಬೆಳೆಸಬೇಕಾಗಿದೆ. ಬಂಡವಾಳಶಾಹಿ ಸಮಾಜದ ವಿರುದ್ಧ ದೇಶದ ಎಲ್ಲಾ ಹೆಣ್ಣುಮಕ್ಕಳು ಹೋರಾಟಕ್ಕೆ ಇಳಿಯಬೇಕಾಗಿದೆ ಎಂದರು,.

ಎಐಎಂಎಸ್‌ಎಸ್ ಜಿಲ್ಲಾ ಅಧ್ಯಕ್ಷ ಗುಂಡಮ್ಮ ಮಡಿವಾಳ, ಜಯಶ್ರೀ ಕೆ. ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.