ಬುಧವಾರ, ಆಗಸ್ಟ್ 4, 2021
28 °C

ಕಲಬುರ್ಗಿ | ಹೆಸರಿಗೆ ಮಾತ್ರ ಲಾಕ್‌ಡೌನ್, ಎಂದಿನಂತೆ ವಾಹನ ಸಂಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ನಗರ ಹಾಗೂ ತಾಲ್ಲೂಕು ‌ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮಂಗಳವಾರದಿಂದ ಒಂದು ವಾರ ಲಾಕ್ ಡೌನ್ ಘೋಷಿಸಿದ್ದರೂ ಜನಜೀವನ, ವಾಹನ ಸಂಚಾರ ಎಂದಿನಂತೆ ಇದೆ.

ಔಷಧಿ ಅಂಗಡಿ, ಆಸ್ಪತ್ರೆ, ದಿನಸಿ ಅಂಗಡಿ, ಪೆಟ್ರೋಲ್ ಪಂಪ್, ಕೃಷಿ ಸಂಬಂಧಿ ಪರಿಕರಗಳ ಮಳಿಗೆಗಳ ಮಾರಾಟಕ್ಕೆ ಮಾತ್ರ ಅವಕಾಶ‌ ನೀಡಿದ್ದರೂ ಬಹುತೇಕ ಎಲ್ಲ ಅಂಗಡಿಗಳು ತೆರೆದಿವೆ.

ಕಾರು, ಅಟೊ ರಿಕ್ಷಾ, ಬೈಕ್ ಗಳ ಸಂಚಾರಕ್ಕೆ ಜಿಲ್ಲಾಧಿಕಾರಿ ಶರತ್ ಬಿ. ನಿರ್ಬಂಧ ‌ವಿಧಿಸಿದ್ದರು. ಆದರೆ, ಆದೇಶ ಗಾಳಿಗೆ ತೂರಿ ಕಾರು, ಬೈಕ್ ಗಳು ಸಂಚರಿಸುತ್ತಿವೆ.

ಎಲೆಕ್ಟ್ರಾನಿಕ್ ‌ಮಳಿಗೆಗಳು, ಇತರೆ ವಾಣಿಜ್ಯ ವಸ್ತುಗಳ ‌ಮಾರಾಟವೂ ಎಂದಿನಂತೆ ನಡೆದಿದೆ‌.

ನಗರ ಪ್ರದೇಶಗಳಲ್ಲಿ ಸಾರಿಗೆ ಸಂಸ್ಥೆಯ ಬಸ್ ಗಳ ಸಂಚಾರ ಸ್ಥಗಿತಗೊಂಡಿದೆ. ಆದರೆ,  ತಾಲ್ಲೂಕು ಕೇಂದ್ರಗಳಿಗೆ ತೆರಳುವ ಬಸ್ ಗಳ ಸಂಚಾರ ಎಂದಿನಂತಿದೆ.

ಮದ್ಯದ ಅಂಗಡಿಗಳು ‌ಮುಚ್ಚಿವೆ.


ಕಲಬುರ್ಗಿ ನಗರದಲ್ಲಿ ಕಂಡುಬಂದ ವಾಹನ ಸಂಚಾರ – ಪ್ರಜಾವಾಣಿ ಚಿತ್ರಗಳು/ಪ್ರಶಾಂತ್ ಎಚ್. ಜಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು