ಕಲಬುರಗಿ: ‘ದಾಸ ಸಾಹಿತ್ಯವು ಸಾರ್ವತ್ರಿಕ, ಸಾರ್ವಕಾಲಿಕ ಸಾಹಿತ್ಯವಾಗಿದ್ದು, ಮಾನವೀಯ ಮೌಲ್ಯಗಳನ್ನು ಸಾರುವುದಾಗಿದೆ. ದಾಸ ಸಾಹಿತ್ಯದಲ್ಲಿ ಸಾಮರಸ್ಯ ನೆಲೆಗಳನ್ನು ಗುರುತಿಸಿ ದಾಸರು ಜಾತ್ಯತೀತ ಮನೋಭಾವವನ್ನು ಹಿಡಿದಿಟ್ಟಿದ್ದಾರೆ’ ಎಂದು ಸಿದ್ದಲಿಂಗೇಶ್ವರ ಬುಕ್ ಡಿಪೊ ಹಾಗೂ ಪ್ರಕಾಶನದ ಮುಖ್ಯಸ್ಥ ಬಸವರಾಜ ಕೊನೇಕ್ ಅಭಿಪ್ರಾಯಪಟ್ಟರು.

ಶ್ರೀವಿಜಯ ಪ್ರಕಾಶನ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಭಾನುವಾರ ಕನ್ನಡ ಭವನದಲ್ಲಿ ಆಯೋಜಿಸಿದ್ದ ಹಿರಿಯ ಪತ್ರಕರ್ತ ಶ್ರೀನಿವಾಸ ಸಿರನೂರಕರ್ ರಚಿಸಿದ ‘ದಾಸ ಸಾಹಿತ್ಯದ ಆಧುನಿಕ ಆಯಾಮಗಳು’ ಹಾಗೂ ‘ಕಲ್ಯಾಣ ಕರ್ನಾಟಕದ ಅರಣ್ಯರೋದನ’ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

‘ಕಲ್ಯಾಣ ಕರ್ನಾಟಕದ ಅರಣ್ಯರೋದನ ಕೃತಿಯಲ್ಲಿ ಈ ಭಾಗದ ಪ್ರಗತಿಗೆ ಅಗತ್ಯವಾದುದನ್ನು ಆಡಳಿತ ನಡೆಸಿದವರು, ನಡೆಸುವವರು ಗಮನಹರಿಸಬೇಕು ಎಂಬುದನ್ನು ಅಧಿಕೃತವಾಗಿ ಮನಗಾಣಿಸಿದ್ದಾರೆ. ಸಿರನೂರಕರ್ ಈ ಭಾಗದ ಆರ್ಥಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರದ ಜಾಗೃತಿ ಮೂಡಿಸಿದ್ದಾರೆ’ ಎಂದರು.

‘ದಾಸ ಸಾಹಿತ್ಯದ ಆಧುನಿಕ ಆಯಾಮಗಳು’ ಕೃತಿ ಕುರಿತು ಮಾತನಾಡಿದ ನಿವೃತ್ತ ಪ್ರಾಧ್ಯಾಪಕ ವ್ಯಾಸರಾಜ ಸಂತೆಕೆಲ್ಲೂರ, ‘ದಾಸ ಸಾಹಿತ್ಯ ಬದುಕಿನಲ್ಲಿ ನೈತಿಕತೆ ತುಂಬುವ ಸಾರ್ವತ್ರಿಕ ಮೌಲ್ಯಗಳನ್ನು ಸಾರುತ್ತದೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕೃತಿಗಳ ಕರ್ತೃ ಶ್ರೀನಿವಾಸ ಸಿರನೂರಕರ್ ಮಾತನಾಡಿ, ‘ಉತ್ತಮ ಆಡಳಿತ ಎಂಬುದೇ ಭ್ರಮೆಯಾಗಿದೆ. ಅತ್ಯಂತ ಸಂಪದ್ಭರಿತ ಸಾಮ್ರಾಜ್ಯದಲ್ಲಿಯೂ ಉತ್ತಮ ಆಡಳಿತ ಎಂಬುದು ನೋಡಲು ಸಿಗುವುದಿಲ್ಲ. ಅಂತಹ ಆಡಳಿತ ಬರೀ ಕಲ್ಪನೆಯಲ್ಲಿ ಮಾತ್ರ ಸಾಧ್ಯ. ಕಲಬುರಗಿ ನಗರದ ರಸ್ತೆಗಳನ್ನು ನೋಡಿದರೆ ಇಲ್ಲಿನ ಆಡಳಿತ ಹೇಗಿದೆ ಎಂಬುದು ಗೊತ್ತಾಗುತ್ತದೆ. ಇಲ್ಲಿನ ಐಎಎಸ್, ಐಪಿಎಸ್ ಅಧಿಕಾರಿಗಳು ಹೇಗೆ ಕೆಲಸ ಮಾಡುತ್ತಾರೋ ತಿಳಿಯಬಹುದು’ ಎಂದು ಬೇಸರ ವ್ಯಕ್ತಪಡಿಸಿದರು.

‘ದಾಸ ಸಾಹಿತ್ಯದ ಬಗ್ಗೆ ಮೊದಲು ಅಷ್ಟೊಂದು ಆಸಕ್ತಿ ಇರಲಿಲ್ಲ. ಸಾಹಿತಿ ಸ್ವಾಮಿರಾವ ಕುಲಕರ್ಣಿ ಅವರು ಅಭಿನಂದನ ಗ್ರಂಥವೊಂದನ್ನು ನೀಡಿದಾಗ ಅದನ್ನು ಓದಿದೆ. ಆಗ ದಾಸ ಸಾಹಿತ್ಯದ ಹೆಬ್ಬಾಗಿಲೇ ತೆರೆದಂತಾಯಿತು. ಪುರಂದರದಾಸರ ಕೀರ್ತನೆಗಳಲ್ಲಿ ಬಂಡಾಯ ವಿಷಯ ಕುರಿತು ಉಪನ್ಯಾಸ ನೀಡಿದೆ. ಅಲ್ಲಿಂದ ದಾಸ ಸಾಹಿತ್ಯದ ಅಧ್ಯಯನ ಶುರು ಮಾಡಿದೆ. ಸಾಕಷ್ಟು ವಿಚಾರಗಳನ್ನು ದಾಸರು 600 ವರ್ಷಗಳ ಹಿಂದೆಯೇ ಕೀರ್ತನೆಗಳ ಮೂಲಕ ತಿಳಿಸಿದ್ದಾರೆ’ ಎಂದರು.

‘ಕಲ್ಯಾಣ ಕರ್ನಾಟಕದ ಸಮಸ್ಯೆಗಳು ಇಂದಿಗೂ ಆಳುವವರಿಗೆ ಕೇಳಿಸುತ್ತಲೇ ಇಲ್ಲ. ಭಾರತ ಸರ್ಕಾರ ಹೈದರಾಬಾದ್ ಕರ್ನಾಟಕ ಕುರಿತು ಹೊರಡಿಸಿದ ಮೊಟ್ಟ ಮೊದಲ ಶ್ವೇತಪತ್ರವನ್ನು ಆಧರಿಸಿ ಹಲವು ಸಂಗತಿಗಳನ್ನು ಕಲ್ಯಾಣ ಕರ್ನಾಟಕದ ಅರಣ್ಯರೋದನ ಕೃತಿಯಲ್ಲಿ ದಾಖಲಿಸಿದ್ದೇನೆ. ಜೊತೆಗೆ ಗೆಜೆಟಿಯರ್, ಜನಪದ ಸಾಹಿತ್ಯವನ್ನು ಆಧರಿಸಿ ಹಲವು ಸಂಗತಿಗಳನ್ನು ನಿರುದ್ವಿಗ್ನವಾಗಿ ದಾಖಲಿಸಿದ್ದೇನೆ’ ಎಂದು ಹೇಳಿದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಸಂಜೀವ ಸಿರನೂರಕರ್ ಸ್ವಾಗತಿಸಿದರು. ಸ್ನೇಹಾ ಸಿರನೂರಕರ್ ಪ್ರಾರ್ಥಿಸಿದರು. ವೆಂಕಟೇಶ ಮುದಗಲ್ ನಿರೂಪಿಸಿದರು.

ಗೊರಟಾ ಹತ್ಯಾಕಾಂಡದ ಉಲ್ಲೇಖವೇ ಇಲ್ಲ’

ಆ ಕಾಲದಲ್ಲಿ ಲಭ್ಯವಿದ್ದ ದಾಖಲೆಗಳು ಪತ್ರಿಕಾ ವರದಿಗಳು ಹಾಗೂ ಸರ್ಕಾರದ ವರದಿಗಳಲ್ಲಿ ರಜಾಕಾರರಿಂದ ಬೀದರ್ ಜಿಲ್ಲೆಯ ಗೊರಟಾದಲ್ಲಿ ನಡೆದ ಹತ್ಯಾಕಾಂಡದ ಉಲ್ಲೇಖವೇ ಇಲ್ಲ ಎಂದು ರಾಜ್ಯ ಪತ್ರಾಗಾರ ಇಲಾಖೆಯ ಕಲಬುರಗಿ ವಿಭಾಗದ ಹಿರಿಯ ಸಹಾಯಕ ನಿರ್ದೇಶಕ ವೀರಶೆಟ್ಟಿ ಗಾರಂಪಳ್ಳಿ ಅಭಿಪ್ರಾಯಪಟ್ಟರು.

‘ಹೈದರಾಬಾದ್ ಸಂಸ್ಥಾನದ ಆಡಳಿತ ನಿರ್ವಹಣೆಗೆ ಭಾರತ ಸರ್ಕಾರದ ಪ್ರತಿನಿಧಿಯಾಗಿದ್ದ ಕೆ.ಎಂ. ಮುನ್ಷಿ ಅವರು ಆಗಾಗ್ಗೆ ಸರ್ಕಾರಕ್ಕೆ ವರದಿಗಳನ್ನು ಕಳುಹಿಸುತ್ತಿದ್ದರು. ಗೊರಟಾ ಹತ್ಯಾಕಾಂಡದ ಬಗ್ಗೆ ಯಾವುದೇ ಉಲ್ಲೇಖ ಮಾಡಿಲ್ಲ. ಆ ಕಾಲದ ಹೈದರಾಬಾದ್ ಸಂಸ್ಥಾನದ ವ್ಯಾಪ್ತಿಯ ಹಾಗೂ ಬೇರೆ ಪ್ರದೇಶದ ದಿನಪತ್ರಿಕೆಗಳಲ್ಲಿಯೂ ಈ ವಿವರ ಕಾಣಿಸುವುದಿಲ್ಲ. ಅಲ್ಲಿ 700ಕ್ಕೂ ಅಧಿಕ ಜನ ಹತ್ಯಾಕಾಂಡಕ್ಕೆ ಬಲಿಯಾದರು ಎಂದು ಹೇಳಲಾಗುತ್ತಿದೆ. ಆದರೆ ಆಗ ಅಲ್ಲಿನ ಜನಸಂಖ್ಯೆಯೇ ಅಷ್ಟಿರಲಿಲ್ಲ. ಈಗಲೂ ಆ ಗ್ರಾಮದ ಜನಸಂಖ್ಯೆ 3 ಸಾವಿರ ಮಾತ್ರ ಇದೆ. ಇತಿಹಾಸಕ್ಕೆ ಎರಡು ಮಗ್ಗಲುಗಳಿದ್ದು ಇನ್ನೊಂದು ಮಗ್ಗುಲನ್ನು ಹುಡುಕುವ ಪ್ರಯತ್ನ ಮಾಡಬೇಕಿದೆ. ಈಗಲೂ ಆ ಗ್ರಾಮದ ಫಲಕದಲ್ಲಿ ಮೃತಪಟ್ಟವರ 23 ಹೆಸರುಗಳನ್ನಷ್ಟೇ ಬರೆಯಲಾಗಿದೆ’ ಎಂದರು.

ಶ್ರೀಕೃಷ್ಣದೇವರಾಯನ ಕಾಲದಲ್ಲಿ ವಿಜಯನಗರದ ರಸ್ತೆಗಳಲ್ಲಿ ವಜ್ರ–ವೈಢೂರ್ಯಗಳನ್ನು ಮಾರುತ್ತಿದ್ದರು ಎಂದು ಹೇಳಲಾಗುತ್ತಿದೆ. ಮತ್ತೊಂದು ಕಡೆ ಶ್ರೀಕೃಷ್ಣದೇವರಾಯ ಅರಮನೆಯಿಂದ ಹೊರಗೆ ಹೋಗುವಾಗ ಹಲವಾರು ಭಿಕ್ಷುಕರು ಭಿಕ್ಷೆಗಾಗಿ ಕಾಯುತ್ತಿದ್ದರಂತೆ. ಆ ಸಾಮ್ರಾಜ್ಯ ಶ್ರೀಮಂತವಾಗಿದ್ದರೆ ಭಿಕ್ಷೆ ಬೇಡುವ ಸ್ಥಿತಿ ಏಕೆ ಬರುತ್ತಿತ್ತು ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.