ಗುರುವಾರ , ನವೆಂಬರ್ 26, 2020
20 °C
ಬೀದರಿನಲ್ಲಿ ಕೇವಲ 6 ಶಿಕ್ಷಕರಿಂದ ಮತದಾನ

ಈಶಾನ್ಯ ಪದವೀಧರರ ಕ್ಷೇತ್ರ: 10ರವರೆಗೆ ಶೇ 8.34ಇಷ್ಟು ಮತದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಈಶಾನ್ಯ ಮತ ಕ್ಷೇತ್ರದಲ್ಲಿ ಬೆಳಿಗ್ಗೆ 8ರಿಂದ 10 ಗಂಟೆಯವರೆಗೆ ಒಟ್ಟಾರೆ ಶೇ 8.34 ಮತದಾನವಾಗಿದೆ.

ಕ್ಷೇತ್ರದ 144  ಮುಖ್ಯ ಮತಗಟ್ಟೆಗಳು ಹಾಗೂ 3 ಹೆಚ್ಚುವರಿ ಮತಗಟ್ಟೆಗಳಲ್ಲಿ ಹುರುಪಿನ ಮತದಾನ ನಡೆಯಿತು.

ಬೀದರಿನಲ್ಲಿ ಬೆಳಿಗ್ಗೆ 10 ಗಂಟೆಯವರೆಗೆ ಕೇವಲ 6 ಮಂದಿ ಮಾತ್ರ ಮತ ಚಲಾಯಿಸಿದ್ದಾರೆ.

ಕೊಪ್ಪಳ ಜಿಲ್ಲೆಯಲ್ಲಿ ಬಿರುಸಿನ ಮತದಾನ ಕಂಡು ಬಂದಿದ್ದು ಬೆಳಿಗ್ಗೆ 10ರ ವೇಳೆಗೆ ಶೇ 16.4ರಷ್ಟು ಮತಗಳು ಚಲಾವಣೆಗೊಂಡಿವೆ.

ಕಲಬುರ್ಗಿ ಜಿಲ್ಲೆಯಲ್ಲಿ ಕೂಡ ಶೇ 11ರಷ್ಟು ಮತಗಳು ಚಲಾವಣೆಯಾಗಿವೆ.

ಯಾದಗಿರಿಯಲ್ಲಿ ಕೂಡ ನಾಲ್ಕು ಮತಗಟ್ಟೆಗಳಿದ್ದು, ಶೇ 8ರಷ್ಟು, ರಾಯಚೂರು ಜಿಲ್ಲೆಯಲ್ಲಿ ಶೇ 10.01ರಷ್ಟು ಮೈದಾನವಾಗಿದೆ.

ಕಲಬುರ್ಗಿಯ ಐಟಿಐ ಕಾಲೇಜು, ಕನ್ಯಾಶಾಲೆ ಹಾಗೂ ಮಹಾಗಾಂವ ಮತಗಟ್ಟೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕಿಯರೇ ಮತದಾನಕ್ಕೆ ಬಂದಿದ್ದು ಕಂಡು ಬಂತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು