ಶನಿವಾರ, ನವೆಂಬರ್ 23, 2019
18 °C

ವೈಜನಾಥ ಪಾಟೀಲ ಪಾರ್ಥಿವ ಶರೀರದ ಮೆರವಣಿಗೆ ಆರಂಭ

Published:
Updated:

ಕಲಬುರ್ಗಿ: ಜಿಲ್ಲೆಯ ಚಿಂಚೋಳಿ ಪಟ್ಟಣದಲ್ಲಿರುವ ಮನೆಯಲ್ಲಿ ಧಾರ್ಮಿಕ ವಿಧಿ ವಿಧಾನ ಪೂರೈಸಿದ ಬಳಿಕ ಮಾಜಿ ಸಚಿವ ವೈಜನಾಥ ಪಾಟೀಲರ ಪಾರ್ಥಿವ ಶರೀರವನ್ನು ಮೆರವಣಿಗೆಯಲ್ಲಿ ಅಂತ್ಯಕ್ರಿಯೆ ಸ್ಥಳಕ್ಕೆ ಕರೆ ತರಲಾಗುತ್ತಿದೆ

ಸಂಸದ ಡಾ.ಉಮೇಶ ಜಾಧವ,  ಚಿಂಚೋಳಿ ಶಾಸಕ ಡಾ. ಅವಿನಾಶ ಜಾಧವ, ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ, ಶಹಾಪುರ ಶಾಸಕ ಶರಣಬಸಪ್ಪ ದರ್ಸನಾಪುರ, ಮುಖಂಡ ಸೋಮಶೇಖರ ಗೋನಾಯಕ ಭಾಗಿಯಾಗಿದ್ದಾರೆ.

ಇದನ್ನೂ ಓದಿ: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಅವಿರತ ಶ್ರಮಿಸಿದ ವೈಜನಾಥ ಪಾಟೀಲ್ ಇನ್ನಿಲ್ಲ

ವೈಜನಾಥ ಪಾಟೀಲ ಗೌರವಾರ್ಥ ಬಜಾರ ಬಂದ್ 
ಚಿಂಚೋಳಿ (ಕಲಬುರ್ಗಿ ಜಿಲ್ಲೆ): ಮಾಜಿ ಸಚಿವ, ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷರಾಗಿದ್ದ ವೈಜನಾಥ ಪಾಟೀಲರ ನಿಧನರಾದ್ದರಿಂದ ಅವರ ಗೌರವಾರ್ಥ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಮೃತರಿಗೆ ಗೌರವ ಸಲ್ಲಿಸಿದರು. 

ಜಿಂದಾಬಾದ್ ಜಿಂದಾಬಾದ್ ವೈಜನಾಥ ಪಾಟೀಲ‌ ಜಿಂದಾಬಾದ್. ಹುಟ್ಟಿಬಾ ಹುಟ್ಟಿ ಬಾ ವೈಜನಾಥ ಪಾಟೀಲ ಮತ್ತೆ ಹುಟ್ಟಿಬಾ. ವೈಜನಾಥ ಪಾಟೀಲ ಅಮರ ರಹೆ ಘೋಷಣೆಗಳನ್ನು ಕೂಗುತ್ತಿದ್ದಾರೆ.

ಪ್ರತಿಕ್ರಿಯಿಸಿ (+)