ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕು ಕಡೆ ಗಂಜಿ ಕೇಂದ್ರ ಆರಂಭ

Last Updated 17 ಆಗಸ್ಟ್ 2018, 14:53 IST
ಅಕ್ಷರ ಗಾತ್ರ

ಸುಂಟಿಕೊಪ್ಪ: ಸುತ್ತಮುತ್ತಲಿನ ಗ್ರಾಮಗಳ ಸಂತ್ರಸ್ತರಿಗೆ ಇಲ್ಲಿನ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪ, ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆ, ಸಂತ ಅಂತೋಣಿ ಶಾಲೆ, ಖತೀಜ ಉಮ್ಮ ಮದರಸಾ ಹಾಲ್‌ಗಳಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ.

ಸಮೀಪದ ಹಾಲೇರಿ, ಕಾಂಡನಕೊಲ್ಲಿ, ಬಪ್ಪಕುಚ್ಚಿ, ಹಟ್ಟಿಹೊಳೆ, ನಂದಿಮೊಟ್ಟೆ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳು ಅಪಾಯದ ಅಂಚಿನಲ್ಲಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಆ ಭಾಗದ ಸಂತ್ರಸ್ತರಿಗೂ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪ, ಸಂತ ಮೇರಿ, ಸಂತ ಅಂತೋಣಿ ಶಾಲೆ, ಖತೀಜ ಉಮ್ಮ ಮದರಸಾ, ವಿಎಸ್ಎಸ್ಎನ್ ಸಭಾಂಗಣ, ವಿಜಯಾ ಪ್ಲಾಂಟೇಷನ್ ಸಂಕೀರ್ಣ, ಪನ್ಯ ತೋಟದ ಮಾಲೀಕರ ತೋಟದ ಮನೆಗಳಲ್ಲಿ ಆಶ್ರಯದ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ.

ಮಾನವೀಯತೆ ಮೆರೆದರು: ಸುಂಟಿಕೊಪ್ಪದ ಸಾರ್ವಜನಿಕರು ಸಂತ್ರಸ್ತರಿಗೆ ಬೇಕಾದ ಅಕ್ಕಿ, ಬೆಡ್‌ಶೀಟ್, ಬಟ್ಟೆ ಸೇರಿದಂತೆ ಇತರ ವಸ್ತುಗಳನ್ನು ಸಂತ್ರಸ್ತರಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ. ಶುಕ್ರವಾರ ಸಂಜೆ ವೇಳೆಗೆ ಸುಮಾರು 63 ಕುಟುಂಬಗಳು, 1700 ಜನ ಸಂತ್ರಸ್ತರು ಸುಂಟಿಕೊಪ್ಪದಲ್ಲಿ ಆಶ್ರಯ ಪಡೆದಿದ್ದಾರೆ.

ಕೊಡಗು ಸಹಾಯವಾಣಿ:08272 221077
ಜಿಲ್ಲಾಧಿಕಾರಿ:Pi Shreevidya - 94826 28409
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ:Summan D. -94808 04901

ಇದನ್ನೂ ಓದಿ ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT