ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರೋಫಿ ಗೆದ್ದ ನೀಮಾಹೊಸಳ್ಳಿ ತಂಡ

Last Updated 14 ಫೆಬ್ರುವರಿ 2022, 5:33 IST
ಅಕ್ಷರ ಗಾತ್ರ

ಚಿಂಚೋಳಿ: 'ಭಾವೈಕ್ಯತೆ ಮತ್ತು ಸಾಮರಸ್ಯ ಭಾರತೀಯ ಜೀವಾಳ. ಅಂತೆಯೇ ಭಾರತ ವಿವಿಧತೆಯಲ್ಲಿ ಏಕತೆಯನ್ನು ವಿಶ್ವಕ್ಕೆ ಸಾರುತ್ತಿದೆ. ಸಾಮರಸ್ಯದ ಬಾಂಧವ್ಯ ವೃದ್ಧಿಗೆ ಕ್ರೀಡಾಕೂಟಗಳು ಅತ್ಯಂತ ಸಹಕಾರಿಯಾಗಿವೆ’ ಎಂದು ಸಂಸದ ಡಾ. ಉಮೇಶ ಜಾಧವ ತಿಳಿಸಿದರು.

ತಾಲ್ಲೂಕಿನ ಚಿಮ್ಮಾಈದಲಾಯಿ ಗ್ರಾಮದ ಮೇಲಕರ್ ಕ್ರೀಡಾಂಗಣದಲ್ಲಿ ನಡೆದ ಪುನೀತ್ ರಾಜಕುಮಾರ ಸ್ಮಾರಕ ಟ್ರೋಫಿಯ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ವಿಜೇತ ನೀಮಾಹೊಸಳ್ಳಿ ತಂಡಕ್ಕೆ ಟ್ರೋಫಿ ಹಾಗೂ ನಗದು ₹25ಸಾವಿರ ವಿತರಿಸಿ ಮಾತನಾಡಿದರು.

ಟೂರ್ನಿಯಲ್ಲಿ ದ್ವಿತೀಯ ಬಹುಮಾನವನ್ನು ಅತಿಥೇಯ ಚಿಮ್ಮಾಈದಲಾಯಿ ಗ್ರಾಮದ ತಂಡ ತನ್ನದಾಗಿಸಿಕೊಂಡಿತು. ರನ್ನರ್ ಅಪ್ ಬಹುಮಾನ ₹15 ಸಾವಿರ ಹಾಗೂ ಟ್ರೋಫಿಯನ್ನು ಯುವ ಕಾಂಗ್ರೆಸ್ ಮುಖಂಡ ಚಿಂತನ ಸುಭಾಷ ರಾಠೋಡ್ ವಿತರಿಸಿದರು.

ಪ್ರಥಮ ಬಹುಮಾನ ಪಡೆದ ತಂಡದ ನಾಯಕ ಗೌಸ್, ರನ್ನರ್ ಅಫ್ ಬಹುಮಾನ ಪಡೆದ ತಂಡ ನಾಯಕ ಅಮೃತ ಮೋತಕಪಳ್ಳಿ ಅವರು ಬಹುಮಾನ ಪಡೆದು ಮಾತನಾಡಿದರು.

ಪಂದ್ಯ ಪುರುಷೋತ್ತಮ ಅಲ್ತಾಫ್, ಸರಣಿ ಪುರುಷೋತ್ತಮ ಫಯಾಜ್ ಬಹುಮಾನ ಪಡೆದುಕೊಂಡರು. ವೀಕ್ಷಕ ವಿವರಣೆಯನ್ನು ಅಖಿಲಸಾಬ್ ಮತ್ತು ಹಫೀಜ್ ನಡೆಸಿಕೊಟ್ಟರು. ನಿರ್ಣಾಯಕರಾಗಿ ಅನಿಲ ಜ್ಯೋತಿ ಮತ್ತು ತಾಜೋದ್ದಿನ್ ಕಾರ್ಯನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಸಂಸದರೊಂದಿಗೆ ಭೀಮಶೆಟ್ಟಿ ಮುರುಡಾ, ಶಿವಶರಣಪ್ಪ ಪಾಟೀಲ, ಸತೀಶ ದೇಸಾಯಿ, ಕೆ.ಎಂ ಬಾರಿ, ಆರ್ ಗಣಪತರಾವ್, ಶ್ರೀಮಂತ ಕಟ್ಟಿಮನಿ, ಚಂದ್ರಶೇಖರ ಗುತ್ತೇದಾರ, ಅಶೋಕ ಚವ್ಹಾಣ, ರಾಜಕುಮಾರ ಪವಾರ್, ಹಣಮಂತ ಭೋವಿ, ಬಸವಣ್ಣ ಪಾಟೀಲ, ರಾಜು ಜಾಧವ, ಮತೀನಸೌದಾಗರ, ಇಮ್ತಿಯಾಜ್ ಅಣಕಲ್, ಗುಂಡಪ್ಪ ಅವರಾದಿ, ಮೊಗಲಪ್ಪ ದಾಸ್, ಮಲ್ಲಿಕಾರ್ಜುನ ಕೊಟಪಳ್ಳಿ, ಅಂಬರೀಷ ಕೋಟಪಳ್ಳಿ, ಸತೀಶ ಮೇಲ್ಕರ್, ಸಂಜೀವ ಮೇಲ್ಕರ್, ಶ್ರೀನಿವಾಸ ಚಿಂಚೋಳಿಕರ್,ಇಮಾಮ ಪಟೇಲ್ ಚಕ್ರವರ್ತಿ ಬಸಣ್ಣೋರ್, ಸುನೀತ ತ್ರಿಪಾಠಿ, ಸುನೀಲ ಭಂಗಿ, ವಿಶ್ವರಾಧ್ಯ ಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT