ಕಲಬುರಗಿ: ‘ಟಿಪ್ಪು ಸುಲ್ತಾನ್ ವೈಜ್ಞಾನಿಕ ಮನೋಭಾವದ ಆಡಳಿತಗಾರ. ಅವರಿಗೆ ಸಲ್ಲಬೇಕಾಗಿದ್ದಷ್ಟು ಗೌರವ, ಸನ್ಮಾನ ಮುಸ್ಲಿಮರೆಂಬ ಕಾರಣಕ್ಕಾಗಿ ಸಿಗುತ್ತಿಲ್ಲ ಎನಿಸುತ್ತಿದೆ’ ಎಂದು ಮನೂರ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಫಾರೂಕ್ ಮನೂರ್ ಅಭಿಪ್ರಾಯಪಟ್ಟರು.

ಇಲ್ಲಿನ ವಿದ್ಯಾನಗರದಲ್ಲಿ ಬಹುಜನ ಹೋರಾಟ ಸಮಿತಿಯ ನಗರ ಘಟಕದಿಂದ ಟಿಪ್ಪು ಸುಲ್ತಾನರ 275ನೇ ಜಯಂತ್ಯುತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕೋಮು ಸಾಮರಸ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಧೈರ್ಯ–ಸಾಹಸಕ್ಕೆ ಹೆಸರಾಗಿದ್ದ ಟಿಪ್ಪು ಬ್ರಿಟಿಷರನ್ನು ಸೋಲಿಸಿದ ದೇಶದ ಮೊದಲ ರಾಜ. ಅವರೊಬ್ಬ ವಿಶ್ವದ ಮೊದಲ ಮಿಸೈಲ್ ಮ್ಯಾನ್. ತಮ್ಮ ಆಡಳಿತದಲ್ಲಿ ಕ್ಷಿಪಣಿ ತಂತ್ರಜ್ಞಾನ ಬಳಸಿದ್ದರು. ಕೃಷಿ, ಶಿಕ್ಷಣ, ಸಾಮಾಜಿಕ ಸಾಮರಸ್ಯ ಸೇರಿದಂತೆ ಹಲವು ಕ್ಷೇತ್ರಗಳಿಗೆ ಅವರ ಕೊಡುಗೆ ಅಪಾರ. ಹೀಗಾಗಿ ಸರ್ಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕು’ ಎಂದು ಒತ್ತಾಯಿಸಿದರು.

‘ಟಿಪ್ಪು ಸಾಧನೆಗಳನ್ನು ಸಮಾಜ ಮರೆಯುತ್ತಿರುವುದು ನೋವಿನ ಸಂಗತಿ. ನಾನು ಇದೀಗ ಹಲವು ಸಾಮಾಜಿಕ ಚಟುವಟಿಕೆಗಳನ್ನು ಮಾಡುತ್ತಿದ್ದೇನೆ. ನಾನೂ ಮುಸ್ಲಿಂ ಎಂಬ ಕಾರಣಕ್ಕೆ ಭವಿಷ್ಯದಲ್ಲಿ ನನ್ನ ಬಗೆಗೂ ಸುಳ್ಳು ಹೇಳಿದರೆ, ಮಾಡಿದ ಕೆಲಸಗಳನ್ನು ಅಲ್ಲಗಳೆದರೆ ನಮ್ಮ ಕುಟುಂಬದವರ ಮನಸ್ಸಿಗೆ ಎಷ್ಟೆಲ್ಲ ಬೇಸರವಾಗಬಹುದು ಅಲ್ಲವೇ?’ ಎಂದು ಹೇಳಿದರು.

‘ಟಿಪ್ಪು ಸುಲ್ತಾನ್ ಹಿಂದೂ–ಮುಸ್ಲಿಮರನ್ನು ಒಗ್ಗೂಡಿಸಿಕೊಂಡು ಆಡಳಿತ ನಡೆಸಿದ್ದರು. ಟಿಪ್ಪುವಿನ ಧರ್ಮ ನೋಡದೇ ರಾಜನಾಗಿ ತಮ್ಮ ಸಾಮಾಜ್ಯ ಹೇಗೆ ಮುನ್ನಡೆಸಿದರು ಎಂಬುದನ್ನು ಪರಿಗಣಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅವರಿಗೆ ಸಲ್ಲಬೇಕಾದ ಗೌರವವನ್ನು ಒದಗಿಸಲು ಮುಂದಾಗಬೇಕು’ ಎಂದು ಒತ್ತಾಯಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಕಾಂಗ್ರೆಸ್ ಮುಖಂಡ ನೀಲಕಂಠರಾವ ಮೂಲಗೆ, ‘ಇಂದಿನ ಯುಗದಲ್ಲಿ ಮಕ್ಕಳು ರಾಜಕಾರಣಿಯಾಗಲಿ, ಉದ್ಯಮಿಯೇ ಆಗಲಿ, ಅಧಿಕಾರಿಯೇ ಆಗಲಿ ಎಲ್ಲದಕ್ಕೂ ಶಿಕ್ಷಣ ಅತ್ಯಗತ್ಯ. ವಿದ್ಯಾನಗರ ಬಡಾವಣೆ ಜನರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ಕೊಡಿಸಬೇಕು. ಮಕ್ಕಳಿಗೆ ಛಲ ಕಲಿಸಬೇಕು’ ಎಂದು ಸಲಹೆ ನೀಡಿದರು.

ಬಹುಜನ ಹೋರಾಟ ಸಮಿತಿ ಸಂಸ್ಥಾಪಕ ರಾಜ್ಯ ಗೌರವಾಧ್ಯಕ್ಷ ಲಕ್ಷ್ಮಣ ಎಸ್.ಕೋರಿ ಮಾತನಾಡಿ, ‘ನಾವು 2014ರಿಂದಲೂ ಟಿಪ್ಪು ಸುಲ್ತಾನ್ ಜಯಂತಿ ಆಚರಿಸುತ್ತ ಬರುತ್ತಿದ್ದೇವೆ. ಈ ಹಿಂದೆ ಟಿಪ್ಪು ಜಯಂತಿ ಸರ್ಕಾರದಿಂದ ಆಚರಿಸಬೇಕು ಎಂದು ಒತ್ತಾಯಿಸಿ ಜಗತ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ತನಕ ಪ್ರತಿಭಟನಾ ಮೆರವಣಿಗೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆವು. ಬಳಿಕ ಸರ್ಕಾರದಿಂದಲೇ ಟಿಪ್ಪು ಜಯಂತಿ ಆಚರಣೆ ಶುರುವಾಗಿತ್ತು. ಇದೀಗ ರಾಜಕೀಯ ಕಾರಣಗಳಿಗಾಗಿ ಅದು ನಿಂತಿದೆ. ಡಾ.ಅಂಬೇಡ್ಕರ್, ಬಸವಣ್ಣ, ಕನಕರಂಥ ಸತ್ಪುರುಷ ಜಯಂತಿಗಳಂತೆಯೇ ಟಿಪ್ಪು ಜಯಂತಿಯನ್ನೂ ಸರ್ಕಾರದಿಂದಲೇ ಆಚರಿಸಬೇಕು’ ಎಂದು ಒತ್ತಾಯಿಸಿದರು.

ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಡ ಅಭಿಷೇಕ ಪಾಟೀಲ, ಪಾಲಿಕೆ ಸದಸ್ಯ ಸಚಿನ್ ಶಿರವಾಳ, ಬಹುಜನ ಹೋರಾಟ ಸಮಿತಿ ನಗರಾಧ್ಯಕ್ಷ ಎಂ.ಡಿ.ಇಸಾಮೋದ್ದಿನ್, ಮುಖಂಡ ಮಕ್ಬುಲ್ಖಾನ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಲು ಬಹುಜನ ಹೋರಾಟ ಸಮಿತಿಯಿಂದ ಮುಖ್ಯಮಂತ್ರಿಯನ್ನು ಒತ್ತಾಯಿಸಲಾಗುವುದು.
– ಲಕ್ಷ್ಮಣ ಕೋರಿ, ಸಂಸ್ಥಾಪಕ ಗೌರವಾಧ್ಯಕ ಬಹುಜನ ಹೋರಾಟ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.