ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳಗಿ | ಮತ್ತೆ ಕೆಟ್ಟುನಿಂತ ಕೊಳವೆಬಾವಿ: ದುರಸ್ತಿಗೆ ಆಗ್ರಹ

Published 24 ಮೇ 2024, 14:12 IST
Last Updated 24 ಮೇ 2024, 14:12 IST
ಅಕ್ಷರ ಗಾತ್ರ

ಕಾಳಗಿ: ‘ಪಟ್ಟಣದ ಶಿವಬಸವೇಶ್ವರ ಸಂಸ್ಥಾನ ಹಿರೇಮಠ ಸಮೀಪದ ಸಾರ್ವಜನಿಕ ಕೊಳವೆಬಾವಿ ಪದೇ ಪದೆ ಕೆಟ್ಟುಹೋಗುತ್ತಿದ್ದು, ನಿವಾಸಿಗಳಿಗೆ ನೀರಿನ ಸಮಸ್ಯೆಯಾಗುತ್ತಿದೆ. ಈ ಸಂಬಂಧ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂದು ವಾರ್ಡ್‌ನ ನಿವಾಸಿಗಳು ದೂರಿದ್ದಾರೆ.

‘ಹಿಂದೆ ಕೊಳವೆಬಾವಿ ದುರಸ್ತಿಗೆ ಕಳಪೆ ಮಟ್ಟದ ಸಾಮಗ್ರಿಗಳನ್ನು ಬಳಸಲಾಗಿದೆ. ದುರಸ್ತಿಯಾದ ತಿಂಗಳಲ್ಲೇ ಕೊಳವೆ ಬಾವಿ ಮತ್ತೆ ಕೆಟ್ಟುನಿಂತಿದೆ. ನಿವಾಸಿಗಳಿಗೆ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಕೂಡಲೇ ದುರಸ್ತಿಗೊಳಿಸಿ, ಜನರಿಗೆ ನೀರಿನ ಸಮಸ್ಯೆ ನೀಗಿಸಬೇಕು ಎಂದು ವಾರ್ಡ್‌ನ ನಿವಾಸಿಗಳಾದ ಚಂದುಸಿಂಗ ರಜಪುತ, ಬಂಡು ಬೊಮ್ಮಾಣಿ, ಗುರುನಂಜಯ್ಯ ಹಿರೇಮಠ, ಶರಣು ಬಿಜನಳ್ಳಿ, ವಿಜಯಕುಮಾರ ಸುಂಠಾಣ, ವೀರಯ್ಯ ಮಠಪತಿ, ಹಣಮಂತ ಖಾಜಾಪುರ, ಗದಗಯ್ಯ ಹಣಕುಣಿ, ಚಂದ್ರಕಾಂತ ಜಮಾದಾರ, ಕಲ್ಯಾಣಿ ಕುಂಬಾರ ಅನೇಕರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT