ಚಿಂಚೋಳಿ: ‘ತಾಲ್ಲೂಕಿನ ವಿವಿಧೆಡೆ ಜೆಸ್ಕಾಂನ ವಿದ್ಯುತ್ ಪರಿವರ್ತಕಗಳು ಅಪಾಯಕ್ಕೆ ಆಹ್ವಾನಿಸುತ್ತಿದ್ದು ಜೆಸ್ಕಾಂ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ’ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಪಟ್ಟಣದ ವಿವಿಧೆಡೆ ಸ್ಥಾಪಿಸಿರುವ ಜೆಸ್ಕಾಂನ ವಿದ್ಯುತ್ ಪರಿವರ್ತಕಗಳಿಗೆ ತಂತಿಬೇಲಿ ಅಥವಾ ಇನ್ನಿತರ ಸುರಕ್ಷಾ ಕ್ರಮಗಳಿಲ್ಲದ ಕಾರಣ ಇವುಗಳು ಅಪಾಯ ಆಹ್ವಾನಿಸುತ್ತಿವೆ.

ಚಂದಾಪುರದ ಟಿಎಪಿಸಿಎಂಎಸ್ ಬಳಿಯ ಪರಿವರ್ತಕ ಬಳಿ ಕಳೆದ ವರ್ಷ ಎರಡು ಮೇಕೆಗಳು ವಿದ್ಯುತ್ ತಗುಲಿ ಸಾವನ್ನಪ್ಪಿದರೆ, ಅಣವಾರದಲ್ಲಿ ಒಂದು ಹಸು, ಚಿಮ್ಮಾಈದಲಾಯಿಯಲ್ಲಿ ಒಂದು ಎತ್ತು ವಿದ್ಯುತ್ ತಗುಲಿ ಈಚೆಗೆ ಸ್ಥಳದಲ್ಲಿಯೇ ಸಾವನ್ನಪ್ಪಿವೆ. ಇವು ಕೇವಲ ಉದಾಹರಣೆ ಮಾತ್ರ. ಆದರೆ ಒಂದು ವರ್ಷದಲ್ಲಿ 10ಕ್ಕೂ ಹೆಚ್ಚು ಜಾನುವಾರುಗಳು ವಿದ್ಯುತ್ ತಗುಲಿ ಸಾವನ್ನಪ್ಪಿವೆ. ಇದರಲ್ಲಿಯೇ ವಿದ್ಯುತ್ ಪರಿವರ್ತಕಗಳಿಗೆ ತಂತಿಬೇಲಿ ಇಲ್ಲದಿರುವುದೇ ದೊಡ್ಡ ಕಾರಣ ಎಂದು ಮುಖಂಡ ಗೋಪಾಲ ಗಾರಂಪಳ್ಳಿ ದೂರಿದ್ದಾರೆ.

ಜಾನುವಾರುಗಳ ಬೆಲೆ ಕನಿಷ್ಠ ₹40 ಸಾವಿರದಿಂದ ₹1 ಲಕ್ಷದವರೆಗೂ ಇದೆ. ಆದರೆ ವಿದ್ಯುತ್ ತಗುಲಿ ಅಕಾಲಿಕವಾಗಿ ಜಾನುವಾರುಗಳು ಮರಣ ಹೊಂದುತ್ತಿದ್ದರೂ ಜೆಸ್ಕಾಂ ಎಚ್ಚೆತ್ತುಕೊಳ್ಳುತ್ತಿಲ್ಲ. ಜಾನುವಾರು ಸತ್ತರೆ ರೈತನಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗುತ್ತಿದೆ. ಜೆಸ್ಕಾಂ ಅತ್ಯಲ್ಪ ಪರಿಹಾರ ನೀಡಿ ಕೈತೊಳೆದುಕೊಳ್ಳುತ್ತಿದೆ. ಹೀಗಾಗಿ ವಿದ್ಯುತ್ ಪರಿವರ್ತಕಗಳ ಸುತ್ತಲೂ ತಂತಿ ಬೇಲಿ ನಿರ್ಮಿಸಿ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಪುರಸಭೆ ವ್ಯಾಪ್ತಿಯ ಚಿಂಚೋಳಿ ಚಂದಾಪುರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಹೊಸದಾಗಿ ಸ್ಥಾಪಿಸುತ್ತಿರುವ ವಿದ್ಯುತ್ ಪರಿವರ್ತಕಗಳಿಗೆ ತಂತಿಬೇಲಿ ಅಳವಡಿಸಿ ಸುರಕ್ಷತೆ ಒದಗಿಸಲಾಗಿದೆ. ಆದರೆ ಹಳೆಯ ಶೇ 50ಕ್ಕೂ ಹೆಚ್ಚು ಪರಿವರ್ತಕಗಳಿಗೆ ತಂತಿಬೇಲಿಯೇ ಇಲ್ಲ. ಕೆಲವುಕಡೆ ತಂತಿ ಬೇಲಿ ನಿರ್ಮಿಸಿದ್ದರೂ ಅವುಗಳು ಹತ್ತಾರು ವರ್ಷಗಳ ಹಿಂದೆ ಕೈಗೊಂಡಿದ್ದರಿಂದ ಈಗ ಹಾಳಾಗಿವೆ. ಹೀಗಾಗಿ ವಿದ್ಯುತ್ ಪರಿವರ್ತಕಗಳು ತಂತಿ ಬೇಲಿಗಾಗಿ ಕಾಯುವಂತಾಗಿವೆ.

ತಂತಿಬೇಲಿ ಕೊರತೆಯಿಂದ ಜಾನುವಾರುಗಳು ಮೃತಪಟ್ಟ ಘಟನೆಗಳು ನಡೆದಿರುವುದು ಗಮನಕ್ಕೆ ಬಂದಿದೆ. ತಾಲ್ಲೂಕಿನಲ್ಲಿ ವಿದ್ಯುತ್ ಪರಿವರ್ತಕಗಳಿಗೆ ತಂತಿಬೇಲಿ ಇಲ್ಲದಿರುವ ಕುರಿತು ಅಧಿಕಾರಿಗಳಿಂದ ವರದಿ ಕೇಳಿದ್ದೇನೆ
ಕಾಮಣ್ಣ ಇಂಜಳ್ಳಿ ಎಇಇ ಜೆಸ್ಕಾಂ ಉಪ ವಿಭಾಗ ಚಿಂಚೋಳಿ

ಮಾನವೀಯತೆ ಮೆರೆದ ಜೆಸ್ಕಾಂ ಸಿಬ್ಬಂದಿ

ಇಲ್ಲಿನ ಪುರಸಭೆ ವ್ಯಾಪ್ತಿಯ ಚಂದಾಪುರದ ಟಿಎಪಿಸಿಎಂಎಸ್ ಎದುರುಗಡೆ ಮುಖ್ಯರಸ್ತೆ ಬದಿಗೆ ಒಂದೇ ಕಡೆ ಎರಡು ವಿದ್ಯುತ್ ಪರಿವರ್ತಕಗಳಿದ್ದು ಅವುಗಳ ಮಧ್ಯೆ ರಾಸುವೊಂದು ಕುಳಿತಿತ್ತು. ಸುದ್ದಿ ತಿಳಿದು ದೂರದಿಂದಲೇ ಇದನ್ನು ಗಮನಸಿದ ಜೆಸ್ಕಾಂ ಸಿಬ್ಬಂದಿ ಅಂಕುಶ ತಕ್ಷಣ 110 ಕೆವಿ ವಿದ್ಯುತ್ ಉಪ ಕೇಂದ್ರದಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿ ರಾಸುವನ್ನು ಪಾರು ಮಾಡಿದ್ದಾರೆ. ಈ ಮೂಲಕ ಮಾನವೀಯತೆ ಮೆರೆದ ಅಂಕುಶ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಸ್ವಲ್ಪ ಯಾಮಾರಿದರೂ ರಾಸು ಜೀವಕ್ಕ ಅಪಾಯವಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.