ಚಿಂಚೋಳಿ: ತಾಲ್ಲೂಕಿನ ತಾಜಲಾಪುರ ಗ್ರಾಮದ ಬಳಿ ಮುಲ್ಲಾಮಾರಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಸೇತುವೆ ಅಪಾಯದ ಆತಂಕವನ್ನುಂಟು ಮಾಡಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಸೇತುವೆಯ ಬದಿಯಿಂದ ಟ್ರಾಕ್ಟರ್ ಸಂಚರಿಸಿ ಬೆಡ್ ಹಾಳಾಗಿದೆ. ನದಿಯಲ್ಲಿ ಹಾಕಿರುವ ಬೆಡ್ ಅಲ್ಲಲ್ಲಿ ಶಿಥಿಲಗೊಂಡಿದೆ. ಬೆಡ್ ಮೇಲೆ ಸಿಮೆಂಟ್ ಸಿಸ್ಟರ್ನ(ಗುಮ್ಮಿ) ಹಾಕಿದ್ದು, ಅದರ ಮೇಲೆ ಸಿಮೆಂಟ್ ಕಾಂಕ್ರೀಟ್ ಬೆಡ್ ಹಾಕಿ ಸೇತುವೆ ನಿರ್ಮಿಸಿದ್ದು, ಮೇಲ್ನೋಟಕ್ಕೆ ಸುಸ್ಥಿತಿಯಲ್ಲಿರುವಂತೆ ಗೋಚರಿಸುತ್ತಿದೆ. ಆದರೆ ಗುಮ್ಮಿಯ ಕೆಳಗಿರುವ ಬೆಡ್ ಬಿರುಕುಬಿಟ್ಟು ಛಿದ್ರವಾಗಿದ್ದು, ಅದರೊಳಗಿನಿಂದ ನೀರು ಸೋರುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ತಾಂತ್ರಿಕ ಉಪವಿಭಾಗದಿಂದ ನಿರ್ಮಿಸಿದ ಸೇತುವೆ ಭಾಲ್ಕಿ ಚಿಂಚೋಳಿ ರಾಜ್ಯ ಹೆದ್ದಾರಿ 75 ಮತ್ತು ತಾಜಲಾಪುರ ಗ್ರಾಮಕ್ಕೆ ಸಂಪರ್ಕ ಬೆಸೆಯಲು ಸಹಕಾರಿಯಾಗಿದೆ. ಗ್ರಾಮಸ್ಥರು ಚಿಂಚೋಳಿಗೆ ಬರಲು ಇದೇ ಮಾರ್ಗ ಅವಲಂಬಿಸಿದ್ದಾರೆ.
ರಾಜ್ಯದಲ್ಲಿ ಮೊದಲು ಭರ್ತಿಯಾಗುವ ಜಲಾಶಯ ಎಂಬ ಹೆಗ್ಗಳಿಕೆ ಹೊಂದಿರುವ ಕೆಳದಂಡೆ ಮುಲ್ಲಾಮಾರಿ ಯೋಜನೆಯ ನಾಗರಾಳ ಜಲಾಶಯ ಈಗಾಗಲೇ ಭರ್ತಿಯಾಗಿದ್ದು, ತಿಂಗಳಿನಿಂದ ಆಗಾಗ ನೀರು ನದಿಗೆ ಬಿಡಲಾಗುತ್ತಿದೆ.

ಸದ್ಯ ಕಡಿಮೆ ಪ್ರಮಾಣದ ನೀರು ಬಿಡುತ್ತಿದ್ದಾರೆ. ಒಮ್ಮೊಮ್ಮೆ ಹೆಚ್ಚಿನ ಪ್ರಮಾಣದ ನೀರು ಬಿಟ್ಟರೆ ಸೇತುವೆಗೆ ಅಪಾಯ ಎದುರಾಗುವ ಭೀತಿ ಗ್ರಾಮಸ್ಥರನ್ನು ಕಾಡುತ್ತಿದೆ. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು ಸೇತುವೆಯನ್ನು ಪರಿಶೀಲಿಸಿ, ದುರಸ್ತಿಗೆ ಕ್ರಮ ವಹಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

ಸೇತುವೆ ಸಮಪರ್ಕವಾಗಿ ನಿರ್ವಹಣೆ ಮಾಡಬೇಕು. ನೀರಿನ ಜತೆಗೆ ಹರಿದು ಬಂದ ಗಿಡಿಗಂಟೆಗಳು ಸೇತುವೆಯ ಗುಮ್ಮಿಯ ಬಾಗಿಲು ಮುಚ್ಚುವಂತೆ ಅಡ್ಡ ಬಂದ ನಿಂತಿದ್ದು, ಅದನ್ನು ತೆರವುಗೊಳಿಸಿ, ನೀರು ಸರಾಗವಾಗಿ ಹರಿದುಹೋಗುವಂತೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಹಲವು ದಶಕಗಳ ಹಿಂದೆ ನಿರ್ಮಿಸಿದ ಸೇತುವೆಯ ತಳಪಾಯದಿಂದ ನೀರು ಹರಿಯುತ್ತಿರುವುದು ಆತಂಕ ಉಂಟುಮಾಡಿದೆ. ಸಂಬಂಧಿಸಿದ ಅಧಿಕಾರಿಗಳು ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳಬೇಕು
ಬಸವರಡ್ಡಿ ಡೋಣಿ ಮುಖಂಡ ತಾಜಲಾಪುರ

ನಾನು ಶಾಖಾಧಿಕಾರಿಗಳಿಂದ ಸೇತುವೆಯ ಸ್ಥಿತಿ ಕುರಿತು ಮಾಹಿತಿ ಪಡೆಯುವೆ. ಅಗತ್ಯಬಿದ್ದರೆ ನಾನೇ ಖುದ್ದು ಭೇಟಿ ನೀಡಿ ಪರಿಶೀಲಿಸುತ್ತೇನೆ
ಪ್ರವೀಣಕುಮಾರ ಎಇಇ ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪವಿಭಾಗ ಚಿಂಚೋಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.