ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಡಗು | 11 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಜಿಲ್ಲಾ ಪದವಿಪೂರ್ವ ಕಾಲೇಜು ಬಾಕ್ಸಿಂಗ್ ಸ್ಪರ್ಧೆ
Published : 11 ಸೆಪ್ಟೆಂಬರ್ 2024, 5:23 IST
Last Updated : 11 ಸೆಪ್ಟೆಂಬರ್ 2024, 5:23 IST
ಫಾಲೋ ಮಾಡಿ
Comments

ಗೋಣಿಕೊಪ್ಪಲು: ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಗೋಣಿಕೊಪ್ಪಲು ಪ್ರೌಢಶಾಲೆಯಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 11 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಗೋಣಿಕೊಪ್ಪಲು ಕಾವೇರಿ ಪದವಿಪೂರ್ವ ಕಾಲೇಜು ಹಾಗೂ ಕೊಡಗು ಜಿಲ್ಲಾ ಬಾಕ್ಸಿಂಗ್ ಅಸೋಸಿಯೇಷನ್, ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ನಡೆದ ಸ್ಪರ್ಧೆಯ ಬಾಲಕರ ವಿಭಾಗದಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ವಿದ್ಯಾರ್ಥಿ ಪಿ.ಯು.ಹರ್ಷ ಅಯ್ಯಪ್ಪ, ಹಳ್ಳಿಗಟ್ಟು ಸಿಐಪಿಯು ಕಾಲೇಜಿನ ಧ್ಯಾನ್ ಗಣಪತಿ, ವಿರಾಜಪೇಟೆ ಎಸ್ಎಂಎಸ್ ಪಿಯು ಕಾಲೇಜಿನ ಕೆ.ಬಿ. ರಮೀಸ್, ಎಂ.ಎ.ಅಫ್ವಾನ್ ಆಯ್ಕೆಯಾದರು.

ಬಾಲಕಿಯರ ವಿಭಾಗದಲ್ಲಿ ಕಾವೇರಿ ಪದವಿಪೂರ್ವ ಕಾಲೇಜಿನ ಬಿ.ಬಿ.ಪಂಚಮಿ, ಯು.ಎನ್.ಅರ್ಚನಾ, ಅರುವತ್ತೊಕ್ಲಲು ವಿದ್ಯಾನಿಕೇತನ ಪಿಯು ಕಾಲೇಜಿನ ಎ.ಪಿ.ಘನಿಕಾ ದೇವಮ್ಮ, ಖಾನ ಅಪ್ಪಯ್ಯ, ಎ.ಎಲತಿಕ, ಬಡಿಗಾರ್, ಸಿಐಪಿಯು ಕಾಲೇಜಿನ ಎ.ಎಸ್.ಪೊನ್ನಮ್ಮ ಆಯ್ಕೆಯಾದರು.

ಗೋಣಿಕೊಪ್ಪಲು ಪ್ರೌಢ ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಕುಪ್ಪಂಡ ಗಣೇಶ್ ಉದ್ಘಾಟಿಸಿದರು.

ರಾಷ್ಟ್ರೀಯ ಬಾಕ್ಸಿಂಗ್ ತರಬೇತುದಾರ ದೇಯಂಡ ಕೆ.ಮೇದಪ್ಪ, ಕಾವೇರಿ ಕಾಲೇಜು ಕ್ಯಾಂಪಸ್ ಮೇನೇಜರ್ ಮಿನ್ನಂಡ ಜೋಯಪ್ಪ ಐ ಎನ್.ಎಸ್. ಬಾಕ್ಸಿಂಗ್ ತರಬೇತುದಾರ ಶರತ್, ರಾಷ್ಟ್ರೀಯ ಬಾಕ್ಸಿಂಗ್ ಪಟುಗಳಾದ ಕಾರ್ತಿಕ್, ಪ್ರಜ್ವಲ್, ಚೆಪ್ಪುಡಿರ ಕಾವೇರಮ್ಮ, ಜೈ ಜವಾನ್ ಡಿಫೆನ್ಸ್ ಟ್ರೈನಿಂಗ್ ಸೆಂಟರ್ ನ ನಿರ್ದೇಶಕ ಅಮ್ಮಣಿಚಂಡ ಲವನ್ ಮಾದಪ್ಪ, ದೈಹಿಕ ಶಿಕ್ಷಣ ನಿರ್ದೇಶಕ ಎಂ.ಟಿ. ಸಂತೋಷ್, ಶರತ್ ಕುಮಾರ್, ರಾಜರೈ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT