ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಾದಾಪುರ; ಭಾನುವಾರ ತೆರೆಯದ ಗ್ರಂಥಾಲಯ; ಓದುಗರಿಗೆ ನಿರಾಸೆ

Published 16 ಜೂನ್ 2024, 16:17 IST
Last Updated 16 ಜೂನ್ 2024, 16:17 IST
ಅಕ್ಷರ ಗಾತ್ರ

ಸುಂಟಿಕೊಪ್ಪ: ಸಮೀಪದ ಮಾದಾಪುರ ಗ್ರಾಮ ಪಂಚಾಯಿತಿ ಗ್ರಂಥಾಲಯದ ಕಚೇರಿಯ ಕೆಲಸದ ಅವಧಿಯೇ ಓದುಗರಿಗೆ ಸಿಗದಂತಾಗಿದ್ದು, ಗ್ರಂಥಪಾಲಕರ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ.

ಪ್ರತಿ ಸೋಮವಾರ ಗ್ರಂಥಾಲಯದ ವಾರದ ರಜೆ ಹಾಗೆಯೇ ತಿಂಗಳಿನ ಮೊದಲ ಮಂಗಳವಾರ ಹಾಗೂ 4ನೇ ಮಂಗಳವಾರ ರಜಾ ದಿನವಾಗಿದೆ. ಆದರೆ, ಮಾದಾಪುರ ಗ್ರಂಥಾಲಯಕ್ಕೆ ನಾಮಫಲಕವೇ ಇಲ್ಲ. ಭಾನುವಾರ ಕರ್ತವ್ಯದ ದಿನವಾದರೂ ಸಿಬ್ಬಂದಿ ಬಾಗಿಲು ತೆಗೆಯುವುದೇ ಇಲ್ಲ.

ಭಾನುವಾರ ಶಾಲಾ ಮಕ್ಕಳು, ಉದ್ಯೋಗಿಗಳು ಗ್ರಂಥಾಲಯಕ್ಕೆ ಬಂದರೆ ಬೀಗ ಹಾಕಲಾಗಿರುತ್ತದೆ. ಈ ಬಗ್ಗೆ ಕೂಡಲೇ ಮಾದಾಪುರ ಗ್ರಾಮ ಪಂಚಾಯಿತಿ ಆಡಳಿತ ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿಗಳಾದ ರಮ್ಯಾ, ಸುರೇಶ್, ಬಾಲು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT