ಚಿಂಚೋಳಿ: ಜುಲೈ 19 ಮತ್ತು 22ರಂದು ನಡೆಯುವ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗೆ ತಾಲ್ಲೂಕಿನಲ್ಲಿ 3,166 ವಿದ್ಯಾರ್ಥಿಗಳು ಹಾಜರಾಗುವರು. ಅಗತ್ಯವಾದ ಎಲ್ಲ ಸಿದ್ಧತೆಗಳು ಪೂರ್ಣಗೊಳಿಸಲಾಗಿದೆ‘ ಎಂದು ಬಿಇಒ ರಾಚಪ್ಪ ಭದ್ರಶೆಟ್ಟಿ ತಿಳಿಸಿದರು.
1,656 ಬಾಲಕರು ಮತ್ತು 1,429 ಬಾಲಕಿಯರು ಸೇರಿ ಒಟ್ಟು 3,085 ವಿದ್ಯಾರ್ಥಿಗಳು ಇದ್ದಾರೆ. 81 ವಲಸೆ ವಿದ್ಯಾರ್ಥಿಗಳು ರಾಜ್ಯದ ವಿವಿಧಡೆ ನೋಂದಣಿ ಮಾಡಿಕೊಂಡಿದ್ದು, ಅವರೂ ತಾಲ್ಲೂಕಿನಲ್ಲಿ ಪರೀಕ್ಷೆ ಬರೆಯಲಿದ್ದಾರೆ ಎಂದರು.
ಅನುತ್ತೀರ್ಣರಾದವರು ಕೂಡ ಪರೀಕ್ಷೆಗೆ ಹಾಜರಾಗುವರು. ಅವರಿಗೆ ಮೂರು ವಿಷಯಗಳ ಪ್ರಶ್ನೆ ಪತ್ರಿಕೆ ವಿತರಿಸಲಾಗುತ್ತದೆ. ಆದರೆ, ವಿದ್ಯಾರ್ಥಿ ತಾನು ಅನುತೀರ್ಣವಾದ ವಿಷಯದ ಪ್ರಶ್ನೆಗೆ ಮಾತ್ರವೇ ಉತ್ತರ ದಾಖಲಿಸಬೇಕು ಎಂದು ಹೇಳಿದರು.
ಚಿಂಚೋಳಿ ವೀರೇಂದ್ರ ಪಾಟೀಲ ಕನ್ನಡ ಮಾಧ್ಯಮ ಶಾಲೆ, ಸರ್ಕಾರಿ ಕನ್ಯಾ ಪ್ರೌಢ ಶಾಲೆ, ಚಂದಾಪುರ ಸರ್ಕಾರಿ ಪಿಯು ಕಾಲೇಜು, ಹಾರಕೂಡ ಶಾಲೆ, ಪೋಲಕಪಳ್ಳಿ ಆದರ್ಶ ವಿದ್ಯಾಲಯ, ಐನಾಪುರ, ಐನೋಳ್ಳಿ, ಚಿಮ್ಮನಚೋಡ, ರಟಕಲ್, ಚಂದನಕೇರಾ, ಕಲ್ಲೂರು ರೋಡ್ ಸರ್ಕಾರಿ ಪ್ರೌಢ ಶಾಲೆ, ಸುಲೇಪೇಟ ಸರ್ಕಾರಿ ಕನ್ಯಾ ಪ್ರೌಢ ಶಾಲೆ, ಗುರುನಂಜೇಶ್ವರ ಶಾಲೆ ಮತ್ತು ಸರ್ಕಾರಿ ಪಿಯು ಕಾಲೇಜು, ಕೋಡ್ಲಿ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಗಳಲ್ಲಿ 15 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ.
ವೀರೇಂದ್ರ ಪಾಟೀಲ ಆಂಗ್ಲ ಮಾಧ್ಯಮ ಮತ್ತು ಹೆಲೆನ್ಸ ಪಿಯು ಕಾಲೇಜಿನಲ್ಲಿ 2 ಮೀಸಲು ಕೇಂದ್ರಗಳನ್ನು ಕೋವಿಡ್ ದೃಢಪಟ್ಟವರಿಗೆ ಮೀಸಲಿಡಲಾಗಿದೆ.
ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ 2 ಮಾಸ್ಕ್‌ಗಳನ್ನು ವಿತರಿಸಲಾಗಿದೆ. ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಪರೀಕ್ಷೆಗೆ ಹಾಜರಾಗಬೇಕು. ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಒಬ್ಬ ಸ್ಕೌಟ್ ಮತ್ತು ಗೈಡ್ಸ್ ಸ್ವಯಂ ಸೇವಕರು, ಆರೋಗ್ಯ ಇಲಾಖೆಯ ಇಬ್ಬರು ಮತ್ತು ಅಂಗನವಾಡಿ ಕಾರ್ಯಕರ್ತರು ಇರುತ್ತಾರೆ. ಎಲ್ಲ ಮಕ್ಕಳಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡುವರು.
ಸಿದ್ಧತಾ ಸಭೆ: ಪರೀಕ್ಷೆ ಪೂರ್ವಭಾವಿ ಸಭೆಯನ್ನು ಈಗಾಗಲೇ ಮೂರು ಬಾರಿ ಬಿಆರ್‌ಸಿ ಕೇಂದ್ರದಲ್ಲಿ ನಡೆಸಲಾಗಿದೆ. ಉಪ ನಿರ್ದೆಶಕ ಅಶೋಕ ಭಜಂತ್ರಿ ಅವರು ಪರೀಕ್ಷೆಯ ನಿಯಮಗಳನ್ನು ಮನದಟ್ಟು ಮಾಡಿದ್ದಾರೆ. ‘ಮಕ್ಕಳು ನಿರ್ಭಯವಾಗಿ ಪರೀಕ್ಷೆಗೆ ಬಂದು ಪರೀಕ್ಷೆ ಬರೆಯಬೇಕು‘ ಎಂದರು.
*ಒಂದು ಪ್ರಶ್ನೆ ಪತ್ರಿಕೆ ಮೂರು ವಿಷಯ ಒಳಗೊಂಡಿದ್ದು, ಪ್ರತಿ ವಿದ್ಯಾರ್ಥಿಗೆ 3 ಒಎಂಆರ್ ಶೀಟ್ ನೀಡಲಾಗುತ್ತದೆ. ಇದರಲ್ಲಿ ವಸ್ತುನಿಷ್ಠ ಉತ್ತರ ದಾಖಲಿಸಬೇಕು
ರಾಚಪ್ಪ ಭದ್ರಶೆಟ್ಟಿ, ಬಿಇಒ ಚಿಂಚೋಳಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.