ಹಸಿರಿನ ನಡುವೆ ಕಂಗೊಳಿಸಿದ ನ್ಯಾಯದಾನ ತಾಣ ಕಲಬುರಗಿ ಹೈಕೋರ್ಟ್...
ಹೈಕೋರ್ಟ್ ಆವರಣದ ತೋಟಗಾರಿಕೆ ಇಲಾಖೆ ನೆಟ್ಟ ಗಿಡಗಳ ನಡುವೆ ಕಳೆ ನಿರ್ವಹಣೆಯಲ್ಲಿ ನಿರತರಾದ ಸಿಬ್ಬಂದಿ
ನ್ಯಾಯ ದಾನ ಸಂಸ್ಥೆಯಾದ ಹೈಕೋರ್ಟ್ ಪ್ರಾಕೃತಿಕ ಸುಸ್ಥಿರತೆಯ ಮಾದರಿಯಾಗಿಯೂ ಕೆಲಸ ಮಾಡುತ್ತಿದೆ. ಕೋರ್ಟ್ ಆವರಣದ ಗಿಡ ಮರಗಳ ಹಸಿರು ಬರೀ ಅಲಂಕಾರಕ್ಕಲ್ಲ; ಇದೆಲ್ಲ ನೈಸರ್ಗಿಕ ಪ್ರಪಂಚದ ಬಗೆಗೆ ನಮಗಿರುವ ಗೌರವ; ಭವಿಷ್ಯದ ಪೀಳಿಗೆ ಕುರಿತ ನಮ್ಮ ಕರ್ತವ್ಯದ ಸಂಕೇತ. ಈ ಹಸಿರಿನ ಪರಂಪರೆಯ ಸಂರಕ್ಷಣೆ ವೃದ್ಧಿ ನ್ಯಾಯಮೂರ್ತಿಗಳು ವಕೀಲರು ಸಿಬ್ಬಂದಿ ಹಾಗೂ ನಾಗರಿಕರ ಸಾಮೂಹಿಕ ಹೊಣೆ. ಹೈಕೋರ್ಟ್ ಬರೀ ನ್ಯಾಯದ ದೇಗುಲವಾಗದೇ ಸುಸ್ಥಿರತೆಯ ಧಾಮವೂ ಆಗಲಿ ಎಂಬುದು ನಮ್ಮ ಆಶಯ.
-ನ್ಯಾಯಮೂರ್ತಿ ಮೊಹಮ್ಮದ್ ನವಾಜ್, ಹಿರಿಯ ನ್ಯಾಯಮೂರ್ತಿ ಕಲಬುರಗಿ ಹೈಕೋರ್ಟ್
ಸಸಿಗಳ ನಾಟಿ ನಿರಂತರ ಪ್ರಕ್ರಿಯೆ. ಅದರ ಫಲಿತಾಂಶ ಸಿಗಲು ಸಮಯಬೇಕು. ಹೈಕೋರ್ಟ್‌ನಲ್ಲಿ ನೆಟ್ಟ ಸಸಿಗಳು 10 ವರ್ಷಗಳಲ್ಲಿ ಮರಗಳಾಗಿ ಬೆಳೆದಿವೆ. ಹಸಿರು ಬೆಳೆಸಲು ಜನರ ಸಹಕಾರ ಅಗತ್ಯ.
–ಸುಮಿತಕುಮಾರ್ ಪಾಟೀಲ್ ಡಿಸಿಎಫ್ ಕಲಬುರಗಿ
ಹೈಕೋರ್ಟ್ ಆವರಣದ ಹಸಿರು ನ್ಯಾಯಮೂರ್ತಿಗಳ ನಿರಂತರ ಕಾಳಜಿ ತೋಟಗಾರಿಕಾ ಇಲಾಖೆಯ ಸಿಬ್ಬಂದಿಯ ನಿತ್ಯ ಆರೈಕೆಯ ಫಲ. ಯೋಜಿತ ಶ್ರಮ ಸಾಂಘಿಕ ಪ್ರಯತ್ನದಿಂದ ಇದು ಸಾಧ್ಯವಾಗಿದೆ.