ಕಲಬುರಗಿ: ‘ಒಂದು ಕಾಲಘಟ್ಟದ ಸಾಮಾಜಿಕ ಬದುಕು, ಜನಜೀವನ, ಆರ್ಥಿಕ ಸ್ಥಿತಿ–ಗತಿ, ಗ್ರಾಮ ಪರಿಸರ, ಕೌಟುಂಬಿಕ ಸಂಬಂಧಗಳು ಇನ್ನೂ ಅನೇಕ ವಸ್ತು ವಿಷಯಗಳು ವಿಭಿನ್ನ ಮತ್ತು ವಿಶಿಷ್ಟವಾಗಿ ಅನಾವರಣಗೊಂಡಿರುವ ಪ್ರೊ. ಕೃಷ್ಣ ನಾಯಕ ಅವರ ಆತ್ಮಕಥೆ ಇಡೀ ಬಂಜಾರ ಜನಾಂಗದ ಬದುಕಿನ ಕಥನವಾಗಿದೆ’ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಡಿ. ಬಿ. ನಾಯಕ ಹೇಳಿದರು.

ನಗರದಲ್ಲಿ ವಿಶ್ವ ಪ್ರಕಾಶನ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ. ಕೃಷ್ಣ ನಾಯಕ ಅವರ ‘ವಲಸೆ ಹಕ್ಕಿಯ ಹಾಡು’ ಆತ್ಮಕಥೆ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಈವರೆಗೆ ಐದು ಕಥಾ ಸಂಕಲನಗಳು, ಒಂದು ಸಮಗ್ರ ಕಥಾ ಸಂಕಲನ ನೀಡಿದ ಕೃಷ್ಣ ನಾಯಕ ಕನ್ನಡ ಕಥಾ ಸಾಹಿತ್ಯ ಕ್ಷೇತ್ರ ಕಡೆಗಣಿಸಲು ಸಾಧ್ಯವಿಲ್ಲದ ಸಮರ್ಥ ಕಥೆಗಾರರಲ್ಲಿ ಒಬ್ಬರು. ವಲಸೆ ಹಕ್ಕಿಯ ಹಾಡು ಆತ್ಮಕಥೆ 2024ನೇ ಸಾಲಿನ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ (ಬೆಂಗಳೂರು) ಪ್ರಶಸ್ತಿ ಪುರಸ್ಕೃತ ಕೃತಿ ಆಗಿದ್ದು, ಅದು ಕಡಿಮೆ ಅವಧಿಯಲ್ಲಿ ಮರುಮುದ್ರಣ ಕಂಡು ಹೊರಬಂದಿರುವುದು ಕೃತಿಯ ವಿಶೇಷತೆಗೆ ಕನ್ನಡಿ ಹಿಡಿಯುತ್ತದೆ’ ಎಂದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಸೂರ್ಯಕಾಂತ ಸೊನ್ನದ, ‘ಆತ್ಮಕಥನ ಬರೆಯುವುದು ತುಂಬ ಕಷ್ಟದ ಕೆಲಸ. ಅದರಲ್ಲಿ ವ್ಯಕ್ತಿ ತನ್ನ ಬದುಕಿನ ಜೊತೆಗೆ ಸುತ್ತಲಿನ ಪರಿಸರದ ಕುರಿತು ಸತ್ಯಾಸತ್ಯತೆಗಳನ್ನು ಬಿಚ್ಚಿಡಬೇಕಾಗುತ್ತದೆ. ಹಾಗೆಂದೇ ಆತ್ಮಕಥನವು ಸಿಹಿ ಕಹಿ ನೆನಪುಗಳ ಬುತ್ತಿಯಾಗಿರುತ್ತದೆ. ಪ್ರೊ. ಕೃಷ್ಣ ನಾಯಕ ತಮ್ಮ ಆತ್ಮಕಥನದಲ್ಲಿ ವೈಯಕ್ತಿಕ ಬದುಕಿನ ಅನುಭವಗಳನ್ನು ತುಂಬ ಪ್ರಾಮಾಣಿಕವಾಗಿ ನಿರೂಪಿಸಿದ್ದಾರೆ’ ಎಂದು ಹೇಳಿದರು.

ಕೃತಿಯ ಲೇಖಕರಾದ ಪ್ರೊ. ಕೃಷ್ಣ ನಾಯಕ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಥೆಗಾರ ಸಿ.ಎಸ್.ಆನಂದ ನಿರೂಪಿಸಿ, ವಂದಿಸಿದರು. ಪ್ರಕಾಶಕಿ ಉಷಾ ನಾಯಕ, ಗೀತಾರಾಣಿ ನಾಯಕ, ಪಲ್ಲವಿ ಚವ್ಹಾಣ, ಆನಂದ ನಾಯಕ, ಸಂಜೀವಕುಮಾರ ಚವ್ಹಾಣ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.