ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಏಕತೆ ಉಳಿವೇ ಮುಖ್ಯ: ನೌಫಲ್ ಸಖಾಫಿ ಕಳಸ

ಅಂಬಟಿ ದರ್ಗಾ ಉರುಸ್ ಸಮಾರೋಪ
Published 25 ಫೆಬ್ರುವರಿ 2024, 4:29 IST
Last Updated 25 ಫೆಬ್ರುವರಿ 2024, 4:29 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ‘ಸರ್ವಧರ್ಮ ಸಮನ್ವಯತೆ ಮತ್ತು ಸಹೋದರತೆಯ ಆಧಾರದ ಮೇಲೆ ದೇಶದ ಏಕತೆಯನ್ನು ಉಳಿಸಿಕೊಂಡು ಬರುವ ಹೊಣೆಗಾರಿಕೆ ಎಲ್ಲರ ಹಾಗೂ ಪ್ರತಿಯೊಂದು ಧರ್ಮದವರ ಮೇಲಿದೆ’ ಎಂದು ಧಾರ್ಮಿಕ ವಿದ್ವಾಂಸ ನೌಫಲ್ ಸಖಾಫಿ ಕಳಸ ಹೇಳಿದರು.

ಅಂಬಟ್ಟಿ ದರ್ಗಾ ಶರೀಫಿನ ಶೇಖ್ ವಲಿಯುಲ್ಲಾಹಿ ಮಖಾಂ ಉರುಸ್‌ನ ಸಮಾರೋಪ ಸಮಾಂಭದಲ್ಲಿ ಈಚೆಗೆ ಮಾತನಾಡಿದ ಅವರು, ‘ದ್ವೇಷದಿಂದ ಸಮಾಜದಲ್ಲಿ ಯಾರಿಗೂ ಏನನ್ನು ಸಾಧಿಸಲು ಸಾಧ್ಯವಿಲ್ಲ. ಎಲ್ಲಾ ಧರ್ಮಗಳು ಸಹೋದರತೆಯನ್ನು ಎತ್ತಿ ಹಿಡಿದಿವೆ. ಆದರೆ, ಅದು ನಿರೀಕ್ಷಿತ ಪ್ರಮಾಣದಲ್ಲಿ ಜಾರಿಯಾಗುತ್ತಿಲ್ಲ. ಪ್ರತಿಯೊಬ್ಬರಲ್ಲೂ ಸಹೋದರತೆಯ ಮನೋಭಾವ ಮೂಡಿದರೆ ಸಮಾಜದಲ್ಲಿ ಸಂಘರ್ಷದ ವಾತಾವರಣವೇ ಇರುವುದಿಲ್ಲ’ ಎಂದರು.

ಅಂಬಟ್ಟಿ ಜಮಾಅತ್‌ನ ಅಧ್ಯಕ್ಷ ಎ.ಎಚ್. ಸಾದುಲಿ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಅಕ್ಕಳತಂಡ ಎಸ್.ಮೊಯ್ದು, ಕಾಂಗ್ರೆಸ್ ಹಿರಿಯ ಮುಖಂಡ ಮಳವಂಡ ಅರವಿಂದ ಕುಟ್ಟಪ್ಪ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಪಿ.ಎ.ಹನೀಫ್, ಅಂಬಟ್ಟಿ ಖಾಲಿದ್ ಫೈಝಿ, ಕೋಳುಮಂಡ ರಫೀಕ್, ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಚಂಗೇಟ್ಟಿರ ರಾಜ ಸೋಮಯ್ಯ, ಜಮಾಅತ್ ಮಾಜಿ ಅಧ್ಯಕ್ಷ ಕೆ.ಎ.ಯುಸೂಫ್, ಹಿರಿಯರಾದ ಕೆ.ಎ.ಆಲಿ, ಜಮಾಅತ್ ಕಾರ್ಯದರ್ಶಿ ಜುಬೈರ್ ಅಹ್ಮದ್, ಅಂಬಟ್ಟಿ ಜಮಾಅತ್‌ನ ಆಡಳಿತ ಮಂಡಳಿ ಸಹ ಕಾರ್ಯದರ್ಶಿ ಆಶಿಕ್ ಶರೀಫ್, ಮಸೀದಿಯ ಸದರ್ ಉಸ್ತಾದ್ ಅಶ್ರಫ್ ಹಳ್ರಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT