ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ ಜಿಲ್ಲೆಯಲ್ಲಿ 2,236 ಶಿಕ್ಷಕ ಹುದ್ದೆಗಳು ಖಾಲಿ

ಪೂರ್ಣಪ್ರಮಾಣದಲ್ಲಿ ವಿಷಯವಾರು ತರಗತಿ ನಡೆಸುವುದು ಇಲಾಖೆಗೆ ದೊಡ್ಡ ಸವಾಲು
ವಿಶ್ವರಾಧ್ಯ ಎಸ್‌.ಹಂಗನಳ್ಳಿ
Published 30 ಮೇ 2024, 4:35 IST
Last Updated 30 ಮೇ 2024, 4:35 IST
ಅಕ್ಷರ ಗಾತ್ರ

ಕಲಬುರಗಿ: ಜಿಲ್ಲೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 1,856 ಹಾಗೂ ಪ್ರೌಢಶಾಲೆಗಳಲ್ಲಿ 380 ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, ಮಕ್ಕಳ ವಿದ್ಯಾಭ್ಯಾಸ ಮತ್ತು ಶೈಕ್ಷಣಿಕ ಪ್ರಗತಿ ಮೇಲೆ ದುಷ್ಪರಿಣಾಮ ಬೀರಬಹುದು ಎಂಬ ಆತಂಕ ಪಾಲಕರನ್ನು ಕಾಡುತ್ತಿದೆ.

ಜಿಲ್ಲೆಯ 1,757 ಪ್ರಾಥಮಿಕ ಶಾಲೆಗಳಲ್ಲಿ ಒಟ್ಟು 8,063 ಶಿಕ್ಷಕರ ಮಂಜೂರಾತಿ ಹುದ್ದೆಗಳಿದ್ದು, 6,207 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಅದರಂತೆ 298 ಪ್ರೌಢಶಾಲೆಗಳಲ್ಲಿ ಒಟ್ಟು 2,061 ಶಿಕ್ಷಕರ ಮಂಜೂರಾತಿ ಹುದ್ದೆಗಳ ಪೈಕಿ 1,681 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. 1ರಿಂದ 8ನೇ ತರಗತಿಯವರೆಗೆ (ಪ್ರಾಥಮಿಕ) ಒಟ್ಟಾರೆ ಶೇ 23.01ರಷ್ಟು ಶಿಕ್ಷಕ ಹುದ್ದೆಗಳು ಖಾಲಿ ಇದ್ದರೆ, 9 ಮತ್ತು 10ನೇ ತರಗತಿವರೆಗೆ (ಪ್ರೌಢ) ಶೇ 18.43ರಷ್ಟು ಖಾಲಿ ಇವೆ.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಶಾಸಕ ಡಾ.ಅಜಯ್‌ಸಿಂಗ್‌ ಅವರು ಪ್ರತಿನಿಧಿಸುವ ಜೇವರ್ಗಿ ವಲಯದಲ್ಲಿಯೇ ಅತಿ ಹೆಚ್ಚು 429 ಪ್ರಾಥಮಿಕ ಹಾಗೂ 61 ಪ್ರೌಢಶಾಲಾ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಅದರ ನಂತರದಲ್ಲಿ ಚಿಂಚೋಳಿ ವಲಯದಲ್ಲಿ 371 ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ 78 ಹುದ್ದೆಗಳು ಖಾಲಿ ಇವೆ.

ವಿಷಯವಾರು ಖಾಲಿ ಹುದ್ದೆಗಳು: ಪ್ರೌಢಶಾಲೆಗಳಲ್ಲಿ ಸಮಾಜ ವಿಜ್ಞಾನ ಶಿಕ್ಷಕರು–86 ಹುದ್ದೆ, ಇಂಗ್ಲಿಷ್‌–73, ಹಿಂದಿ–42, ಕನ್ನಡ–72, ಮರಾಠಿ–3, ಉರ್ದು–8, ಗಣಿತ–25, ವಿಜ್ಞಾನ–71 ಹುದ್ದೆಗಳು ಖಾಲಿ ಇವೆ.

ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಖಾಲಿ ಹುದ್ದೆಗಳು: ವಿಜ್ಞಾನ–87, ಇಂಗ್ಲಿಷ್‌–7, ಹಿಂದಿ–39, ಕನ್ನಡ– 175, ಮರಾಠಿ–4, ಗಣಿತ–166, ಸಮಾಜ ವಿಜ್ಞಾನ–29, ತೆಲುಗು–1, ಉರ್ದು–45.

ಪ್ರಾಥಮಿಕ ಶಾಲಾ ಶಿಕ್ಷಕರ ಖಾಲಿ ಹುದ್ದೆಗಳು: ಇಂಗ್ಲಿಷ್‌–434, ಹಿಂದಿ–162, ಕನ್ನಡ– 151, ಗಣಿತ–531, ಉರ್ದು–15. ನರ್ಸರಿ ಶಿಕ್ಷಕರು: ಕನ್ನಡ–7, ಉರ್ದು–3 ಹುದ್ದೆಗಳು ಖಾಲಿ ಇವೆ. ಇದರಿಂದ ಪೂರ್ಣಪ್ರಮಾಣದಲ್ಲಿ ವಿಷಯವಾರು ತರಗತಿಗಳನ್ನು ನಡೆಸುವುದು ಶಿಕ್ಷಣ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಫಲಿತಾಂಶ ಕುಸಿತಕ್ಕೆ ಕಾರಣ: ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ಕಲಬುರಗಿ ಜಿಲ್ಲೆ 29ನೇ ಸ್ಥಾನದಿಂದ 34ನೇ ಸ್ಥಾನಕ್ಕೆ ಕುಸಿದಿದೆ. ಜಿಲ್ಲೆಗೆ ಶೇ 53.04ರಷ್ಟು ಫಲಿತಾಂಶ ಬಂದಿದ್ದು, ಶೇ 31.47ರಷ್ಟು ಕುಸಿತ ಕಂಡಿದೆ. ಇದಕ್ಕೆ ಶಿಕ್ಷಕರ ಖಾಲಿ ಹುದ್ದೆಗಳೇ ಮುಖ್ಯ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ತುಳಜರಾಮ ಎನ್‌.ಕೆ.
ತುಳಜರಾಮ ಎನ್‌.ಕೆ.
ಸಕ್ರೆಪ್ಪಗೌಡ ಜಿ.ಬಿರಾದಾರ
ಸಕ್ರೆಪ್ಪಗೌಡ ಜಿ.ಬಿರಾದಾರ

‌ಜಿಲ್ಲೆಯ ಎಷ್ಟೋ ಶಾಲೆಗಳಲ್ಲಿ ಏಕೋಪಾಧ್ಯಾಯರೇ ಪಾಠ ಬೋಧನೆ ಬಿಸಿಯೂಟ ಸೇರಿದಂತೆ ಸರ್ಕಾರಿ ಯೋಜನೆಗಳ ಅನುಷ್ಠಾನಕ್ಕೆ ಪರದಾಡುತ್ತಾರೆ. ಇದರ ನೇರ ಪರಿಣಾಮ ಮಕ್ಕಳ ಮೇಲೆ ಬೀರುತ್ತದೆ. ಶಿಕ್ಷಕರ ನೇಮಕವೇ ಇದಕ್ಕೆ ಪರಿಹಾರ.

–ತುಳಜರಾಮ ಎನ್‌.ಕೆ ಜಿಲ್ಲಾ ಕಾರ್ಯದರ್ಶಿ ಎಐಡಿಎಸ್‌ಒ

ಜಿಲ್ಲೆಯಲ್ಲಿ 2236 ಶಿಕ್ಷಕರ ಖಾಲಿ ಹುದ್ದೆಗಳಿದ್ದು ಆಯುಕ್ತರಿಂದ ಆದೇಶ ಬಂದ ಕೂಡಲೇ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು. ಬಹುತೇಕ ಕಳೆದ ಬಾರಿಯ ಅತಿಥಿ ಶಿಕ್ಷಕರೇ ಇರುವುದರಿಂದ ನೇಮಕ ಪ್ರಕ್ರಿಯೆ ವಿಳಂಬವಾಗುವುದಿಲ್ಲ.

–ಸಕ್ರೆಪ್ಪಗೌಡ ಜಿ.ಬಿರಾದಾರ ಡಿಡಿಪಿಐ ಕಲಬುರಗಿ

722 ಗಣಿತ ಶಿಕ್ಷಕರಿಲ್ಲ!

ಕಲಬುರಗಿ ಜಿಲ್ಲೆಯ ಬಹುತೇಕ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ಮತ್ತು ಗಣಿತ ವಿಷಯಗಳು ಕಬ್ಬಿಣದ ಕಡಲೆಯಿದ್ದಂತೆ. ಆದರೆ ಈ ವಿಷಯಗಳು ಅತ್ಯಂತ ಸರಳ ಎಂದು ಹೇಳಲು ಶಾಲೆಗಳಲ್ಲಿ ಶಿಕ್ಷಕರಿಲ್ಲ. 1ರಿಂದ 10ನೇ ತರಗತಿವರೆಗೆ ವಿಷಯವಾರು ಖಾಲಿ ಇರುವ ಒಟ್ಟು 2236 ಹುದ್ದೆಗಳ ಪೈಕಿ 514 ಇಂಗ್ಲಿಷ್‌ ಶಿಕ್ಷಕರಿಲ್ಲ. 722 ಗಣಿತ ಶಿಕ್ಷಕರಿಲ್ಲ!

ಪ್ರಾಥಮಿಕ ಶಾಲಾ ಶಿಕ್ಷಕರ ಖಾಲಿ ಹುದ್ದೆಗಳ ವಿವರ

ವಲಯ;ಮಂಜೂರು;ಕಾರ್ಯನಿರತ;ಖಾಲಿ ಅಫಜಲಪುರ;962;782;180 ಆಳಂದ;1169;957;212 ಚಿಂಚೋಳಿ;1010;639;371 ಚಿತ್ತಾಪುರ;1282;999;283 ಕಲಬುರಗಿ ಉತ್ತರ;752;680;72 ಕಲಬುರಗಿ ದಕ್ಷಿಣ;733;663;70 ಜೇವರ್ಗಿ;1324;895;429 ಸೇಡಂ;831;592;239 ಒಟ್ಟು;8063;6207;1856

ಪ್ರೌಢಶಾಲಾ ಶಿಕ್ಷಕರ ಖಾಲಿ ಹುದ್ದೆಗಳ ವಿವರ ವಲಯ;ಮಂಜೂರು;ಕಾರ್ಯನಿರತ;ಖಾಲಿ ಅಫಜಲಪುರ;236;204;32 ಆಳಂದ;327;260;67 ಚಿಂಚೋಳಿ;349;271;78 ಚಿತ್ತಾಪುರ;225;161;64 ಕಲಬುರಗಿ ಉತ್ತರ;215;203;12 ಕಲಬುರಗಿ ದಕ್ಷಿಣ;197;193;4 ಜೇವರ್ಗಿ;281;220;61 ಸೇಡಂ;231;169;62 ಒಟ್ಟು;2061;1681;380

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT