ಕಲಬುರ್ಗಿ: ನಗರದ ವಾರ್ಡ್ ಸಂಖ್ಯೆ 48 ಹಾಗೂ 53ರ ತಾರಫೈಲ್ ಬಡಾವಣೆಯಲ್ಲಿ ಶೌಚಾಲಯ ಸ್ವಚ್ಛತೆ ಮಾಡಬೇಕು ಮತ್ತು ಶೌಚಾಲಯಗಳ ಪಕ್ಕದಲ್ಲಿ ಕಸದ ತೊಟ್ಟಿಯನ್ನು ಇಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ಮಹಾನಗರ ಪಾಲಿಕೆ ಎದುರು ಸೋಮವಾರ ಪ್ರತಿಭಟನೆ ನಡೆಸಿ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಈ ಬಡಾವಣೆಯಲ್ಲಿ ನಿರ್ಮಿಸಿರುವ ಶೌಚಾಲಯಗಳು ಸೂಕ್ತ ನಿರ್ವಹಣೆ ಇಲ್ಲದೇ ಹಾಳು ಬಿದ್ದಿವೆ. ಶೌಚಾಲಯದ ಸುತ್ತಲೂ ಕಸದ ರಾಶಿ ತುಂಬಿದೆ. ಆದ್ದರಿಂದ ಈ ಶೌಚಾಲಯಗಳನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಪುನಿತರಾಜ ಸಿ. ಕಾವಡೆ, ನಗರ ಘಟಕದ ಅಧ್ಯಕ್ಷ ಸಿದ್ದು ಪೂಜಾರಿ, ವಾರ್ಡ್ 48ರ ಅಧ್ಯಕ್ಷ ಪೃಥ್ವಿರಾಜ ಎಸ್. ರಾಂಪೂರ, ಮುಖಂಡರಾದ ದಸ್ತಯ್ಯ ಎಸ್. ಗುತ್ತೇದಾರ, ಮಹಾಂತೇಶ ಪಾಟೀಲ, ಚಂದ್ರಕಾಂತ ಗುತ್ತೇದಾರ, ಕಲ್ಯಾಣಿ ತಳವಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.