ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಡಿಕೇರಿ: 27,468 ವಿದ್ಯಾರ್ಥಿಗಳಿಗೆ 6 ದಿನ ಕೋಳಿ ಮೊಟ್ಟೆ

2 ದಿನಗಳ ಕಾಲದ ಪೂರಕ ಪೌಷ್ಟಿಕ ಆಹಾರ ಕಾರ್ಯಕ್ರಮ ಆರು ದಿನಗಳಿಗೆ ವಿಸ್ತರಣೆ
Published : 26 ಸೆಪ್ಟೆಂಬರ್ 2024, 4:46 IST
Last Updated : 26 ಸೆಪ್ಟೆಂಬರ್ 2024, 4:46 IST
ಫಾಲೋ ಮಾಡಿ
Comments

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿರುವ ಸರ್ಕಾರಿ ಮತ್ತು ಅನುದಾನಿತ 463 ಶಾಲೆಗಳಲ್ಲಿನ 27,468 ವಿದ್ಯಾರ್ಥಿಗಳಿಗೆ ವಾರದ 6 ದಿನಗಳ ಕಾಲ ಕೋಳಿಮೊಟ್ಟೆ ಅಥವಾ ಚಿಕ್ಕಿ ಅಥವಾ ಬಾಳೆಹಣ್ಣು ವಿತರಿಸುವ ಕಾರ್ಯಕ್ರಮಕ್ಕೆ ಇಲ್ಲಿನ ಪಿಎಂಶ್ರೀ ಜಿಎಂಪಿ ಶಾಲೆಯಲ್ಲಿ ಚಾಲನೆ ನೀಡಲಾಯಿತು.

ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ರಂಗಧಾಮಪ್ಪ, ‘ಇದುವರೆಗೂ ಸರ್ಕಾರ 2 ದಿನಗಳ ಪೂರಕ ಪೌಷ್ಠಿಕ ಆಹಾರವನ್ನು ನೀಡುತ್ತಿತ್ತು. ಬೆಂಗಳೂರಿನ ಅಜೀಂ ಪ್ರೇಮ್‌ಜಿ ಫೌಂಡೇಷನ್‌ ಅವರ ಸಹಯೋಗದೊಂದಿಗೆ ಇನ್ನು ಮುಂದೆ ವಾರದ 6 ದಿನಗಳ ನೀಡಲಾಗುವುದು. ಕೋಳಿಮೊಟ್ಟೆ ತಿನ್ನದವರಿಗೆ ಚಿಕ್ಕಿ ಅಥವಾ ಬಾಳೆಹಣ್ಣು ವಿತರಿಸಲಾಗುವುದು’ ಎಂದರು. ಈ ಯೋಜನೆ 3 ವರ್ಷಗಳವರೆಗೆ ಜಾರಿಯಲ್ಲಿರಲಿದೆ.

ಈ ವೇಳೆ ಅಕ್ಷರ ದಾಸೋಹದ ಶಿಕ್ಷಣಾಧಿಕಾರಿ ಶಶಿಕಲಾ, ಸಹಾಯಕ ನಿರ್ದೇಶಕ ಹೇಮಂತಕುಮಾರ್, ಶಿಕ್ಷಕಿಯರಾದ ಸುಶೀಲಾ, ಮಂಜುಳಾ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT