ಮಡಿಕೇರಿ: ಇಲ್ಲಿನ ಕೋಟೆ ಆವರಣದಲ್ಲಿರುವ ಸರ್ಕಾರಿ ವಸ್ತುಸಂಗ್ರಹಾಲಯದಲ್ಲಿ ವಿಶ್ವ ಮ್ಯೂಸಿಯಂ ದಿನದ ಅಂಗವಾಗಿ ಭಾನುವಾರ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ನಡೆದ ಹುಣಸೂರು ಪಿ.ಕೆ.ಕೇಶವಮೂರ್ತಿ ಅವರು ಸಂಗ್ರಹಿಸಿಟ್ಟುಕೊಂಡಿರುವ ‘ಪ್ರಾಚೀನ ನಾಣ್ಯಗಳ ಪ್ರದರ್ಶನ’ವನ್ನು 215 ಮಕ್ಕಳು ಸೇರಿದಂತೆ 1,445 ಮಂದಿ ಕಣ್ತುಂಬಿಕೊಂಡರು.

ಹಲವು ಮಕ್ಕಳು ಕುತೂಹಲದಿಂದ ಕೇಶವಮೂರ್ತಿ ಅವರ ಬಳಿ ನಾಣ್ಯಗಳ ಇತಿಹಾಸವನ್ನು ಕೇಳಿ ತಿಳಿದುಕೊಂಡರು. ಹಲವು ಮಂದಿ ನಾಣ್ಯಗಳ ಸಂಗ್ರಹ ಹೇಗೆ ಮಾಡುವುದು? ಅವುಗಳು ಯಾವ ಕಾಲದವು? ಎಂಬ ಪ್ರಶ್ನೆಗಳನ್ನು ಕೇಳಿದರು. ಡಾ.ಎಂ.ಜಿ.ಪಾಟ್ಕರ್ ಅವರು ಪ್ರದರ್ಶನ ಉದ್ಘಾಟಿಸಿದರು. ಶ್ರೀಮತಿ ಪಾಟ್ಕರ್, ಸರ್ಕಾರಿ ವಸ್ತು ಸಂಗ್ರಹಾಲಯದ ಕ್ಯೂರೇಟರ್ ಬಿ.ಪಿ.ರೇಖಾ ಭಾಗವಹಿಸಿದ್ದರು.

ಸಂಗ್ರಹದಲ್ಲಿ ಏನೇನಿತ್ತು? ಕ್ರಿ.ಪೂ. 5ನೇ ಶತಮಾನದಲ್ಲಿ ಬಳಕೆಗೆ ಬಂದ ಭಾರತದ ಮೊಟ್ಟಮೊದಲ ಪಂಚ್ಮಾರ್ಕ್ ನಾಣ್ಯಗಳಿಂದ ಹಿಡಿದು ಇತ್ತೀಚಿನ ನಾಣ್ಯಗಳವರೆಗಿನ ಸಂಗ್ರಹ ಅಲ್ಲಿತ್ತು. ಗ್ರೀಕ್, ರೋಮನ್, ಕುಶಾನರು, ಗುಪ್ತ, ಶಾತವಾಹನ, ಕದಂಬ, ಚೋಳ, ಪಾಂಡ್ಯರ ಕಾಲದ ಅಪರೂಪದ ನಾಣ್ಯಗಳು ನೋಡುಗರನ್ನು ಸೆಳೆದವು.

ಮೊಘಲ್ ಸಾಮ್ರಾಜ್ಯದ ಅಕ್ಬರ್, ಜಹಂಗೀರ್, ಷಹಜಹಾನ್, ಔರಂಗಜೇಬ್ ಕಾಲದ ನಾಣ್ಯಗಳು, ಮೈಸೂರು, ವಿಜಯಪುರ, ತಿರುವಾಂಕೂರು, ಹೈದರಾಬಾದ್, ಕಚ್, ಬರೋಡ, ಗ್ವಾಲಿಯರ್, ಮೇವಾರ ಮೊದಲಾದ ಭಾರತೀಯ ಸಂಸ್ಥಾನಗಳ ನಾಣ್ಯಗಳು ಸೂಜಿಗಲ್ಲಿನಂತೆ ಸೆಳೆದವು.

ಇದಲ್ಲದೇ ನೂರಾರು ದೇಶ, ವಿದೇಶಗಳ ವೈವಿಧ್ಯಮಯ ನಾಣ್ಯ, ನೋಟುಗಳು ಪ್ರದರ್ಶನದಲ್ಲಿದ್ದವು. ತಾಮ್ರ, ಬೆಳ್ಳಿ, ಚಿನ್ನ, ಸೀಸ, ಹಿತ್ತಾಳೆ ಮೊದಲಾದ ಲೋಹಗಳ ಅಮೂಲ್ಯ ಹಾಗೂ ದುಬಾರಿ ಬೆಲೆಯ ನಾಣ್ಯಗಳನ್ನು ವೀಕ್ಷಕರು ಕಂಡು ವಿಸ್ಮಿತಗೊಂಡರು. ಜಗತ್ತಿನ ಬೇರೆ ಬೇರೆ ದೇಶಗಳ ಚಿನ್ನದಿಂದ ಮಾಡಿದ ನೋಟುಗಳು ಹಾಗೂ ಇತ್ತೀಚಿನ ಪ್ಲಾಸ್ಟಿಕ್ ನೋಟುಗಳೂ ಗಮನ ಸೆಳೆದವು. ವಿಚಿತ್ರಾಕಾರದ ನಾಣ್ಯಗಳು ಸಹ ಮಕ್ಕಳನ್ನು ಸೆಳೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.