ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಡಿ: ಕಳ್ಳನನ್ನು ಬಂಧಿಸಿ 30 ಬೈಕ್‌ ವಶಪಡಿಸಿಕೊಂಡ ಪೊಲೀಸರು

Published 14 ಜುಲೈ 2023, 6:30 IST
Last Updated 14 ಜುಲೈ 2023, 6:30 IST
ಅಕ್ಷರ ಗಾತ್ರ

ವಾಡಿ: ನಕಲಿ ಕೀ ಬಳಸಿ ದ್ವಿಚಕ್ರ ವಾಹನಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ವಾಡಿ ಪೊಲೀಸರು ಬಂಧಿಸಿ ಆತನಿಂದ ಒಟ್ಟು 30 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪಟ್ಟಣದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಲಬುರಗಿ, ಯಾದಗಿರಿ ಪಟ್ಟಣ ಹಾಗೂ ಜಿಲ್ಲೆಯ ವಿವಿಧೆಡೆ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಕಲಬುರಗಿ ನಿವಾಸಿ ರಫೀಕ್ ಎನ್ನುವ ಆರೋಪಿಯ ಮೇಲೆ ವಿವಿಧ ಠಾಣೆಗಳಲ್ಲಿ ಇಂತಹದ್ದೇ ಪ್ರಕರಣಗಳಿವೆ. ಆರೋಪಿಯ ಹಿಂದೆ ಇರುವ ಇನ್ನಿತರರ ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ ಎಂದರು.

‘ಹಲವು ಸಲ ಜೈಲು ಪಾಲಾಗಿದ್ದ ವ್ಯಕ್ತಿ ನಂತರ ಕಳ್ಳತನ ಮುಂದುವರೆಸಿದ್ದ. ಆರೋಪಿ ಬಳಿ ಬೈಕ್ ಖರೀದಿಸಿದ್ದ ಇಬ್ಬರನ್ನು ಸಹ ವಶಕ್ಕೆ ಪಡೆಯಲಾಗಿದೆ. ಸೂಕ್ತ ದಾಖಲೆಗಳಿಲ್ಲದ ವಾಹನಗಳನ್ನು ಖರೀದಿ ಮಾಡುವುದು ಸಹ ಅಪರಾಧ’ ಎಂದರು.

ಚಿತ್ತಾಪುರ ಸಿಪಿಐ ಪ್ರಕಾಶ ಯಾತನೂರು, ವಾಡಿ ಪಿಎಸ್‌ಐ ಮಹಾಂತೇಶ ಪಾಟೀಲ, ಸಿಬ್ಬಂದಿಯ ಕಾರ್ಯವನ್ನು ಶ್ಲಾಘಿಸಿದರು. ಸಿಪಿಐ ಪ್ರಕಾಶ ಯಾತನೂರು, ಪಿಎಸ್‌ಐ ಮಹಾಂತೇಶ ಪಾಟೀಲ, ವಾಡಿ ಠಾಣೆಯ ಅಪರಾಧ ವಿಭಾಗದ ಪಿಎಸ್‌ಐ ಶಿವಕಾಂತ ಕಮಲಾಪುರ, ಎಎಸ್‌ಐ ಚನ್ನಮಲ್ಲಪ್ಪ ಪಾಟೀಲ, ಕಾನ್ಸ್‌ಸ್ಟೆಬಲ್‌ ಲಕ್ಷ್ಮಣ ತಳಕೇರಿ, ಶೇಖ ಮಹೆಬೂಬ್, ಕೊಟ್ರೇಶ ಕನಕ, ವಿಶ್ವನಾಥ ಹೂಗಾರ, ಅಂಕುಶ ಇದ್ದರು.

50 ಗ್ರಾಂ ಚಿನ್ನ ವಶಕ್ಕೆ

ಚಿಂಚೋಳಿ: ತಾಲ್ಲೂಕಿನ ಚಿಮ್ಮಾಈದಲಾಯಿ ಗ್ರಾಮ‌ದ ಉಮಾಕಾಂತ ಹಾಗೂ ಚಂದಾಪುರ ಆಶ್ರಯ ಕಾಲೊನಿಯ ಈಶ್ವರಿ ಪ್ರಭು ಎಂಬುವವರ ಮನೆಯಲ್ಲಿ ನಡೆದ ಕಳವು ಪ್ರಕರಣವನ್ನು ಚಿಂಚೋಳಿ‌ ಪೊಲೀಸರು ಭೇದಿಸಿದ್ದಾರೆ.

ಗ್ರಾಮದ ಉಮೇಶ ಮಲ್ಲಪ್ಪ, ಜಗನ್ನಾಥ ತುಳಜಪ್ಪ ಅವರನ್ನು ಬಂಧಿಸಿ ₹3 ಲಕ್ಷ ಮೊತ್ತದ 50 ಗ್ರಾಂ ಬಂಗಾರ ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಇನ್ನೊಬ್ಬ ಆರೋಪಿಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT