ಗುರುವಾರ , ಜನವರಿ 27, 2022
21 °C
ಹೊಸ ವರ್ಷಾಚರಣೆ ವೇಳೆ ಕಿಡಿಗೇಡಿಗಳ ದುಷ್ಕೃತ್ಯ

ಕಲಬುರಗಿ; ಮೂರು ಬೈಕ್‌ಗಳಿಗೆ ಬೆಂಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಇಲ್ಲಿನ ಅಂಬೇಡ್ಕರ್ ನಗರದ ಆಶ್ರಯ ಕಾಲೊನಿಯಲ್ಲಿ ಶುಕ್ರವಾರ ತಡರಾತ್ರಿ ಕಿಡಿಗೇಡಿಗಳು ಮೂರು ಬೈಕ್‌ಗಳಿಗೆ ಬೆಂಕಿ ಹಚ್ಚಿದ್ದಾರೆ. ಇದರಿಂದ ಮೂರೂ ಬೈಕ್‌ಗಳು ಸಂಪೂರ್ಣವಾಗಿ ಸುಟ್ಟಿವೆ.

ಆಶ್ರಯ ಕಾಲೊನಿಯಲ್ಲಿ ಹಲವರು ಹೊಸ ವರ್ಷಾಚರಣೆ ಆಯೋಜನೆ ಮಾಡಿದ್ದರು. ತಡರಾತ್ರಿ 1 ಗಂಟೆಯವರೆಗೂ ಅಲ್ಲಲ್ಲಿ ಹಾಡು, ಕುಣಿತ, ಸಂಭ್ರಮಗಳು ನಡೆದೇ ಇದ್ದವು. ಅಲ್ಲಿಯವರೆಗೂ ಮನೆಗಳ ಮುಂದೆ ನಿಲ್ಲಿಸಿದ್ದ ಈ ಬೈಕುಗಳಿಗೆ ಏನೂ ಆಗಿರಲಿಲ್ಲ. ಆ ನಂತರ ಮನೆಯವರೆಲ್ಲ ಮಲಗಿದ ವೇಳೆ ಕಡಿಗೇಡಿಗಳು ಬೈಕ್‌ಗಳ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.